Advertisement

ವೈರಸ್‌ನಿಂದ ಹಾನಿಯಿಲ್ಲ: ಟ್ರಂಪ್‌

12:59 PM Jul 06, 2020 | mahesh |

ವಾಷಿಂಗ್ಟನ್‌: ಕೋವಿಡ್‌ ವಿಚಾರದಲ್ಲಿ ವಿಚಿತ್ರ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿರುವ ಅಮೆರಿಕ ಅಧ್ಯಕ್ಷ ಈಗ ಮತ್ತೂಮ್ಮೆ ತಮ್ಮ ನುಡಿಮುತ್ತುಗಳನ್ನು ಉದುರಿಸಿದ್ದಾರೆ.  ಅಮೆರಿಕದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗಿ ಸಾವುಗಳು ನಿರಂತರ ಸಂಭವಿಸುತ್ತಿದ್ದರೂ, ಶೇ.99ರಷ್ಟು ಕೋವಿಡ್‌ ವೈರಸ್‌ಗಳಿಂದ ಯಾವುದೇ ಹಾನಿಯಿಲ್ಲ ಎಂದು ಹೇಳಿದ್ದಾರೆ. ಇವರ ಹೇಳಿಕೆಯಿಂದ ಅಮೆರಿಕದ ವೈದ್ಯಕೀಯ ವಲಯ, ಜನರಿಗೂ ತೀವ್ರ ಅಚ್ಚರಿಯಾಗಿದೆ. ಅಮೆರಿಕ ಸ್ವಾತಂತ್ರ್ಯ ದಿನದ ಅಂಗವಾಗಿ ಮಾತನಾಡಿದ ಡೊನಾಲ್ಡ್‌ ಟ್ರಂಪ್‌ ಕೋವಿಡ್‌ ನಿಯಂತ್ರಿಸುವಲ್ಲಿ ನಾವು ಶ್ರಮಿಸುತ್ತಿದ್ದು, ಧನಾತ್ಮಕ ಫ‌ಲಿತಾಂಶ ಸಿಕ್ಕಿದೆ ಎಂದು ಹೇಳಿದ್ದಾರೆ.

Advertisement

ಸುಮಾರು 4 ಕೋಟಿ ಮಂದಿಯ ಪರೀಕ್ಷೆಯನ್ನು ನಡೆಸಿದ್ದು, ಈ ಮೂಲಕ ಶೇ.99ರಷ್ಟು ವೈರಸ್‌ ಹಾನಿಕರವಲ್ಲ ಎಂದು ಗೊತ್ತಾಗಿದೆ. ಬೇರೆ ಯಾವ ರಾಷ್ಟ್ರಗಳೂ ಪರೀಕ್ಷೆ ಫ‌ಲಿತಾಂಶಗಳನ್ನು ತೋರಿಸುತ್ತಿಲ್ಲ. ಕಾರಣ, ನಾವು ಪರೀಕ್ಷೆ ಮಾಡಿದಷ್ಟು ಬೇರೆ ಯಾವುದೇ ದೇಶಗಳು ಮಾಡಿಲ್ಲ. ನಾವು ಬೇರೆಯವರಂತಲ್ಲ, ನಮ್ಮಲ್ಲೇ ಉತ್ಪಾದಿಸಿದ ಮಾಸ್ಕ್, ಗ್ಲೌಸ್‌ಗಳನ್ನು ಬಳಸುತ್ತಿದ್ದೇವೆ. ವೈರಸ್‌ ವಿಚಾರದಲ್ಲಿ ಚೀನ ಗುಟ್ಟಾಗಿ ನಡೆದುಕೊಂಡಿರುವುದರಿಂದ ವಿಶ್ವದ 189 ದೇಶಗಳಿಗೆ ಹರಡುವಂತಾಯಿತು ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡಿದಾಗ ಇದು ಚೀನದಿಂದ ಬಂದ ಪ್ಲೇಗ್‌ ಮಹಾಮಾರಿ ಎಂದು ಮಾತನಾಡಿದ್ದರು. ವೈರಸ್‌ ಹಬ್ಬಿಸಿದ್ದಕ್ಕಾಗಿ ಬೀಜಿಂಗ್‌ ಹೊಣೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next