Advertisement

ಪೆಟ್ರೋಲ್‌ ಲೀಟರ್‌ ಗೆ 15 ರೂ.ಗೆ ಲಭ್ಯವಾಗುತ್ತೆ…ಆದರೆ; ಸಚಿವನಿತಿನ್‌ ಗಡ್ಕರಿ ವಾದವೇನು?

05:00 PM Jul 05, 2023 | |

ಜೈಪುರ: ಒಂದು ವೇಳೆ ಜನರು ಸರಾಸರಿ ಶೇ.60ರಷ್ಟು ಎಥೆನಾಲ್‌ ಮತ್ತು ಶೇ.40ರಷ್ಟು ವಿದ್ಯುತ್‌ ಬಳಕೆಯ ವಾಹನಗಳನ್ನು ಬಳಸಿದಲ್ಲಿ, ಮುಂಬರುವ ದಿನಗಳಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ ಬೆಲೆ 15 ರೂಪಾಯಿಯಾಗಲಿದ್ದು, ಇದರಿಂದ ಜನರಿಗೆ ಲಾಭವಾಗುವ ದಿನ ದೂರವಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಬುಧವಾರ (ಜು.05) ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ:ಯಡಮೊಗೆ; ಕಾಲು ಸಂಕದಿಂದ ಆಯತಪ್ಪಿ ನದಿಗೆ ಬಿದ್ದು ವೃದ್ಧ ಮೃತ್ಯು

ರಾಜಸ್ಥಾನದ ಪ್ರತಾಪ್‌ ಗಢದಲ್ಲಿ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಎಥೆನಾಲ್‌ ಉತ್ಪಾದನಾ ವೇಗವನ್ನು ಹೆಚ್ಚಿಸಲಾಗುತ್ತಿದೆ. ಹೀಗಾಗಿ ಒಂದು ವೇಳೆ ಜನರು ಶೇ.60ರಷ್ಟು ಎಥೆನಾಲ್‌ ಚಾಲಿತ ಹಾಗೂ ಶೇ.40ರಷ್ಟು ವಿದ್ಯತ್‌ ಚಾಲಿತ ವಾಹನಗಳನ್ನು ಬಳಸಿದಲ್ಲಿ ನಂತರ ಪೆಟ್ರೋಲ್‌ ಪ್ರತಿ ಲೀಟರ್‌ ಗೆ 15 ರೂಪಾಯಿಗೆ ಲಭ್ಯವಾಗಲಿದೆ. ಇದರಿಂದ ಜನರಿಗೂ ಅನುಕೂಲವಾಗಲಿದೆ ಎಂದರು.

ಎಥೆನಾಲ್‌, ವಿದ್ಯುತ್‌ ಚಾಲಿತ ವಾಹನಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಮಾಲಿನ್ಯ ಮತ್ತು ಆಮದನ್ನು ಕಡಿಮೆ ಮಾಡಬಹುದಾಗಿದೆ. ರೈತರು ಎಥೆನಾಲ್‌ ಉತ್ಪಾದನೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದು, ಇದರಿಂದ ರೈತರ ಆದಾಯ ಕೂಡಾ ದ್ವಿಗುಣಗೊಳ್ಳಲಿದೆ. ದೇಶಾದ್ಯಂತ ರೈತರನ್ನು ಇಂಧನ ಪೂರೈಕೆದಾರರನ್ನಾಗಿ ಮಾಡಬೇಕೆಂಬುದು ಕೇಂದ್ರ ಸರ್ಕಾರದ ಆಶಯವಾಗಿದೆ ಎಂದು ಗಡ್ಕರಿ ಹೇಳಿದರು.

ರೈತರು ಉತ್ಪಾದಿಸಿದ ಎಥೆನಾಲ್‌ ಚಾಲಿತ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆ ಹೊಂದಿರುವುದಾಗಿ ತಿಳಿಸಿರುವ ಸಚಿವ ಗಡ್ಕರಿ ಅವರು, ಈ ವಾಹನಗಳು ಶೇ.60ರಷ್ಟು ಎಥೆನಾಲ್‌ ಮತ್ತು ಶೇ.40ರಷ್ಟು ವಿದ್ಯುತ್‌ ನಿಂದ ಸಂಚಾರ ನಡೆಸಲಿದೆ. ಈ ನಿಟ್ಟಿನಲ್ಲಿ ಪೆಟ್ರೋಲ್‌ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ತಿಳಿಸಿದರು.

Advertisement

ಮುಂಬರುವ ದಿನಗಳಲ್ಲಿ ಬಜಾಜ್‌, ಟಿವಿಎಸ್‌, ಹೀರೋ ಕಂಪನಿಗಳು ಶೇ.100ರಷ್ಟು ಎಥೆನಾಲ್‌ ಚಾಲಿತ ಸ್ಕೂಟರ್‌ ಗಳನ್ನು ತಯಾರಿಸಲಿವೆ ಎಂದು ಸಚಿವ ನಿತಿನ್‌ ಗಡ್ಕರಿ ಈ ಸಂದರ್ಭದಲ್ಲಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next