ಮಂಡ್ಯ: 3 ವರ್ಷಗಳಿಂದ ಕಬ್ಬು ಅರೆಯುವಿಕೆ ಕಾರ್ಯ ಸ್ಥಗಿತಗೊಳಿಸಿದ್ದ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಅಂತಿಮವಾಗಿ ನಿರಾಣಿ ಕಂಪನಿ ತೆಕ್ಕೆಗೆ ಸೇರಿಕೊಂಡಿದೆ. ರಾಜ್ಯಸರ್ಕಾರ 40 ವರ್ಷ ಕಾಲ ಕಂಪನಿಯನ್ನು ಗುತ್ತಿಗೆ ನೀಡಲು ತೀರ್ಮಾನಿಸಿದೆ. ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಗುತ್ತಿಗೆ ಪಡೆಯಲು ನಿರಾಣಿ ಕಂಪನಿ ಹಾಗೂ ಎನ್‌ಎಸ್‌ಎಲ್ ಕಂಪನಿಗಳು ಟೆಂಡರ್ ಹಾಕಿದ್ದವು. ಹಣಕಾಸು ಟೆಂಡರ್ ಪ್ರಕ್ರಿಯೆಯಲ್ಲಿ ಎನ್‌ಎಸ್ ಎಲ್ ಕಂಪನಿ ತಿರಸ್ಕೃತಗೊಂಡಿದ್ದರಿಂದ ಅಂತಿಮವಾಗಿ ನಿರಾಣಿ ಕಂಪನಿಗೆ ಟೆಂಡರ್ ದೊರಕಿದೆ.
ಕಂಪನಿಗೆ ಸರ್ಕಾರ ವಿಧಿಸುವ ಷರತ್ತು, ಆರ್ಥಿಕ ವ್ಯವಹಾರಗಳ ಕುರಿತ ಪ್ರಕ್ರಿಯೆಗಳು ಮುಂದುವ ರೆದಿವೆ ಎಂದು ತಿಳಿದು ಬಂದಿದೆ. ದುಡಿಯುವ ಬಂಡವಾಳದ ಕೊರತೆಯಿಂದ ಕಾರ್ಖಾನೆ ಯನ್ನು ಈವರೆಗೆ ಆರಂಭಿಸಲು ಸಾಧ್ಯವಾಗಿಲ್ಲ. ಪಿಎಸ್‌ಎಸ್‌ಕೆ ಆಡಳಿತ ಮಂಡಳಿ ಸರ್ವ ಸದಸ್ಯರ ವಿಶೇಷ ಮಹಾಸಭೆಯಲ್ಲಿ ಕಂಪನಿಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ನಿರ್ಣಯ ಕೈಗೊಂಡಿತ್ತು. ಸರ್ಕಾರವೂ ಅದಕ್ಕೆ ಸಹಮತ ವ್ಯಕ್ತಪಡಿಸಿ ನಿರಾಣಿ ಕಂಪನಿಗೆ ಗುತ್ತಿಗೆ ನೀಡುವ ನಿರ್ಧಾರ ಕೈಗೊಂಡಿದೆ.
ನಿರಾಣಿ ಕಂಪನಿ ಹೊಣೆಗಾರಿಕೆ: ಕಬ್ಬು ಅರೆಯುವಿಕೆ ಕಾರ್ಯ ಸ್ಥಗಿತದಿಂದ ಪಿಎಸ್‌ಎಸ್‌ಕೆ ವ್ಯಾಪ್ತಿಯ 7.50 ಲಕ್ಷ ಟನ್ ಕಬ್ಬನ್ನು ಸಾಗಣೆ ಮಾಡುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿತ್ತು. ಸರ್ಕಾರಿ ಸ್ವಾಮ್ಯದಡಿ ಕಂಪನಿ ಮುನ್ನಡೆಸುವುದು ಸಾಧ್ಯವಿಲ್ಲದಿರುವುದನ್ನು ಮನಗಂಡು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲು ಸರ್ಕಾರ ತೀರ್ಮಾನಿಸಿ ನಿರಾಣಿ ಕಂಪನಿ ಹೊಣೆಗಾರಿಕೆ ವಹಿಸಿದೆ.
ಕಬ್ಬಿನ ಸಕ್ಕರೆ ಇಳುವರಿಯ ಶೇಕಡಾವಾರು ಪ್ರಮಾಣ 1995-96 ಹಾಗೂ 1996-97ನೇ ಸಾಲನ್ನು ಹೊರತುಪಡಿಸಿ ದರೆ ಬೇರಾವುದೇ ವರ್ಷದಲ್ಲಿ ಶೇ.9ರ ಪ್ರಮಾಣಕ್ಕೆ ವೃದಿಯಾಗಲಿಲ್ಲ. 31.3.2019ರ ಅಂತ್ಯಕ್ಕೆ ಒಟ್ಟಾರೆ 353.34 ಕೋಟಿ ರೂ. ನಷ್ಟ ಅನುಭವಿಸಿದ್ದ ಕಾರ್ಖಾನೆ 157.225 ಎಕರೆ ಭೂಮಿಯೊಂದಿಗೆ 110.94 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದೆ. 2010ರಿಂದ 2018ರವರೆಗೆ ಸರ್ಕಾರಗಳು 103.46 ಕೋಟಿ ರೂ. ಹಣವನ್ನು ಕಾರ್ಖಾನೆಗೆ ದುಡಿಯುವ ಬಂಡವಾಳ ನೀಡಿ ದ್ದರೂ ಕಾರ್ಖಾನೆ ಪ್ರಗತಿಯತ್ತ ಮುನ್ನಡೆಯಲೇ ಇಲ್ಲ.
