ಗುಡಿಬಂಡೆ: ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ವಾಹನಕ್ಕೆ ಡೀಸೆಲ್ ಇಲ್ಲದ ಕಾರಣ ಪೌರ ಕಾರ್ಮಿಕರು ಹೆಗಲ ಮೇಲೆ ಹೊತ್ತು ಕಸ ವನ್ನು ವಿಲೇವಾರಿ ಮಾಡಿದ ಘಟನೆ ನಡೆದಿದೆ.
ಪ್ರತಿ ದಿನ ಬೆಳ್ಳಂಬೆಳಗ್ಗೆ ಪೌರ ಕಾರ್ಮಿಕರು ಪಟ್ಟಣ ಎಲ್ಲಾ ವಾರ್ಡ್ ಗಳಲ್ಲಿನ ಘನ ತ್ಯಾಜ್ಯ ಕಸವನ್ನು ವಿಲೇ ವಾರಿ ಮಾಡಿ, ಕಸವನ್ನು ಟ್ರಾಕ್ಟರ್ ಮತ್ತು ವಾಹನಗಳ ಮೂಲಕ ವಿಲೇವಾರಿ ಮಾಡಬೇಕಾಗಿದ್ದು, ಆದರೆ ಕಳೆದ ಎರಡು ದಿನಗಳಿಂದ ವಾಹನಗಳಿಗೆ ಡೀಸೆಲ್ ಇಲ್ಲದೆ ವಾಹನಗಳು ನಿಂತಲ್ಲೇ ನಿಂತಿರುವುದರಿಂದ, ಇನ್ನು ಕಸವನ್ನು ವಿಲೇವಾರಿ ಮಾಡಲೇ ಬೇಕಾದ ದೃಷ್ಟಿ ಯಿಂದ ಪೌರ ಕಾರ್ಮಿಕರೇ ಚೀಲಗಳಲ್ಲಿ ಕಸವನ್ನು ಹೆಗಲ ಮೇಲೆ ಹೊತ್ತುಕೊಂಡು ವಿಲೇವಾರಿ ಮಾಡಿದರು.
ಈ ಹಿಂದೆಯೂ ಸಹ ಡೀಸೆಲ್ ಇಲ್ಲದೆ ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ವಿಲೇ ವಾರಿ ವಾಹನವನ್ನು ನಿಲ್ಲಿಸಿದ್ದರು, ಈಗ ಪುನಃ ಎರಡು ದಿನಗಳಿಂದ ಡೀಸೆಲ್ ಇಲ್ಲದ ಕಾರಣ ವಾಹನಗಳನ್ನು ನಿಲ್ಲಿಸಿದ್ದಾರೆ,
ಶ್ರೀನಿವಾಸ್, ಪ್ರಭಾರಿ ಮುಖ್ಯಾಧಿಕಾರಿ ಹೇಳಿಕೆ: ಪಟ್ಟಣದಲ್ಲಿ ಡೀಸೆಲ್ ಇಲ್ಲದೆ ವಾಹನಗಳು ನಿಲ್ಲಿಸಿರುವುದು ನನ್ನ ಗಮನಕ್ಕೆ ಈಗ ಬಂದಿದ್ದು, ನಾನು ಕೇವಲ ಎರಡು ದಿನಗಳ ಹಿಂದಷ್ಟೇ ಅಧಿಕಾರ ವಹಿಸಿಕೊಂಡ ಕಾರಣ, ಆರೋಗ್ಯ ನಿರೀಕ್ಷರ ಹತ್ತಿರ ಮಾತನಾಡಿ ಕ್ರಮ ತೆಗೆದುಕೊಳ್ಳುತ್ತೇನೆ.
ಇದನ್ನೂ ಓದಿ: ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