Advertisement

ಯಾವುದೇ ಗೊಂದಲವಿಲ್ಲ,ಬಿಜೆಪಿ ಗೆಲುವು ಖಾತ್ರಿ

07:15 AM Mar 17, 2018 | Team Udayavani |

ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆ ಕುರಿತಂತೆ ಯಾವುದೇ ಗೊಂದಲವಿಲ್ಲ ಎನ್ನುವುದು ಬೈಂದೂರಿನ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿಕೊಂಡಿರುವ ಪ್ರವೀಣ್‌ ಕುಮಾರ್‌ ಗುರ್ಮೆ ನುಡಿ. ಅವರು 15 ವರ್ಷ ಕುತ್ಯಾರು ಗ್ರಾಮ ಪಂಚಾಯತ್‌ ಸದಸ್ಯರಾಗಿ, ಒಂದು ಬಾರಿ ಅಧ್ಯಕ್ಷರಾಗಿ, ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Advertisement

ಚುನಾವಣಾ ಸಿದ್ಧತೆ ಹೇಗೆ ನಡೆಯುತ್ತಿದೆ?
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಏಳು ಮಹಾ ಶಕ್ತಿ ಕೇಂದ್ರಗಳು, 243 ಬೂತ್‌ಗಳಲ್ಲಿ ಈಗಾಗಲೇ ಬೈಠಕ್‌ಗಳನ್ನು ನಡೆಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ.

ಪಕ್ಷದಿಂದ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿದೆಯೇ?
ಇಲ್ಲ. ಕಳೆದ ಬಾರಿ ಅಲ್ಪ ಅಂತರದಿಂದ ಸೋತಿದ್ದ ಬಿ.ಎಂ. ಸುಕುಮಾರ ಶೆಟ್ಟಿ ಅವರು ಈ ಬಾರಿ ಪ್ರಬಲ  ಆಕಾಂಕ್ಷಿಯಾಗಿದ್ದಾರೆ. ಯಾರನ್ನೇ ಅಭ್ಯರ್ಥಿಯಾಗಿ ಘೋಷಿಸಿದರೂ ಗೆಲ್ಲಿಸಲು ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿವೆ. ಅಭ್ಯರ್ಥಿ ಆಯ್ಕೆ ಕುರಿತಂತೆ ಪಕ್ಷ ಸರಿಯಾದ ನಿರ್ಧಾರ ಕೈಗೊಳ್ಳುತ್ತದೆ. 

ಬಿಜೆಪಿ ಗೆಲ್ಲುವ ವಿಶ್ವಾಸವಿದೆಯೇ?
ಕಳೆದ ವಿಧಾನಸಭಾ ಚುನಾವಣೆ ಬಳಿಕ ನಡೆದ ಲೋಕಸಭಾ ಚುನಾವಣೆ ಸಹಿತ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಲ್ಲಿಯೂ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. 7ರಲ್ಲಿ 5 ಜಿ.ಪಂ. ಸದಸ್ಯರು ಬಿಜೆಪಿಗರು, 25 ತಾ.ಪಂ. ಸದಸ್ಯರಲ್ಲಿ 15 ಮಂದಿ ಬಿಜೆಪಿಯವರು, 654 ಗ್ರಾ.ಪಂ. ಸದಸ್ಯರಲ್ಲಿ 296 ಮಂದಿ ಬಿಜೆಪಿ ಸದಸ್ಯರಿದ್ದಾರೆ. ಕಳೆದ ಬಾರಿ ಬಿಜೆಪಿ ಹಾಗೂ ಕೆಜೆಪಿ ಗೊಂದಲದಿಂದಾಗಿ ಅಲ್ಪ ಮತಗಳ ಅಂತರದಿಂದ ಸೋಲನ್ನು ಕಾಣಬೇಕಾಯಿತು. ಆದರೆ ಈ ಬಾರಿ ಖಂಡಿತ ಬಿಜೆಪಿ ಗೆಲ್ಲಲಿದೆ.

ಟಿಕೆಟ್‌ ವಿಚಾರವಾಗಿ ಪಕ್ಷದಲ್ಲಿ  ಗೊಂದಲಗಳಿವೆಯೇ?
ಇಲ್ಲ. ಟಿಕೆಟ್‌ ಯಾರಿಗೆ ಕೊಡಬೇಕು ಎನ್ನುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಸೂಕ್ತ ಹಾಗೂ ಗೆಲ್ಲುವ ಅಭ್ಯರ್ಥಿಯನ್ನು ರಾಷ್ಟ್ರ, ರಾಜ್ಯ ನಾಯಕರು ಕಣಕ್ಕಿಳಿಸುತ್ತಾರೆ. ಚುನಾವಣೆಗೆ ಬೈಂದೂರಿಗೆ 

Advertisement

ಬಿಜೆಪಿಯ ಆಶ್ವಾಸನೆಗಳೇನು?
ನಾಲ್ಕು ಅವಧಿಯಿಂದ ಕಾಂಗ್ರೆಸ್‌ ಶಾಸಕರಿದ್ದರೂ ಕುಡಿ ಯುವ ನೀರಿನ ಸಮಸ್ಯೆಗೆ ಪರಿಹಾರ ಹುಡುಕಿಲ್ಲ. ನೀರಿಗೆ ಮೊದಲ ಆದ್ಯತೆ. ಗ್ರಾಮೀಣ ಪ್ರದೇಶಗಳಿಗೆ ಇನ್ನೂ ಸರಿ ಯಾದ ರಸ್ತೆ ಸೌಲಭ್ಯಗಳಿಲ್ಲ. ತ್ರಾಸಿ, ಕಂಬದಕೋಣೆ, ಕೊಲ್ಲೂರು, ಮರವಂತೆ ಭಾಗಗಳಿಂದ ಬೈಂದೂರಿನ ಸರಕಾರಿ ಆಸ್ಪತ್ರೆಗೆ ಜನ ಚಿಕಿತ್ಸೆಗೆ ಬರುತ್ತಾರೆ. ಆದರೆ ಇಲ್ಲಿರುವ ಸೌಲಭ್ಯ ಸಾಕಾಗುತ್ತಿಲ್ಲ. ಬಿಜೆಪಿ ಗೆದ್ದರೆ ಈ ಆಸ್ಪತ್ರೆ ಮೇಲ್ದರ್ಜೆ ಗೇರಿಸಲು ಪ್ರಯತ್ನಿಸಲಾಗುವುದು.

 - ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next