ವಿಧಿ-ವಿಧಾನಗಳ ರೂಪು-ರೇಷೆ ಕ್ರಮಬದತೆಯಿಂದ ಕೂಡಿರದ ಕಾರಣ ಕಬ್ಬು ಅರೆಯುವಿಕೆ ಪರಿಪೂರ್ಣಗೊಳ್ಳಲಿಲ್ಲ. ಕಬ್ಬು ಅರೆ ಯುವಿಕೆ ಸಾಮರ್ಥ್ಯವನ್ನು ಪೂರ್ಣವಾಗಿ ಬಳಕೆ ಮಾಡದಿರುವು ದು ಕಾರ್ಖಾನೆ ನಷ್ಟದ ಹಾದಿ ಹಿಡಿಯಲು ಕಾರಣವಾಯಿತು. ಕಾರ್ಖಾನೆಯಲ್ಲಿ 31.8.2019ರ ಅಂತ್ಯಕ್ಕೆ 144 ನೌಕರರಿದ್ದು, ಅವರ 27 ತಿಂಗಳ ವೇತನ, ಸ್ವಯಂ ನಿವೃತ್ತಿ ಹಾಗೂ ಇತರೆ ಶಾಸನಬದಟಛಿ ಪಾವತಿಗಳಿಗೆ 20 ಕೋಟಿ ರೂ. ಅಗತ್ಯವಿದ್ದು, ಈ ಹಣ ನೀಡಿದರೆ ನೌಕರರ ಸಮಸ್ಯೆ ಬಗೆಹರಿಯಲಿದೆ.
ಹಿಂದೆಯೂ ಕೊಠಾರಿ ಕಾರ್ಖಾನೆಗೆ ಗುತ್ತಿಗೆ: 2004ರಲ್ಲಿ ಪಿಎಸ್ ಎಸ್‌ಕೆ ಕಾರ್ಖಾನೆಯನ್ನು ಕೊಠಾರಿ ಷುಗರ್ನವರಿಗೆ 7 ವರ್ಷ ಗುತ್ತಿಗೆ ನೀಡಲಾಗಿತ್ತು. ಆ ವೇಳೆ 2 ಕೋಟಿ ರೂ. ಠೇವಣಿ ಇರಿಸಿಕೊಳ್ಳಲಾಗಿತ್ತು. ಆ ವೇಳೆ ಗುತ್ತಿಗೆ ಅವಧಿ ವಿಸ್ತರಣೆ ಮಾಡುವಂತೆ ಸರ್ಕಾರದ ಮೇಲೆ ಕೊಠಾರಿ ಷುಗರ್ ಆಡಳಿತ ಮಂಡಳಿ ಒತ್ತಡ ಹೇರುತ್ತಲೇ ಇತ್ತು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿರಲಿಲ್ಲ.ಕೊನೆಗೆ 2 ವರ್ಷದಲ್ಲಿ 3.5 ಲಕ್ಷ ಟನ್ ಕಬ್ಬು ಅರೆದು ಗುತ್ತಿ ಗೆ ಕೈಬಿಟ್ಟಿತು. ಕೊಠಾರಿ ಕಾರ್ಖಾನೆ ಗುತ್ತಿಗೆ ಕೊನೆಗೊಳಿಸಿಕೊಂಡರೂ ಅವರು ಇಟ್ಟಿದ್ದ 2 ಕೋಟಿ ರೂ. ಠೇವಣಿಯನ್ನು ವಾಪಸ್ ನೀಡಿದರು. 2 ವರ್ಷದಲ್ಲಿ ಸರ್ಕಾರಕ್ಕೆ ನೀಡಬೇಕಾದ ಹಣದ ಮೇಲೆ ಬಡ್ಡಿ ರಿಯಾಯಿತಿಯನ್ನೂ ನೀಡಿ ಗೌರವದಿಂದ ಕಳುಹಿಸಿಕೊಟ್ಟಿತ್ತು ಎಂದು ಪಿಎಸ್‌ಎಸ್‌ಕೆ ಮಾಜಿ ಅಧ್ಯಕ್ಷ ಕೆ.ಎಸ್. ನಂಜುಂಡೇಗೌಡ ನೆನೆದರು.
ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆಯಲು ನಿರಾಣಿ ಕಂಪನಿಗಳು ಟೆಂಡರ್ ಹಾಕಿದ್ದವು. ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಫೈನಾನ್ಷಿಯಲ್ ಬಿಡ್‌ನಲ್ಲಿ ಹೊರ ಬಿದ್ದಿದ್ದರಿಂದ ನಿರಾಣಿ ಕಂಪನಿಗೆ ಗುತ್ತಿಗೆ ದೊರಕಿದೆ.
-ಡಾ.ಖಂಡಗಾವಿ, ವ್ಯವಸ್ಥಾಪಕ ನಿರ್ದೇಶಕ, ಪಿಎಸ್‌ಎಸ್‌ಕೆ