Advertisement

ನಿಲುವಿನಲ್ಲಿ ಬದಲಾವಣೆ ಇಲ್ಲ’

06:40 AM Jan 16, 2018 | Team Udayavani |

ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲೇಕರ್‌ ಹರಿಹಾಯ್ದಿದ್ದಾರೆ.

Advertisement

ಕರ್ನಾಟಕದ ಮುಖ್ಯಮಂತ್ರಿಗಳಾಗಿ ನಿಮ್ಮ ರಾಜ್ಯದ ಒಳಿತಿಗಾಗಿ ನೀವು ಅಭಿಪ್ರಾಯ ವ್ಯಕ್ತಪಡಿಸುವುದು ನಿಮ್ಮ ಕರ್ತವ್ಯವೋ, ಹಾಗೆಯೇ ನಾನೂ ಕೂಡ ನಮ್ಮ ರಾಜ್ಯದ ಸಚಿವನಾಗಿ ಮಹದಾಯಿ ವಿಷಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಷ್ಟೇ ಸಹಜ ಎಂದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ವಿಷಯದಲ್ಲಿ ಗೋವಾದ ಜನರ ನಿರ್ಣಯ, ಸರ್ಕಾರದ ನಿರ್ಣಯ, ಒಬ್ಬ ಮಂತ್ರಿಯಾಗಿ ನನ್ನ ನಿರ್ಣಯವೂ ಈ ಹಿಂದಿನಿಂದಲೂ ಒಂದೇ ಆಗಿದೆ.

ಮಹದಾಯಿ ನದಿ ನೀರಿನ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next