Advertisement

ಮೀಸಲಿಗೆ ನಿತೀಶ್‌ ಸಮರ್ಥನೆ

06:20 AM Nov 07, 2017 | Harsha Rao |

ಪಟ್ನಾ: ಸರಕಾರದಿಂದ ಹೊರಗುತ್ತಿಗೆ ಪಡೆಯುವ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೊಳಿಸುವ ತಮ್ಮ ಸರಕಾರದ ನಿಲುವನ್ನು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಮರ್ಥಿಸಿಕೊಂಡಿದ್ದಾರೆ. 

Advertisement

ಮಂಗಳವಾರ ಪಟ್ನಾದ ತಮ್ಮ ನಿವಾಸದಲ್ಲಿ ನಡೆಸಿದ “ಲೋಕ್‌ ಸಂವಾದ್‌’ (ಜನತಾ ದರ್ಶನ) ಕಾರ್ಯಕ್ರಮದ ನಂತರ ಮಾತನಾಡಿದ ಅವರು, “”ಸರಕಾರದ ಹೊರಗುತ್ತಿಗೆ ಮೀಸಲಾತಿ ನಿಲುವನ್ನು ಟೀಕಿಸುತ್ತಿರುವವರು 2003ರ ಬಿಹಾರ ಮೀಸಲಾತಿ ನಿಯಮಗಳ ಬಗ್ಗೆ ಅಲ್ಪ ಜ್ಞಾನ ಹೊಂದಿರುವವರು” ಎಂದು ಕಿಡಿಕಾರಿದ್ದಾರೆ. 

“”ರಾಜ್ಯ ಸರಕಾರದಿಂದ ಕಾಮಗಾರಿ ಗುತ್ತಿಗೆ ಪಡೆಯುವ ಕಂಟ್ರಾಕ್ಟರ್‌ ಒಬ್ಬ ತಾನೇ ಕೂಲಿಯಾಳುಗಳನ್ನಿಟ್ಟು ಕೆಲಸ ಮಾಡಿಸುತ್ತಾನೆ. ತಾನೇ ಅವರಿಗೆ ಸಂಬಳ ನೀಡುತ್ತಾನೆ. ಹಾಗಾಗಿ, ಅವನ ತಂಡಕ್ಕೆ ಮೀಸಲಾತಿ ಅನ್ವಯವಾಗುವುದಿಲ್ಲ. ಆದರೆ, ಹೊರಗುತ್ತಿಗೆ ವಿಚಾರದಲ್ಲಿ ಹಾಗಾಗುವುದಿಲ್ಲ. ಇಲ್ಲಿ ಸರಕಾರವೇ ಸಂಸ್ಥೆಯೊಂದರಿಂದ ಸೇವೆಯನ್ನು ಪಡೆಯುತ್ತದೆ ಮತ್ತು ಆ ಸಂಸ್ಥೆಯ ನೌಕರರಿಗೆ ಸರಕಾರವೇ ಸಂಬಳ ನೀಡುತ್ತದೆ. ಹಾಗಾಗಿ, ಇಲ್ಲಿ ಮೀಸಲಾತಿ ಯನ್ನು ಅನ್ವಯಿಸಬಹುದು” ಎಂದರು. 

ಇದೇ ವೇಳೆ, ಅಪಮೌಲ್ಯ, ಜಿಎಸ್‌ಟಿ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಉತ್ತರಿಸಿದ ನಿತೀಶ್‌, “”ಜಿಎಸ್‌ಟಿ ತೆರಿಗೆ ಪದ್ಧತಿಯು ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಪರಿಕಲ್ಪನೆಯಾಗಿತ್ತು. ಇನ್ನು, ಅಪಮೌಲ್ಯವು ಕಪ್ಪು ಹಣವನ್ನು ಮಟ್ಟಹಾಕಲು ಕೈಗೊಳ್ಳಲಾದ ಮಹತ್ತರವಾದ ಹೆಜ್ಜೆ. ಆದರೆ, ಈಗೇಕೆ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next