Advertisement

ನೀರ್ಚಾಲು: ಬೇಳ ಬಯಲ ಕೋಲ,  ಕೆಂಡಸೇವೆ ಸಮಾಪ್ತಿ

03:22 PM Apr 11, 2017 | Harsha Rao |

ನೀರ್ಚಾಲು: ನೀರ್ಚಾಲು ಸಮೀಪದ ಬೇಳ ವಿಷ್ಣುಮೂರ್ತಿ ನಗರದ ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಬೇಳ ಇದರ ನೇತೃತ್ವದಲ್ಲಿ ಶ್ರೀ ಕುಮಾರ ಚಾಮುಂಡಿ ಮತ್ತು ಶ್ರೀ ವಿಷ್ಣುಮೂರ್ತಿ ದೈವಗಳಿಗೆ ಬಯಲ ಕೋಲವು ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮೇಲರಿಗೆ ಅಗ್ನಿ ಸ್ಪರ್ಶ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸೇವೆಯು ನೆರವೇರಿತು. ಸಹಸ್ರಾರು ಭಕ್ತರು ಈ  ಸಂದರ್ಭದಲ್ಲಿ  ಪಾಲ್ಗೊಂಡು ಶ್ರೀ ದೇವರ ಅರಸಿನ ಹುಡಿ ಪ್ರಸಾದ ಸ್ವೀಕರಿಸಿದರು.

Advertisement

ಸಾಂಸ್ಕೃತಿಕ ಕಾರ್ಯಕ್ರಮದ ಅಂಗ ವಾಗಿ ನಟರಾಜ ಡ್ಯಾನ್ಸ್‌ ಗ್ರೂಪ್‌ ಬೇಳ ಇವರಿಂದ ನೃತ್ಯ ವೈವಿಧ್ಯ ಹಾಗೂ ಉದಯನ್‌ ಪಂಜಿಕಲ್ಲು ಬೇಳ ಇವರಿಂದ ಭಕ್ತಿಗಾನ ಸುಧಾ ಹಾಗೂ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇದರ ಪುಟಾಣಿಗಳಿಂದ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿರ್ದೇಶನದಲ್ಲಿ ನರಕಾ ಸುರ ಮೋಕ್ಷ ಎಂಬ ಯಕ್ಷಗಾನ ಬಯ ಲಾಟ ಹಾಗೂ ಹಿರಿಯ ವಿದ್ಯಾರ್ಥಿ ಗಳಿಂದ ಸುದರ್ಶನ ವಿಜಯ ಪ್ರದರ್ಶನಗೊಂಡಿತು. 

ಸಿಂಧೂರ ಯುವಕ ವೃಂದ ಬೇಳ ಇವರ ಪ್ರಾಯೋಜಕತ್ವದಲ್ಲಿ ಶಾರದಾ ಆರ್ಟ್ಸ್  ಕಲಾವಿದೆರ್‌ ಮಂಜೇಶ್ವರ ಇವರಿಂದ ತುಳು ಹಾಸ್ಯಮಯ ನಾಟಕ ನಿತ್ಯೆ ಬನ್ನಗ ಪ್ರದರ್ಶನಗೊಂಡಿತು.

ಒತ್ತೆಕೋಲ (ಕೆಂಡಸೇವೆ): 
ಹರಿದ್ವೇಷಿಯಾದ ಹಿರಣ್ಯ ಕಶಿಪು ವನ್ನು ಸಂಹಾರ ಮಾಡಿ ಭಕ್ತ ಪ್ರಹ್ಲಾದ ನನ್ನೂ ದೇವತೆಗಳನ್ನೂ ರಕ್ಷಿಸಲು ಶ್ರೀ ಮನ್ನಾರಾ ಯಣನು ಎತ್ತಿದ ನರಸಿಂಹಾವತಾರವೆ ವಿಷ್ಣು ಮೂರ್ತಿ ದೈವ. ರಾಕ್ಷಸರಿಗೆ ಎಲ್ಲಿಲ್ಲದ ವರಪ್ರದಾನ ಮಾಡಿದ ಹರ,      ಬ್ರಹ್ಮ ,  ಮಹೇಂದ್ರಾದಿಗಳ ಮೇಲೆ ನರಸಿಂಹನ ಎದುರಿಗೆ ಕೆಂಡದ ರಾಶಿಯನ್ನೇ ಸುರಿಸುತ್ತಾನೆ. ಅದನ್ನೇ  ನರಸಿಂಹನು ತನ್ನ ವೈರಿಯೆಂದು ತಿಳಿದು ಸಂಪೂರ್ಣ ನಾಶಮಾಡಿ ಕೋಪ ಶಮನ ಮಾಡಿಕೊಳ್ಳುತ್ತಾನೆ. ಇದೇ ಕೆಂಡಸೇವೆ-ಒತ್ತೆಕೋಲ.

Advertisement

Udayavani is now on Telegram. Click here to join our channel and stay updated with the latest news.

Next