Advertisement
ತುಮಕೂರು: ಮಹಾಮಾರಿ ಕೋವಿಡ್ ಅಕ್ಕ ಪಕ್ಕದ ರಾಜ್ಯ, ಜಿಲ್ಲೆಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಜಿಲ್ಲೆಯ ಜನತೆಗೂಆತಂಕ ಎದುರಾಗಿದೆ. ಪರಿಸ್ಥಿತಿ ಹೀಗಿದ್ದರೂ ಜನ ಕೋವಿಡ್ ನಿಯಮ ಮೀರಿ ಎಗ್ಗಿಲ್ಲದೇ ವಾಹನಗಳಲ್ಲಿ ಸಂಚಾರ ಹೆಚ್ಚಿದೆ. ಪ್ರವಾಸಿ ಕೇಂದ್ರ,
ದೇಗುಲಗಳಿಗೆ ಭೇಟಿ ಸಾಮಾನ್ಯವಾಗಿದೆ.
ಸರ್ಕಾರ ಕೋವಿಡ್ 2ನೇ ಅಲೆ ಕಡಿಮೆಯಾಯಿತು ಎಂದು ಲಾಕ್‌ಡೌನ್ ಅನ್ನು ಜಿಲ್ಲಾಡಳಿತ ತೆಗೆದ ಮೇಲೆ ಜನ ಕೋವಿಡ್ ದೂರವಾಗಿದೆ ಎನ್ನುವ ಭಾವನೆಯಿಂದ ಮುಖಕ್ಕೆ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರಕಾಯ್ದುಕೊಳ್ಳದೇ ಕೋವಿಡ್ ಮರೆತು ಲೀಲಾ ಜಾಲವಾಗಿ ವಾಹನ
ಗಳಲ್ಲಿ ಎಂದಿನಂತೆ ಸಂಚಾರ ಮಾಡುತ್ತಿದ್ದರು. ಇದನ್ನೂ ಓದಿ:250 ಅಭ್ಯರ್ಥಿಗಳಿಗೆ ಸೇನಾ ತರಬೇತಿ; 225 ಬಾಲಕ-25 ಬಾಲಕಿಯರು ಆಯ್ಕೆ
Related Articles
Advertisement
ಮುಗಿ ಬಿದ್ದಿದ್ದಾರೆ:ಇನ್ನು ಆಟೋ ರಿಕ್ಷಾಗಳಿಗೆ ಕೋವಿಡ್ ಮರೆತು ಮಾಸ್ಕ್ ಇಲ್ಲದೇ ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ. ಆಟೋ ತುಂಬಾನಾಲ್ಕೆದು ಜನರನ್ನು ಕೂರಿಸಿಕೊಂಡು ಸಂಚಾರ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇನ್ನು ದಿನಸಿ,ಹಾಲು, ತರಕಾರಿ, ಮಾಂಸದ ಅಂಗಡಿಗಳು ವ್ಯಾಪಾರ ವಹಿವಾಟು ಎಂದಿನಂತೆ ಇದೆ. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಇರುವ ಹಿನ್ನಲೆ ಬಟ್ಟೆ, ದಿನಸಿ ಅಂಗಡಿಗಳಲ್ಲಿ ಜನಖರೀದಿಗೆ ಮುಗಿಬಿದ್ದಿದ್ದಾರೆ. ನಗರದ ಎಂ.ಜಿ.ರಸ್ತೆ,ಬಿ.ಎಚ್. ರಸ್ತೆ, ಮಂಡಿ ಪೇಟೆ, ಎಸ್. ಎಸ್.ಪುರಂ, ಸೇರಿದಂತೆ ವಿವಿಧ ರಸ್ತೆ, ಮಾರುಕಟ್ಟೆಗಳಲ್ಲಿ ಜನವೋ ಜನ ಕಂಡು ಬರುತ್ತಿದ್ದಾರೆ. ಖಾಸಗಿ, ಸಾರಿಗೆ ಬಸ್, ನಗರ ಸಾರಿಗೆ ಬಸ್‌ಗಳ ಸಂಚಾರ ಹೆಚ್ಚಿಸಿವೆ. ಆಟೋರಿಕ್ಷಾ, ಕಾರು, ಬೈಕ್ ಸಂಚಾರದಿಂದ ನಗರದ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಂಚಾರ ದಟ್ಟಣೆ ಗಮನಿಸಿದರೆ ನಗರದಲ್ಲಿ ಯಾವಾಗ ಮತ್ತೆ ಕೋವಿಡ್ ಹೆಚ್ಚಿಬಿಡುತ್ತೋ ಎನ್ನುವ ಆತಂಕ ಎದುರಾಗಿದೆ. ನೆಗೆಟಿವ್ ವರದಿ ಕಡ್ಡಾಯ
ಹೊರ ರಾಜ್ಯಗಳಲ್ಲಿ ಕೋವಿಡ್ ಮಹಾಮಾರಿ ತೀವ್ರವಾಗುತ್ತಿರುವ ಹಿನ್ನಲೆ ಜಿಲ್ಲೆಗೆ ಹೊರ ರಾಜ್ಯದಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಪತ್ರ ಕಡ್ಡಾಯ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ. ಹೊರ ರಾಜ್ಯದವರು ಜಿಲ್ಲೆಯ ವಸತಿ ಗೃಹಗಳಲ್ಲಿ ತಂಗಲು72 ಗಂಟೆಯೊಳಗೆ ಆರ್‌ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಪತ್ರ ಕಡ್ಡಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರಜಾ ದಿನ ನಿರ್ಬಂಧ
