ಮಂಗಳೂರಿನ ನಿಟ್ಟೆ ವಿಶ್ವವಿದ್ಯಾಲಯ ಏಪ್ರಿಲ್ 24 ರಿಂದ 4 ದಿನಗಳ ಕಾಲ ‘ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ(NIFF)’ ಆಯೋಜಿಸಿದೆ.
ಚಲನಚಿತ್ರೋತ್ಸವವು ಏಪ್ರಿಲ್ 24-27 ರವರೆಗೆ ಮಂಗಳೂರಿನ ‘ಭರತ್ ಸಿನಿಮಾಸ್’ ಭರತ್ ಮಾಲ್ನಲ್ಲಿ ಜರುಗಲಿದೆ. ಸುನಿಲ್ ಸುಖ್ತಂಕರ್, ‘ಕಾಸವ್'(2016) ಮರಾಠಿ ಚಿತ್ರದ ನಿರ್ದೇಶಕರು ‘ನಿಟ್ಟೆ ಅಂತರಾಷ್ಟ್ರೀಯ ಸಿನಿಮೋತ್ಸವ’ದ ಉದ್ಘಾಟನೆ ಮಾಡಲಿದ್ದು, 64 ನೇ ಗೋಲ್ಡನ್ ಲೋಟಸ್ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರ ‘ಕಾಸವ್’ ಪ್ರದರ್ಶನದ ಮೂಲಕ ಸಿನಿಮೋತ್ಸವ ಆರಂಭವಾಗಲಿದೆ. ಚಲನಚಿತ್ರೋತ್ಸವದಲ್ಲಿ 5 ದೇಶಗಳ ಒಟ್ಟಾರೆ 55 ಸಿನಿಮಾಗಳು ಮತ್ತು ಭಾರತದ ಹಲವು ಭಾಷೆಗಳ ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.
ಇನ್ನೂ ಸಿನಿಮೋತ್ಸವದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರುಗಳಾದ ಪಿ.ಎನ್.ರಾಮಚಂದ್ರ, ಅನಿರುದ್ಧ ರಾಯ್ ಚೌಧರಿ, ಬಿಜಯ ಜೇನ, ಪ್ರದಿಪ್ತ ಭಟ್ಟಾಚಾರ್ಯ ಮತ್ತು ಸಿನಿಮಾ ಕಲಾವಿದರಾದ ಮನೋಹರ್, ಶೃಂಗ, ಪ್ರತಿಕ್ ಗಾಂಧಿ ಹರಿಸ್ರವ, ಹೇಮಂತ್ ಉಪಸ್ಥಿತಿ ಇರಲಿದ್ದಾರೆ. ಚಿತ್ರ ಪ್ರದರ್ಶನ ನಂತರ ಸಂವಾದ ಕಾರ್ಯಕ್ರಮವು ಇರಲಿದ್ದು, ಚಿತ್ರಕಥೆ ಬರವಣಿಗೆ ಕಾರ್ಯಗಾರ ಸಹ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಏಪ್ರಿಲ್ 24 ರಂದು ಪ್ರದರ್ಶನವಾಗುವ ಚಿತ್ರಗಳು ‘ಅಂಟು ದಿ ಡಸ್ಕ್’ (ಮಲಯಾಳಂ), ‘ಜೀರೋ ಮೇಡ್ ಇನ್ ಇಂಡಿಯಾ’ (ಕನ್ನಡ), ‘ಕೆಂಡಸಂಪಿಗೆ'(ಕನ್ನಡ), ‘ಹರಿಕಥಾ ಪ್ರಸಂಗ’ (ಕನ್ನಡ), ‘ಹರಿವು'(ಕನ್ನಡ), ‘ಮಸಾನ್’ (ಹಿಂದಿ), ‘ಸೋಗಿಜ'(ಇಂಡೋನೆಷಿಯಾ ಚಿತ್ರ), Visaranai (Tamil), ‘ಹಾಲ್ ಇ-ಕಂಗಾಲ್'(ಹಿಂದಿ), Qissa(ಪಂಜಾಬಿ).
ಏಪ್ರಿಲ್ 25 ರಂದು ಪ್ರದರ್ಶನವಾಗುವ ಚಿತ್ರಗಳು ಕಲಿಯಚನ್'(ಮಲಯಾಳಂ), ‘ಧರವಿ'(ಹಿಂದಿ), ‘ಪಿಂಕ್'(ಹಿಂದಿ), ‘ರಾಂಗ್ ಸೈಡ್ ರಾಜು(ಗುಜರಾತಿ), ‘Bakita Byaktigato'(ಬೆಂಗಾಲಿ), ‘Sanctuary'(ಜರ್ಮನಿ), ‘ಕ್ವೀನ್'(ಹಿಂದಿ), ‘Teenkahon'(ಬೆಂಗಾಲಿ), ‘ಜಾನೆ ಭಿ ದೊ ಯಾರನ್'(ಹಿಂದಿ).
ಏಪ್ರಿಲ್ 26 ರಂದು ಪ್ರದರ್ಶನವಾಗುವ ಚಿತ್ರಗಳು ‘ರೆಡ್ ಬಟರ್ ಫ್ಲೈ ಡ್ರೀಮ್'(ಶ್ರೀಲಂಕ ಚಿತ್ರ೦, ‘ಮದಿಪು'(ತುಳು), ರೈಲ್ವೇ ಚಿಲ್ಡ್ರೆನ್'(ಕನ್ನಡ), ‘ರಾಮಾ ರಾಮಾ ರೇ'(ಕನ್ನಡ), ‘ಅಮರಾವತಿ'(ಕನ್ನಡ), ‘ಹರಿಕಥಾ ಪ್ರಸಂಗ'(ಕನ್ನಡ), ‘ಶುದ್ಧ'(ತುಳು), ‘ಅಭಾಸ್'(ಓಡಿಯಾ), ‘ಪರೋಕ್ಷ್'(ತುಳು), ‘ವೆಂಟಿಲೇಟರ್'(ಮರಾಠಿ).
ಏಪ್ರಿಲ್ 27 ರಂದು ಪ್ರದರ್ಶನವಾಗುವ ಚಿತ್ರಗಳು ‘ಜಟ್ಟಾ'(ಕನ್ನಡ), ‘ಡೆಸ್ಟಿನಿ'(ಚೀನಾ), ‘ರಾಮನ್ ರಾಘವ್ 2.0(ಹಿಂದಿ), ‘Antaheen'(ಬೆಂಗಾಲಿ), ‘ರೈಲ್ವೇ ಚಿಲ್ಡ್ರೆನ್'(ಕನ್ನಡ), ’24 ವೀಕ್ಸ್'(ಜರ್ಮನಿ), ‘ಅಗ್ಲಿ'(ಹಿಂದಿ), ‘ದಾಳಿ'(ಕನ್ನಡ). ‘ರಾಮಾ ರಾಮಾ ರೇ'(ಕನ್ನಡ), ‘ಅಮರಾವತಿ'(ಕನ್ನಡ) ಮರುಪ್ರದರ್ಶನ.