Advertisement
ಜಾಂಜ್‌ಗಿರ್-ಚಂಪಾದಲ್ಲಿರುವ ಬಿರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕಿಕಿರ್ದಾ ಗ್ರಾಮದಲ್ಲಿ ರಾಮಚಂದ್ರ ಜೈಸ್ವಾಲ್ (60), ರಮೇಶ್ ಪಟೇಲ್ (50), ಅವರ ಇಬ್ಬರು ಮಕ್ಕಳಾದ ರಾಜೇಂದ್ರ (20) ಮತ್ತು ಜಿತೇಂದ್ರ (25), ಮತ್ತು ಟಿಕೇಶ್ವರ್ ಚಂದ್ರ (25) ಮೃತಪಟ್ಟಿದ್ದಾರೆ ಎಂದು ಬಿಲಾಸ್‌ಪುರ ರೇಂಜ್ ಇನ್‌ಸ್ಪೆಕ್ಟರ್ ಸಂಜೀವ್ ಶುಕ್ಲಾ ತಿಳಿಸಿದ್ದಾರೆ.
Related Articles
Advertisement
ಇನ್ನೊಂದು ಘಟನೆ
ಕೊರ್ಬಾದಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಜಹ್ರು ಪಟೇಲ್ (60), ಅವರ ಮಗಳು ಸಪಿನಾ (16) ಮತ್ತು ಕುಟುಂಬದ ಇತರ ಇಬ್ಬರು ಸದಸ್ಯರಾದ ಶಿವಚರಣ್ ಪಟೇಲ್ (45) ಮತ್ತು ಮನ್ಬೋಧ್ ಪಟೇಲ್ (57) ಸಾವನ್ನಪ್ಪಿದ್ದಾರೆ.
“ಪ್ರಾಥಮಿಕ ಮಾಹಿತಿಯ ಪ್ರಕಾರ, ಜಹರು ಅವರು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಾವಿಗೆ ಬಿದ್ದಿದ್ದು, ಮಗಳು ಅವನನ್ನು ಉಳಿಸಲು ಬಾವಿಗೆ ಇಳಿದಿದ್ದು ಇಬ್ಬರೂ ಹೊರಗೆ ಬರದಿದ್ದಾಗ ಮತ್ತಿಬ್ಬರು ಬಾವಿಗೆ ಹಾರಿದ್ದು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಮೇಲ್ನೋಟಕ್ಕೆ, ಬಾವಿಯೊಳಗೆ ಕೆಲವು ವಿಷಕಾರಿ ಅನಿಲವಿತ್ತು, ಇದು ಉಸಿರುಗಟ್ಟಿ ಮುಳುಗಲು ಕಾರಣವಾಯಿತು. ಆದರೆ, ತನಿಖೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಕೊರ್ಬಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ತಿವಾರಿ ಹೇಳಿದ್ದಾರೆ.
ಎರಡೂ ಘಟನೆಗಳಲ್ಲಿ, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬಂದಿಯಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಎರಡು ಘಟನೆಗಳಿಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 9 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.