Advertisement

ಕಗ್ಗತ್ತಲಲ್ಲಿ ಅರಕಲಗೂಡು ಪ್ರವಾಸಿ ಮಂದಿರ

04:00 PM Feb 06, 2023 | Team Udayavani |

ಅರಕಲಗೂಡು: ಪಟ್ಟಣದ ಪ್ರವಾಸಿ ಮಂದಿರ ಹಾಗೂ ತಾಲೂಕಿನ ದೇವಾಲಯಗಳ ತವರುರಾಮನಾಥಪುರದ ಪ್ರವಾಸಿ ಮಂದಿರನಿರ್ವಹಣೆ ಕೊರತೆಯಿಂದಾಗಿ ಬಳಲುತ್ತಿದ್ದುಕಳೆದ ಒಂದು ತಿಂಗಳಿಂದ ವಿದ್ಯುತ್‌ಕಡಿತಗೊಂದಿದ್ದು, ರಾತ್ರಿ ವೇಳೆ ಈ ಪ್ರವಾಸಿಮಂದಿರಗಳಲ್ಲಿ ಕತ್ತಲೆ ಕವಿದಿದೆ.

Advertisement

ತಾಲೂಕು ಕೇಂದ್ರದ ಪ್ರವಾಸಿ ಮಂದಿರದನಿರ್ವಹಣೆ ಹೊಣೆ ಲೋಕೋಪ ಯೋಗಿಇಲಾಖೆ ವಹಿಸಿಕೊಂಡಿದೆ. ಸಾಲದೆಂಬಂತೆಪಟ್ಟಣದ ಲೋಕೋಪಯೋಗಿ ಇಲಾಖೆಕಚೇರಿಗೆ ಹೊಂದಿಕೊಂಡಂತೆ ಇದೆ. ವಿದ್ಯುತ್‌ಸಂಪರ್ಕ ಕೂಡ ಕಡಿತಗೊಂಡಿ ಲ್ಲ. ಅದೇಕೋಪ್ರವಾಸಿ ಮಂದಿರಕ್ಕೆ ಮಾತ್ರ ನಿರ್ವಹಣೆಕೊರ ತೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ.

ಒಂದು ತಿಂಗಳಿಂದ ವಿದ್ಯುತ್‌ ಇಲ್ಲ: ಹಾಸನ- ಹೊಳೆನರಸೀಪುರ ಮಾರ್ಗದಮುಖ್ಯ ರಸ್ತೆ ಬದಿಯಿರುವ ಪಟ್ಟಣದ ಪ್ರವಾಸಿ ಮಂದಿರ ಕಳೆದ ಒಂದುತಿಂಗಳಿನಿಂದ ವಿದ್ಯುತ್‌ ಇಲ್ಲದೆ ರಾತ್ರಿ ವೇಳೆಕತ್ತಲೆಯಲ್ಲಿ ಮುಳುಗಿದೆ. ಕಾವೇರಿ ನದಿದಂಡೆ ಮೇಲಿರುವ ರಾಮನಾಥಪುರದ ಪ್ರವಾಸಿ ಮಂದಿ ರ ಕೂಡ ಕಳೆದ ಆರುತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿಸದೆವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದ್ದುರಾತ್ರಿ ವೇಳೆ ಬೂತದ ಬಂಗಲೆಯಾಗಿ ಮಾರ್ಪಾಡಾಗಿದೆ.

ನಿರ್ವಹಣೆ ಇಲ್ಲ : ವಿದ್ಯುತ್‌ ಸೌಲಭ್ಯ ಇಲ್ಲದ ಕಾರಣ ಪ್ರವಾಸಿ ಮಂದಿರಕ್ಕೆ ಬರುವ ಜನರುಬೇಸರ ವ್ಯಕ್ತಪಡಿಸುತ್ತಿದ್ದು ಹಿಡಿಶಾಪ ಹಾಕುತ್ತಿದ್ದಾರೆ. ಅರಕಲಗೂಡು ಪ್ರವಾಸಿ ಮಂದಿರದಶಾಸಕರ ಕೊಠಡಿಗೆ ಹೊಂದಿಕೊಂಡಂತೆ ಪಕ್ಕದಲ್ಲಿರುವ ಶೌಚಗೃಹ ಪಿಟ್‌ಗುಂಡಿ ಮಳೆಗಾಲದಲ್ಲಿ ಉಕ್ಕಿ ಹರಿಯುತ್ತದೆ. ಕಳೆದ ವರ್ಷ ಮಳೆಗಾಲದಲ್ಲಿ ಶೌಚಗೃಹದ ಪಿಟ್‌ಗುಂಡಿಕಟ್ಟಿಕೊಂಡು ಪ್ರವಾಸಿ ಮಂದಿರಕ್ಕೆ ಕಲುಷಿತನೀರು ನುಗ್ಗಿ ಅವಾಂತರ ಸೃಷ್ಟಿಸಿತ್ತು. ಪ್ರವಾಸಿಮಂದಿರದ ಸಿಬ್ಬಂದಿ ಶೌಚಗೃಹ ಪಕ್ಕದಲ್ಲಿಚರಂಡಿ ತೋಡಿ ಹೊರ ಕಳಿಸಿ, ಮಂದಿರದಲ್ಲಿಜಲಾವೃತವಾಗಿದ್ದ ಕಲುಷಿತ ನೀರನ್ನು ತೋಡಿ ಹೊರ ಹಾಕುವಷ್ಟರಲ್ಲಿ ಸುಸ್ತು ಹೊಡೆಸಿತ್ತು.

