Advertisement

1,000 ಕಿ.ಮೀ. ವ್ಯಾಪ್ತಿಯ ಸಬ್‌ ಸೋನಿಕ್‌ ಕ್ರೂಯಿಸ್‌ ಕ್ಷಿಪಣಿ ನಿರ್ಭಯ್‌ ಯಶಸ್ವೀ ಪರೀಕ್ಷೆ

09:50 AM Apr 17, 2019 | Sathish malya |

ಹೊಸದಿಲ್ಲಿ : 1,000 ಕಿ.ಮೀ. ದಾಳಿ ವ್ಯಾಪ್ತಿಯ ನಿರ್ಭಯ್‌ ಹೆಸರಿನ ಸಬ್‌ ಸೋನಿಕ್‌ ಕ್ರೂಯಿಸ್‌ ಮಿಸೈಲನ್ನು ಇಂದು ಒಡಿಶಾದ ದೂರ ಸಮುದ್ರದಲ್ಲಿ ಪರೀಕ್ಷಿಸಲಾಯಿತು.

Advertisement

ಬೆಂಗಳೂರಿನ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್‌ಲಿಷ್‌ಮೆಂಟ್‌ (ಎಡಿಇ) ಅಭಿವೃದ್ಧಿ ಪಡಿಸಿರುವ ದೂರ ವ್ಯಾಪ್ತಿ ದಾಳಿಯ ನಿರ್ಭಯ್‌, ಸರ್ವಋತು ಕ್ಷಿಪಣಿಯಾಗಿದೆ.

ಇದನ್ನು ಬಹು ವೇದಿಕೆಗಳ ಮೂಲಕ ಹಾರಿಸಬಹುದಾಗಿದೆ. ಇದು ಸಾಂಪ್ರದಾಯಿಕ ಮತ್ತು ಅಣು ಸಿಡಿತಲೆಗಳನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಎಡಿಇ ವಿಭಾಗವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯಡಿ ಕಾರ್ಯನಿರ್ವಹಿಸುತ್ತದೆ.

ನಿರ್ಭಯ್‌ ದೂರ ವ್ಯಾಪ್ತಿ ದಾಳಿಯ ಕ್ಷಿಪಣಿಯು ರಿಂಗ್‌ ಲೇಸರ್‌ ಗೈರೋಸ್ಕೋಪ್‌ (ಆರ್‌ಎಲ್‌ಜಿ) ನೆಲೆಯ ಮಾರ್ಗದರ್ಶನ, ನಿಯಂತ್ರಣ ಮತ್ತು ಪರಿಭ್ರಮಣ ವ್ಯವಸ್ಥೆಯನ್ನು ಹೊಂದಿದೆ. ಇದು ಏಕಕಾಲದಲ್ಲಿ 24 ವಿವಿಧ ಮಾದರಿಯ ಸಿಡಿತಲೆಗಳನ್ನು ಹೊತ್ತೂಯ್ಯುವ ಸಾಮರ್ಥ್ಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next