Advertisement

ತೇಜಸ್ವಿ ರಾಜೀನಾಮೆಯನ್ನು ನಿತೀಶ್‌ ಎಂದೂ ಕೇಳಿಲ್ಲ: ಲಾಲು ಯಾದವ್‌

04:08 PM Jul 26, 2017 | udayavani editorial |

ಪಟ್ನಾ : “ಬಿಹಾರದ ಮಹಾ ಘಟಬಂಧನದಲ್ಲಿ ಯಾವುದೇ ತೊಂದರೆ ಇಲ್ಲ; ಎಲ್ಲವೂ ಸರಿಯಾಗಿಯೇ ಇದೆ; ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ರಾಜೀನಾಮೆಯನ್ನು ಎಂದೂ ಕೇಳಿದ್ದೇ ಇಲ್ಲ’ ಎಂಬುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಇಂದು ಗುರುವಾರ ಹೇಳಿದ್ದಾರೆ. 

Advertisement

“ಬಿಹಾರದಲ್ಲಿ ಮಹಾ ಘಟಬಂಧನವು ಸಾಧ್ಯವಾದದ್ದು ನನ್ನ ಕಠಿನ ಪರಿಶ್ರಮದಿಂದಲೇ’ ಎಂದು ಲಾಲು ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು. 

“ನಾವು ಘಟಬಂಧನವನ್ನು ರೂಪಿಸಿ ನಿತೀಶ್‌ ಕುಮಾರ್‌ ಅರನ್ನು  ಬಿಹಾರದ ಮುಖ್ಯಮಂತ್ರಿಯನ್ನಾಗಿ ಮಾಡಿದೆವು; ಹಾಗಿರುವಾಗ ಅವರ್ಯಾಕೆ ಮಹಾ ಘಟಬಂಧನವನ್ನು ಮುರಿಯುತ್ತಾರೆ ? ನಿತೀಶ್‌ ಅವರು ಮಹಾಘಟಬಂಧನದ ನಾಯಕರು; ಅವರಿಗೆ ಯಾರೂ ಅಗೌರವ ತೋರುವುದನ್ನು ನಾವು ಸಹಿಸುವುದಿಲ್ಲ’ ಎಂದು ಲಾಲು ಹೇಳಿದರು. 

ಮಹಾಘಟಬಂಧನದಲ್ಲಿ ಬಿರುಕುಂಟಾಗಿದೆ ಎಂಬ ವರದಿಗಳನ್ನು ಮಾಧ್ಯಮಗಳೇ ಸೃಷ್ಟಿ ಮಾಡಿವೆ ಎಂದು ಲಾಲು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next