ಅಲ್ಲದೆ ಸಿಬ್ಬಂದಿ ವಾಸವಿರುವ ಮನೆ ಪಕ್ಕ, ಅಂದರೆ ಬೆಸ್ತರ ಬೀದಿ ಕಡೆಯ ಕಾಂಪೌಂಡ್‌ಬಿದ್ದುಹೋಗಿ ವರ್ಷಗಳೇ ಕಳೆದಿವೆ ಇದನ್ನುಸರಿಪಡಿಸುವ ಕೆಲಸವನ್ನು ಲೋಕೋ ಪ ಯೋಗಿಇಲಾ ಖೆ ಎಂಜಿನಿಯರ್‌ ಮುಂದಾಗಿಲ್ಲ.ಭೂತದ ಬಂಗಲೆಂತಾಗಿದೆ: ದಕ್ಷಿಣ ಕಾಶಿರಾಮನಾಥಪುರದಲ್ಲಿ ಕಳೆದೆರಡು ತಿಂಗಳಿನಿಂದ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿದೇವಸ್ಥಾನದ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಶ್ರೀ ಕ್ಷೇತ್ರಕ್ಕೆ ಪ್ರವಾಸಿಗರುಆಗಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ಹೊರಜಿಲ್ಲೆಗಳಿಂದ ಬರುವ ಗಣ್ಯರು ಪ್ರವಾಸಿ ಮಂದಿ ರದಲ್ಲಿ ಉಳಿದುಕೊಳ್ಳುತ್ತಾರೆ. ಆದರೆ, ರಾತ್ರಿ ವೇಳೆ ಕರೆಂಟ್‌ ಇಲ್ಲದ ಕಾರಣಮಂದಿರದತ್ತ ಸುಳಿಯುತ್ತಿಲ್ಲ. ನದಿ ದಂಡೆಮೇಲಿರುವ ಕಾರಣ ಭಯಪಡುವಂತಾಗಿದ್ದು ಪ್ರವಾಸಿ ಮಂದಿರ ಭೂತದ ಬಂಗಲೆಂತಾಗಿದೆ.

Advertisement

ಸರ್ಕಾರ ಸಾರ್ವಜನಿಕರ ತೆರಿಗೆ ಹಣದಿಂದ ಕೋಟಿಗಟ್ಟಲೆ ಅನುದಾನ ವ್ಯಯಿಸಿನಿರ್ಮಿಸಿರುವ ಪ್ರವಾಸಿ ಮಂದಿರಗಳುಪ್ರವಾಸಿಗರ ಪಾಲಿಗೆ ನಿರುಪಯುಕ್ತವಾಗುತ್ತಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳುಹಾಗೂ ಶಾಸಕರು ಇತ್ತ ಗಮನ ಹರಿಸಿವಿದ್ಯುತ್‌ ಬಿಲ್‌ ಪಾವತಿಸಿ ಕರೆಂಟ್‌ ಸಂಪರ್ಕಕೊಡಿಸಲು ಮನಸ್ಸು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಸರ್ಕಾರಿ ಕಚೇರಿಗಳಿಗೆ ಹಾಗೂ ಸರ್ಕಾರಿ ಕಟ್ಟಡಕ್ಕೆ ವಿದ್ಯುತ್‌ ಕೊಡಿಸಲಾಗದ ಶಾಸಕರು ಯಾಕಿರ ಬೇಕು? ಇನ್ನು ಶಾಸಕರು ಸಾರ್ವಜನಿಕರ ಕೆಲಸ ಹೇಗೆ ಮಾಡಿಸುತ್ತಾರೆ. ಪ್ರವಾಸಿ ಮಂದಿರಕ್ಕೆ ತೆರಳಿದರೆವಿದ್ಯುತ್‌ ಇಲ್ಲ, ಅಲ್ಲಿಯ ಸಿಬ್ಬಂದಿ ಅಸಹಾಯಕತೆತೋಡಿಕೊಳ್ಳುತ್ತಾರೆ. ತಾಲೂಕಿನ ಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎ. ಮಂಜು, ಮಾಜಿ ಸಚಿವ

ಅರಕಲಗೂಡು ಪ್ರವಾಸಿ ಮಂದಿರದ ವಿದ್ಯುತ್‌ ಬಿಲ್‌ ಆಗಾಗ ಪಾವತಿಸಲಾಗುತ್ತಿತ್ತು. ಕಳೆದಮೂರು ತಿಂಗಳಿಂದ ವಿದ್ಯುತ್‌ ಬಿಲ್‌ ಪಾವತಿಸಿಲ್ಲ, 35ಸಾವಿರ ರೂ. ಬಾಕಿ ಇದೆ. ರಾಮನಾಥಪುರ ಪ್ರವಾಸಿಮಂದಿರದ ವಿದ್ಯುತ್‌ ಬಿಲ್‌ 15 ಸಾವಿರ ರೂ. ಬಾಕಿಇದೆ. ಸರ್ಕಾರ ಅನುದಾನ ನೀಡದ ಕಾರಣ ವಿದ್ಯುತ್‌ ಬಿಲ್‌ ಪಾವತಿಸಲು ಸಾಧ್ಯವಾಗಿಲ್ಲ. ಗಣೇಶ್‌, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌, ಅರಕಲಗೂಡು.

ವಿಜಯ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next