Advertisement

ತೈಲ ಬೆಲೆ ಸದ್ಯ ಇಳಿಯದು!  ಜೀವ ಉಳಿಸುವ ಔಷಧಗಳಿಗೆ ಜಿಎಸ್‌ಟಿ ಕಡಿತ

02:00 AM Sep 18, 2021 | Team Udayavani |

ಲಕ್ನೋ : ತೈಲೋತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ ಬರಲಿವೆ, ಈ ಮೂಲಕ ಪೆಟ್ರೋಲ್‌-ಡೀಸೆಲ್‌ ದರ ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಸುಳ್ಳಾಗಿದೆ.

Advertisement

ಶುಕ್ರವಾರ ಲಕ್ನೋದಲ್ಲಿ ನಡೆದ 45ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಸಾಕಷ್ಟು ವಿರೋಧ ವ್ಯಕ್ತವಾಯಿತು. ರಾಜ್ಯ ಸರಕಾರಗಳು ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ ಎನ್ನಲಾಗಿದೆ.

ತೈಲೋತ್ಪನ್ನಗಳನ್ನು ಜಿಎಸ್‌ಟಿ ಅಡಿಗೆ ತರಲು ರಾಜ್ಯಗಳು ಒಪ್ಪಲಿಲ್ಲ ಎಂದು ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು. ಆದರೆ ಬಯೋಡೀಸೆಲ್‌ ಮೇಲಿನ ಜಿಎಸ್‌ಟಿ
ಯನ್ನು ಶೇ. 12ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ ಎಂದು ವಿವರಿಸಿದರು.

ಹಲವು ಔಷಧ ಅಗ್ಗ
ಜಿಎಸ್‌ಟಿ ಮಂಡಳಿ ಸಭೆಯ ಪ್ರಮುಖ ನಿರ್ಧಾರವೆಂದರೆ, ಕೆಲವು ಔಷಧಗಳ ಜಿಎಸ್‌ಟಿ ಇಳಿಕೆ. ಕ್ಯಾನ್ಸರ್‌ ಔಷಧಗಳ ಮೇಲಿನ ತೆರಿಗೆಯನ್ನು ಶೇ. 12ರಿಂದ ಶೇ. 5ಕ್ಕೆ ತಗ್ಗಿಸಲಾಗಿದೆ. ಕೊರೊನಾ ಸಂಬಂಧಿ ಔಷಧಗಳಿಗೆ ಜಿಎಸ್‌ ಟಿ ವಿನಾಯಿತಿಯನ್ನು ಡಿಸೆಂಬರ್‌ ಅಂತ್ಯದ ವರೆಗೆ ವಿಸ್ತರಿಸಲಾಗಿದೆ. ಅತ್ಯಂತ ದುಬಾರಿ ಔಷಧಗಳಾದ ಝೋಲ್ಗೆನ್‌ಸ್ಮಾ ಮತ್ತು ವಿಟೋಪ್ ಸೊ ಗಳಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದೆ.

ಆಹಾರ ಬಟವಾಡೆ ಆ್ಯಪ್‌ಗೆ ಜಿಎಸ್‌ಟಿ
ಝೋಮ್ಯಾಟೋ ಮತ್ತು ಸ್ವಿಗ್ಗಿಯಂತಹ ಆನ್‌ ಲೈನ್‌ ಆಹಾರ ಬಟವಾಡೆ ಆ್ಯಪ್‌ ಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ರೆಸ್ಟೋರೆಂಟ್‌ ಗಳಿಂದ ಈ ತೆರಿಗೆ ವಸೂಲಿ ಮಾಡಲಾಗುತ್ತಿತ್ತು. ಇನ್ನು ಮುಂದೆ ಇದನ್ನು ಆ್ಯಪ್‌ ಗಳೇ ಪಾವತಿಸಬೇಕು.

Advertisement

ಪರಿಹಾರಕ್ಕಾಗಿ ಜಿಒಎಂ
2022ರ ಅನಂತರವೂ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ಸಂಬಂಧ ಪರಿಶೀಲನೆಗಾಗಿ ಸಚಿವರ ಸಮಿತಿ ರಚಿಸಲಾಗಿದೆ. ಈ ಸಮಿತಿಯು 2 ತಿಂಗಳುಗಳ ಒಳಗೆ ತನ್ನ ವರದಿ ಸಲ್ಲಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next