Advertisement

ನಿತೀಶ್‌ ಸಂಪುಟಕ್ಕೆ 27 ಸಚಿವರ ಸೇರ್ಪಡೆ

09:45 AM Jul 30, 2017 | Team Udayavani |

ಪಟ್ನಾ: ಎನ್‌ಡಿಎ ಜತೆ ಸೇರಿ ಹೊಸದಾಗಿ ಸರಕಾರ ರಚಿಸಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಶನಿವಾರ ತಮ್ಮ ಸಂಪುಟ ವಿಸ್ತರಿಸಿದ್ದಾರೆ. ಬಿಜೆಪಿಯ 12 ಮಂದಿ, ಎಲ್‌ಜೆಪಿಯ ಓರ್ವ ಸಹಿತ 27 ಮಂದಿ ಹೊಸ ಸಚಿವರನ್ನು ನಿತೀಶ್‌ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.

Advertisement

ಶನಿವಾರ ಸಂಜೆ ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರು ರಾಜಭವನದಲ್ಲಿ ಎಲ್ಲ ಹೊಸ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಜು.27ರಂದು ಸಿಎಂ ಆಗಿ ನಿತೀಶ್‌ ಹಾಗೂ ಡಿಸಿಎಂ ಆಗಿ ಸುಶೀಲ್‌ ಮೋದಿ ಅವರು ಮಾತ್ರ ಪ್ರಮಾಣವಚನ ಸ್ವೀಕರಿಸಿದ್ದರು. ಶುಕ್ರವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿದ ಬೆನ್ನಲ್ಲೇ ಶನಿವಾರ ಸಂಪುಟ ಪುನಾರಚನೆ ನಡೆದಿದೆ. 243 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಗರಿಷ್ಠ 37 ಮಂದಿ ಸಚಿವರನ್ನು ಹೊಂದಲು ಅವಕಾಶವಿದೆ. 14 ಮಂದಿ ಜೆಡಿಯು ಸದಸ್ಯರು ಸಚಿವರಾದರೆ, ಎನ್‌ಡಿಎ ಮಿತ್ರಕೂಟದ ಪೈಕಿ ಬಿಜೆಪಿಯ 12 ಮಂದಿ, ಎಲ್‌ಜೆಪಿಯ ಪಶುಪತಿ ಕುಮಾರ್‌ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು ಆರ್‌ಎಲ್‌ಎಸ್‌ಪಿ ಮತ್ತು ಎಚ್‌ಎಎಂ ಪ್ರತಿನಿಧಿಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next