ಶ್ರಾವಣಮಾಸ ಹಿನ್ನಲೆ ದೇವಾಲಯಗಳಿಗೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಕೋವಿಡ್ ಮೂರನೇ ಅಲೆಭೀತಿ ಕಾಡುತ್ತಿದೆ. ಹೀಗಾಗಿ ಜಿಲ್ಲೆಯ ದೇಗುಲ, ಪ್ರೇಕ್ಷಣೀಯ ಸ್ಥಳಗಳಿಗೆ ಶ್ರಾವಣ ಮಾಸದ ವಿಶೇಷ ದಿನ, ರಜಾ ದಿನಗಳಂದು ಪ್ರವೇಶ ನಿರ್ಬಂಧಿಸಲಾಗಿದೆ. ಶನಿವಾರ,ಭಾನುವಾರ, ಸೋಮವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಮುಜರಾಯಿ,ಖಾಸಗಿ ಸೇರಿ ಜಿಲ್ಲೆಯ ಎಲ್ಲಾ ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ. ಕ್ರಮಕ್ಕೆ ಸೂಚನೆ
ದೇಶದವಿವಿಧ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ 3ನೇ ಅಲೆ ಅಬ್ಬರಿಸುತ್ತಿದೆ. ಎರಡನೇ ಅಲೆ ಕಡಿಮೆಯಾದ ಹಿನ್ನಲೆಯಲ್ಲಿ ಸರ್ಕಾರಜನರಿಗೆ ತೊಂದರೆ ಯಾಗಬಾರದು ಎಂದು ರಾಜ್ಯವನ್ನು ಅನ್‌ಲಾಕ್ ಮಾಡಿದೆ. ಜನ ಕೋವಿಡ್ ಮರೆತು ನಿಯಮ ಪಾಲಿಸದೇ ಎಲ್ಲೆಂದರಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ದಿನೇ ದಿನೆ ಕಡಿಮೆ ಯಾಗುತ್ತಿರುವ ಕೋವಿಡ್, ಮತ್ತೆ ತನ್ನ ಆರ್ಭಟತೋರದೇಬಿಡದು.ಈ ಬಗ್ಗೆ ಜಿಲ್ಲಾಡಳಿತ
ಕ್ರಮ ವಹಿಸಬೇಕಿದೆ. ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲೇಬೇಕಾಗಿದೆ. ಕೊರೊನಾ ನಿಯಮ ಪಾಲಿಸಲು ಅಗತ್ಯ ಕ್ರಮ ಮಹಿಸಲು ಮುಂದಾಗಬೇಕಿದೆ. ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆಕಡಿಮೆಯಾಗುತ್ತಿದೆ. ಪ್ರತಿ ದಿನವೂ ಪರೀಕ್ಷೆ ಮಾಡುತ್ತಿದ್ದೇವೆ. ಕೋವಿಡ್ ಪಾಸಿವಿಟಿ ದರ
ಶೇ.1. ಇದ್ದು ಜನ ನಿಯಮ ಪಾಲಿಸದಿದ್ದರೆ ಹೆಚ್ಚಾಗುವ ಸಾಧ್ಯತೆ ಇದೆ. ಜನ ಸಂದಣಿ ಸೇರಬಾರದು. ನಿತ್ಯ 7ಸಾವಿರ ಪರೀಕ್ಷೆ ಮಾಡಲಾಗುತ್ತಿದ್ದು ಜನ ಕೋವಿಡ್ ನಿಯಮವನ್ನು ತಪ್ಪದೇ ಪಾಲಿಸಬೇಕು.
-ಡಾ.ಎಂ.ಬಿ.ನಾಗೇಂದ್ರಪ್ಪ, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೋವಿಡ್ ಹೆಚ್ಚಳವಾಗುವ ಭೀತಿ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹೊರಡಿಸಿರುವ ನಿಷೇಧ ಅದೇಶವನ್ನು ಉಲ್ಲಘಿಸಿ ನಿರ್ಬಂಧಿತ ದಿನಗಳಂದು ಪ್ರೇಕ್ಷಣೀಯ ಸ್ಥಳ,ಮಂದಿರಗಳಿಗೆ ತೆರಳಿದ್ದೇ ಆದಲ್ಲಿ ವಿಪತ್ತು ನಿರ್ವಹಣಾಕಾಯ್ದೆ ಅನ್ವಯಕ್ರಮ ಜರುಗಿಸಲಾಗವುದು
– ವೈ.ಎಸ್.ಪಾಟೀಲ್,ಜಿಲ್ಲಾಧಿಕಾರಿ -ಚಿ.ನಿ.ಪುರುಷೋತ್ತಮ್.