Advertisement

ಇನ್ಮುಂದೆ ಕೇರಳ ಮತ್ತು ಗೋವಾದಿಂದ ಕರ್ನಾಟಕಕ್ಕೆ ಬರುವವರಿಗೆ ಆರ್‌ಟಿ-ಪಿಸಿಆರ್ ಬೇಡ

06:02 PM Feb 17, 2022 | Team Udayavani |

ಬೆಂಗಳೂರು : ಕೇರಳ ಮತ್ತು ಗೋವಾದಿಂದ ಬರುವ ಪ್ರಯಾಣಿಕರ ಕಡ್ಡಾಯ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯ ಷರತ್ತನ್ನು ಕರ್ನಾಟಕ ಸರ್ಕಾರ ಗುರುವಾರ ತೆಗೆದುಹಾಕಿದೆ.

Advertisement

“ಕೇರಳ ಮತ್ತು ಗೋವಾದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು, ಎಲ್ಲಾ ಸಾರಿಗೆ ವಿಧಾನಗಳ ಮೂಲಕ, ಇನ್ನು ಮುಂದೆ ನೆಗೆಟಿವ್ ಆರ್‌ಟಿ-ಪಿಸಿಆರ್ ವರದಿಯ ಅಗತ್ಯವಿಲ್ಲ” ಎಂದುಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಕಳೆದ ವಾರ ಮಹಾರಾಷ್ಟ್ರದ ಪ್ರಯಾಣಿಕರಿಗೆ ಈ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ, ಈ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಲಸಿಕೆ ಪ್ರಮಾಣ ಪತ್ರ ಕಡ್ಡಾಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಡಿಸೆಂಬರ್ 2021 ರ ಕೊನೆಯ ವಾರದಿಂದ ಪ್ರಾರಂಭವಾದ ಕೋವಿಡ್-19 ನ ಮೂರನೇ ಅಲೆಯ ನಂತರ, ಸರ್ಕಾರವು ನಿರ್ಬಂಧಗಳನ್ನು ವಿಧಿಸಿತ್ತು ಮತ್ತು ಕೋವಿಡ್ ಲಸಿಕೆಯ ಡಬಲ್ ಡೋಸ್ ಜೊತೆಗೆ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next