Advertisement

ಗುಜರಾತ್ ಫಲಿತಾಂಶದಿಂದ ಭಾರತ್ ಜೋಡೋ ಯಾತ್ರೆ ವಿಚಲಿತವಾಗಿಲ್ಲ: ಕಾಂಗ್ರೆಸ್

02:42 PM Dec 10, 2022 | Team Udayavani |

ಜೈಪುರ: ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶದಿಂದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಯಾವುದೇ ರೀತಿಯಲ್ಲಿ ವಿಚಲಿತವಾಗಿಲ್ಲ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಶನಿವಾರ ಪ್ರತಿಪಾದಿಸಿದ್ದು, ಚುನಾವಣೆಯಲ್ಲಿ ಪಕ್ಷದ ನಿರಾಶಾದಾಯಕ ಪ್ರದರ್ಶನವನ್ನು ವಿಶ್ಲೇಷಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

Advertisement

ಬುಂಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ”ಗುಜರಾತ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಬಿಜೆಪಿಯು ಚುನಾವಣಾ ಪ್ರಚಾರದಲ್ಲಿ ಹೆಣ್ಣು ಮಗುವನ್ನು ಬಳಸಿಕೊಂಡಿದೆ ಎಂಬ ಕಾಂಗ್ರೆಸ್‌ನ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಅವರು ಆರೋಪಿಸಿದರು.

ಗುಜರಾತ್‌ನಲ್ಲಿ ಪಕ್ಷ ಸಂಘಟನೆಯಲ್ಲಿ ಲೋಪಗಳಿರುವುದನ್ನು ಒಪ್ಪಿಕೊಂಡು, ಬಿಜೆಪಿ, ಎಎಪಿ ಮತ್ತು ಎಐಎಂಐಎಂ ಮೈತ್ರಿ ಮಾಡಿಕೊಂಡಿದ್ದು ಕಾಂಗ್ರೆಸ್‌ಗೆ ಅಡ್ಡಿಯಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರಿಗೆ ಏನು ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿದಿದೆ. ಫಲಿತಾಂಶಗಳು ನಮಗೆ ನಿರಾಶಾದಾಯಕವಾಗಿವೆ. ಕಾಂಗ್ರೆಸ್ ನ ಮತಗಳಿಕೆ ಶೇ.40ರಿಂದ ಶೇ.27ಕ್ಕೆ ಕುಸಿದಿದೆ. ಆದರೆ ಶೇಕಡಾ 27 ರಷ್ಟು ಮತಗಳು ಅಡಿಪಾಯವಾಗಿದ್ದು, ಮತ್ತೆ ಶೇಕಡಾ 40 ರಷ್ಟು ಮತಗಳನ್ನು ಹೆಚ್ಚಿಸುವುದು ನಮಗೆ ಕಷ್ಟವಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next