Advertisement
ಆಹಾರ ಹುಡುಕಿಕೊಂಡು ಕಾಡಿನಲ್ಲಿರ ಬೇಕಾದ ಪ್ರಾಣಿ ಪಕ್ಷಿಗಳು ನಾಡಿನತ್ತ ಆಗಮಿಸು ತ್ತಿದ್ದು, ಪರಿಸರ ಅಸಮತೋಲನ ದಿಂದ ಕಣ್ಣಿಗೆ ಕಾಣ ದಂತೆ ಅನೇಕ ಜೀವ ಜಂತುಗಳು ದೂರವಾಗುತ್ತಿವೆ. ಈಗ ಈ ಸಾಲಿಗೆ ಬಾವಲಿಗಳು ಸೇರುತ್ತಿವೆ. ನಿಪ ವೈರಾಣು ಬಾವಲಿಗಳಿಂದ ಹರಡುತ್ತಿದೆ ಎಂದು ಅವು ಗಳನ್ನು ಸಾಯಿಸಲು ಮುಂದಾಗುತ್ತಿದ್ದಾರೆ.
ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಿಪ ವೈರಾಣುವಿನಿಂದ ಕಾಣಿಸಿಕೊಳ್ಳುತ್ತಿರುವ ರೋಗದಿಂದ ಮನುಷ್ಯ ಉಳಿಯುವುದಿಲ್ಲ ಎನ್ನುವ ಹಿನ್ನೆಲೆಯಲ್ಲಿ ಈ ವೈರಾಣು ಬಾವಲಿಗಳಿಂದ ಮತ್ತು ಕೆಲವು ಹಕ್ಕಿ ಪಕ್ಷಿಗಳಿಂದ ಹಂದಿಗಳಿಂದ ಹರಡುತ್ತದೆ ಎನ್ನುವ ಸುದ್ದಿ ಹಿನ್ನೆಲೆಯಲ್ಲಿ ಈಗ ಈ ಬಾವಲಿಗಳ ಸಂತತಿಯನ್ನು ನಾಶ ಮಾಡಲು ಹೊರಟಿರುವುದು ಅಪರೂಪದ ಪಕ್ಷಿಗಳ ವಿನಾಶ ಮಾಡಿದಂತೆ ಆಗುತ್ತದೆ. ಬಾವಲಿಗಳಿಂದ ನಿಪ ವೈರಾಣು ಹರಡುತ್ತಿಲ್ಲ ಎಂದು ಈಗಾಗಲೇ ಧೃಡಪಟ್ಟಿದೆ. ಆದರೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಬಾವಲಿಗಳನ್ನು ಹಿಡಿದು ಸಾಯಿಸಿ ಅವುಗಳನ್ನು ಭೂಮಿಯಲ್ಲಿ
ಹೂಳಲು ತೀರ್ಮಾನ ಕೈಗೊಂಡಿರುವುದು ಪಕ್ಷಿ ಪ್ರಿಯರಿಗೆ ಆತಂಕ ಉಂಟಾಗಿದೆ.
Related Articles
Advertisement
ನಿಪ ರೋಗ ಕಾಣಿಸಿಕೊಂಡಿರುವುದು ಕೇರಳದಲ್ಲಿ. ತುಮಕೂರಿಗೂ ಕೇರಳಕ್ಕೂ ನೂರಾರು ಕಿ.ಮೀ. ಅಂತರವಿದೆ. ಬಾವಲಿಗಳ ಒಂದು ದಿನಕ್ಕೆ ಹತ್ತರಿಂದ ಹದಿನೈದು ಕಿ.ಮೀ. ದೂರ ಹೋಗಿ ಆಹಾರ ಸೇವಿಸಿ ಬೆಳಗಾಗುವುದರೊಳಗೆ ತಮ್ಮ ಸ್ಥಳಕ್ಕೆ ಬಂದು ಮರದಲ್ಲಿ ನೇತಾಡುತ್ತವೆ. ಈ ಬಾವಲಿಗಳಿಗೆ ಆ ವೈರಾಣು ಹರಡಿಲ್ಲ ಆದರೆ ಈ ಬಾಗದಬಾವಲಿಗಳನ್ನು ಹಿಡಿದು ಸಾಯಿಸಲು ಗ್ರಾಮ ಪಂಚಾಯಿತಿ ನಿರ್ಧಾರ ಕೈಗೊಂಡಿರುವುದು ಎಷ್ಟು ಸರಿ ಎನ್ನುವ ಚರ್ಚೆ ಆರಂಭಗೊಂಡಿದೆ. ಈಗಾಗಲೇ ಹಲವು ಪಕ್ಷಿ ಸಂಕುಲ ನಾಶವಾಗಿವೆ ಇರುವ ಪಕ್ಷಿಗಳನ್ನು ಸಂರಕ್ಷಿಸಿ ಅವುಗಳ ಸಂತತಿಯನ್ನು ಬೆಳವಣಿಗೆ ಮಾಡುವತ್ತ ಸರ್ಕಾರ ಸೂಕ್ತ ದಿಟ್ಟ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯಲ್ಲಿ ಎಲ್ಲಿಯೂ ಬಾವಲಿ ಸೇರಿದಂತೆ ಯಾವುದೇ ಪ್ರಾಣಿ ಪಕ್ಷಿಗಳನ್ನು ಸಾಯಿಸದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಚಿ.ನಿ. ಪುರುಷೋತ್ತಮ್