Advertisement

ಪೈಪ್‌ಲೈನ್‌ಗೆ ತಡೆ ಹಾಕುವೆವು; ರಷ್ಯಾಗೆ ಅಮೆರಿಕ ಅಧ್ಯಕ್ಷ ಬೈಡೆನ್‌ ಎಚ್ಚರಿಕೆ

08:45 PM Feb 08, 2022 | Team Udayavani |

ವಾಷಿಂಗ್ಟನ್‌/ಕೀವ್‌: ಉಕ್ರೇನ್‌ ವಿರುದ್ಧ ಮತ್ತಷ್ಟು ದಾಳಿ ನಡೆಸಿದ್ದೇ ಆದಲ್ಲಿ ರಷ್ಯಾದಿಂದ ಜರ್ಮನಿಗೆ ಸಂಪರ್ಕ ಕಲ್ಪಿಸುವ ನಾರ್ಡ್‌ ಸ್ಟ್ರೀಮ್‌ 2 ಅನಿಲ ಪೈಪ್‌ಲೈನ್‌ಗೆ ತಡೆ ಹಾಕಬೇಕಾಗುತ್ತದೆ. ಹೀಗೆಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಜರ್ಮನಿಯ ಹೊಸ ಛಾನ್ಸಲರ್‌ ಒಲಾಫ್ ಶೋಲ್ಜ್ರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಬೈಡೆನ್‌ ಈ ಎಚ್ಚರಿಕೆ ನೀಡಿದ್ದಾರೆ. ಇಬ್ಬರು ಮುಖಂಡರೂ ಉಕ್ರೇನ್‌ ಬಿಕ್ಕಟ್ಟು ಶೀಘ್ರದಲ್ಲಿಯೇ ಮುಕ್ತಾಯವಾಗಬೇಕು ಎಂದು ಹೇಳಿದ್ದಾರೆ.

ಆದರೆ, ಈ ನಿಟ್ಟಿನಲ್ಲಿ ಸ್ಪಷ್ಟ ನಿರ್ಣಯ ಕೈಗೊಳ್ಳಲು ಅಮೆರಿಕ- ಜರ್ಮನಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಬೈಡೆನ್‌, ಯೋಜನೆಯ ಹೆಸರನ್ನು ಉಲ್ಲೇಖಿಸಿದರೂ, ಒಲಾಫ್ ಶೋಲ್ಜ್ ಅದನ್ನು ಹೇಳಲು ನಿರಾಕರಿಸಿದ ಘಟನೆಯೂ ನಡೆದಿದೆ.

ಇದನ್ನೂ ಓದಿ:ಸೋಂಕಿನ ಸಂಖ್ಯೆ ಶೇ. 5.1ಕ್ಕೆ ಇಳಿಕೆ : ರಾಜ್ಯಾದ್ಯಂತ 4,452 ಮಂದಿಗೆ ಪಾಸಿಟಿವ್‌

ಇದೇ ವೇಳೆ, ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುವೆಲ್‌ ಮ್ಯಾಕ್ರನ್‌ ಮತ್ತು ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹಾಲಿ ಬಿಕ್ಕಟ್ಟಿನ ಬಗ್ಗೆ ಸುದೀರ್ಘ‌ ಮಾತುಕತೆ ನಡೆಸಿದರು. ಒಟ್ಟು ಐದು ಗಂಟೆಗಳ ಕಾಲ ಉಭ ಯ ನಾಯಕರು ಉಕ್ರೇನ್‌ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಸಿದ್ದಾರೆ.

Advertisement

ಅಮೆರಿಕ ಮತ್ತು ನ್ಯಾಟೋ ತಮ್ಮ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ನಮ್ಮ ಆಕ್ಷೇಪವಿದೆ. ಹೀಗಾಗಿ, ಉದ್ವಿಗ್ನತೆಗೆ ನಾವೇ ಕಾರಣ ಎಂದು ಹೇಳುವುದು ಸರಿಯಲ್ಲ ಎಂದು ಪುಟಿನ್‌ ಹೇಳಿದ್ದಾರೆ.

ನ್ಯಾಟೋ ರಕ್ಷಣಾತ್ಮಕವಾಗಿ ಮೈತ್ರಿಕೂಟ ಮಾಡಿಕೊಂಡಿದೆ ಎಂಬ ಅಂಶವನ್ನು ಪುಟಿನ್‌ ತಿರಸ್ಕರಿಸಿದ್ದಾರೆ. ಇರಾಕ್‌, ಲಿಬಿಯಾ ಮತ್ತು ಅಫ್ಘಾನಿಸ್ತಾನದಲ್ಲಿ ರಕ್ಷಣೆಗಾಗಿ ಅವು ಮಾಡಿದ ಕ್ರಮಗಳು ಏನೆಂದು ಎಲ್ಲ ರಿಗೂ ಗೊತ್ತು ಎಂದು ಟೀಕಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next