“ಪ್ರಣಬ್ ಅವರನ್ನೇ ಎರಡನೇ ಅವಧಿಗೆ ಆಯ್ಕೆ ಮಾಡುವುದಕ್ಕಿಂತ ಉತ್ತಮ ಬೇರೆ ಯಾವುದಿದೆ? ಅದೇ ಉತ್ತಮ ನಡೆಯಾಗಬಲ್ಲದು. ರಾಷ್ಟ್ರಪತಿ ಹುದ್ದೆ ಇಡೀ ದೇಶ ಮತ್ತು ಜನರನ್ನು ಪ್ರತಿನಿಧಿಸುವುದರಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಪಕ್ಷ ಅಭ್ಯರ್ಥಿ ಕುರಿತಂತೆ ಎಲ್ಲಾ ಪಕ್ಷಗಳನ್ನು ಸಂಪರ್ಕಿಸಿಯೇ ನಿರ್ಧರಿಸಬೇಕು’ ಎಂದು ನಿತೀಶ್ ಹೇಳಿದ್ದಾರೆ.
ಪ್ರಧಾನಿ ಹುದ್ದೆ ರೇಸಲ್ಲಿಲ್ಲ: 2019ರ ಲೋಕಸಭಾ ಚುನಾವಣೆಗೆ ತಾವು ಪ್ರಧಾನಿ ಹುದ್ದೆ ರೇಸಲ್ಲಿಲ್ಲ ಎಂದು ನಿತೀಶ್ ಸ್ಪಷ್ಟಪಡಿಸಿದ್ದಾರೆ. “ನಮ್ಮದು ಸಣ್ಣ ಪಕ್ಷ. ನಮ್ಮನ್ನು ಸುಮ್ಮನೇ ಗುರಿಮಾಡಲಾಗುತ್ತಿದೆ. ನಾನು ಮೂರ್ಖನಲ್ಲ. ಒಂದು ವೇಳೆ ನಾನು ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾದೆ ಎಂದ ಮಾತ್ರಕ್ಕೆ ಪ್ರಧಾನಿ ಹುದ್ದೆ ಆಕಾಂಕ್ಷಿಯಲಎಂದಿದ್ದಾರೆ. “ನನಗೆ ಪ್ರಧಾನಿಯಾಗುವ ಆಸೆಯೂ ಇಲ್ಲ, ಸಾಮರ್ಥ್ಯವೂ ಇಲ್ಲ. 2014ರ ಚುನಾವಣೆ ವೇಳೆ ಮೋದಿಯವರಲ್ಲಿ ಅಂಥ ಸಾಮರ್ಥ್ಯವನ್ನು ಜನರು ಕಂಡರು. ಹಾಗಾಗಿ ಅವರು ಪ್ರಧಾನಿಯಾದರು,’ ಎಂದೂ ಹೇಳಿದ್ದಾರೆ.
Advertisement
ಇದೇ ವೇಳೆ, ಇವಿಎಂ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, “ಚುನಾವಣೆಗಳಲ್ಲಿ ಇವಿಎಂ ಬಳಕೆಗೆ ನಮ್ಮ ಬೆಂಬಲವಿದೆ. ಈ ವಿಚಾರದಲ್ಲಿ ಆರ್‌ಜೆಡಿ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ನಾವು ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದೇವೆ ಎಂದ ಮಾತ್ರಕ್ಕೆ ಜೆಡಿಯು ಮತ್ತು ಆರ್‌ಜೆಡಿ ಸಿದ್ಧಾಂತ ಒಂದೇ ಆಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.