Advertisement

ಕೇಂದ್ರ ಬಜೆಟ್ 2019; ಚೊಚ್ಚಲ ಬಜೆಟ್ ನಲ್ಲಿ ಟಾಪ್ 10 ಘೋಷಣೆ, NRIಗೆ ಆಧಾರ್!

09:43 AM Jul 06, 2019 | Nagendra Trasi |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2ನೇ ಅವಧಿಯ 2019-20ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ್ದು, ಹಲವು ಬಂಪರ್ ಕೊಡುಗೆಯನ್ನು ಘೋಷಿಸಿದ್ದಾರೆ.

Advertisement

*ಸ್ಟ್ಯಾಂಡ್ ಅಪ್ ಯೋಜನೆಗಳ ಮೂಲಕ ಎಸ್ ಸಿ, ಎಸ್ ಟಿ ಮಹಿಳೆಯರಿಗೆ ಹಣಕಾಸು ನೆರವು. 2 ವರ್ಷಗಳಲ್ಲಿ ಸ್ಟ್ಯಾಂಪ್ ಅಪ್ ಯೋಜನೆಯಡಿ 300 ಉದ್ಯಮ ಸ್ಥಾಪನೆ. ಈ ಮೂಲಕ ಉದ್ಯಮ ಸೃಷ್ಟಿಗೆ ಆದ್ಯತೆ.

* ರೋಬೋಟಿಕ್ ತಂತ್ರಜ್ಞಾನ ಉದ್ಯಮಕ್ಕೆ ಆದ್ಯತೆ. 60 ವರ್ಷ ಮೇಲ್ಪಟ್ಟವರಿಗೆ 3 ಸಾವಿರ ಪೆನ್ಶನ್.

*2022ರ ವೇಳೆಗೆ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ

*2024ರೊಳಗೆ ದೇಶದ ಎಲ್ಲಾ ಗ್ರಾಮೀಣ ಭಾಗದ ಮನೆಗಳಿಗೆ ಹರ್ ಘರ್ ಜಲ್ ಯೋಜನೆಯಡಿ ನೀರಿನ ನಳ್ಳಿ.

Advertisement

*ಮುಂದಿನ 5 ವರ್ಷಗಳಲ್ಲಿ 80,025 ಕೋಟಿ ರೂಪಾಯಿ ವೆಚ್ಚದಲ್ಲಿ 1,25,00 ಕಿಲೋ ಮೀಟರ್ ರಸ್ತೆ ನಿರ್ಮಾಣಕ್ಕೆ ಆದ್ಯತೆ.

*ಬ್ಯಾಂಕ್ ಗಳ ಏಕೀಕರಣಕ್ಕೆ ಹೆಚ್ಚಿನ ಒತ್ತು. ಸರ್ಕಾರದ ಬಂಡವಾಳ ಹಿಂತೆಗೆತ ನೀತಿ ಬದಲಾವಣೆ.

*3ಡಿ ಪ್ರಿಂಟಿಂಗ್ ಅಧ್ಯಯನಕ್ಕೆ ಯುವಕರಿಗೆ ನೆರವು. ಬ್ಯಾಂಕ್ ಗಳ ಏಕೀಕರಣಕ್ಕೆ ಒತ್ತು. ಸಾರ್ವಜನಿಕ ರಂಗದ ಬ್ಯಾಂಕ್ ಗಳಿಗೆ ಹಣ ಮರುಪೂರಣ. ಏರ್ ಇಂಡಿಯಾದಲ್ಲಿ ಹೂಡಿಕೆ ಹಿಂಪಡೆಯಲು ನಿರ್ಧಾರ.

* ದೇಶದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ಮಂಡಳಿ ರಚನೆ. 4 ನೂತನ ಕಾರ್ಮಿಕ ಕೋರ್ಟ್ ಗಳ ಸ್ಥಾಪನೆ,  ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ಭಾರತದ ರಾಯಭಾರ ಕಚೇರಿ. 17 ಪ್ರವಾಸಿ ಕ್ಷೇತ್ರಗಳನ್ನು ವಿಶ್ವದರ್ಜೆಗೇರಿಸಲು ತೀರ್ಮಾನ.

*ದೇಶದ ರೈಲ್ವೆ ಆಧುನೀಕರಣಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ದೇಶದ ಮಹಿಳೆಯರಿಗೆ ಹೆಚ್ಚಿನ ಒತ್ತು..ನಾರಿ ಟು ನಾರಾಯಣಿ ಎಂದು ಪ್ರಸ್ತಾಪಿಸಿದ ನಿರ್ಮಲಾ ಸೀತಾರಾಮನ್ ಹಲವಾರು ಯೋಜನೆ ಘೋಷಿಸಿದರು.

*ಎನ್ ಆರ್ ಐಗಳಿಗೆ “ಆಧಾರ್” ಆಧಾರಿತ ಪಾಸ್ ಪೋರ್ಟ್ ನೀಡಲು ಕ್ರಮ.

Advertisement

Udayavani is now on Telegram. Click here to join our channel and stay updated with the latest news.

Next