Advertisement

ಕೇರಳದ ನಿಹಾಲ್‌ ಸರಿನ್‌: ಭಾರತದ 53ನೇ ಗ್ರ್ಯಾನ್‌ಮಾಸ್ಟರ್‌

06:00 AM Aug 16, 2018 | Team Udayavani |

ಹೊಸದಿಲ್ಲಿ: ಭಾರತದ “ಯಂಗ್‌ ಚೆಸ್‌ ಸೆನ್ಸೇಶನ್‌’ ನಿಹಾಲ್‌ ಸರಿನ್‌ ದೇಶದ 53ನೇ ಗ್ರ್ಯಾನ್‌ಮಾಸ್ಟರ್‌ ಆಗಿ ಮೂಡಿಬಂದಿದ್ದಾರೆ. ಅವರು ಅಬುಧಾಬಿ ಮಾಸ್ಟರ್ ಚೆಸ್‌ ಪಂದ್ಯಾವಳಿಯಲ್ಲಿ ಈ ಹಿರಿಮೆಗೆ ಪಾತ್ರರಾದರು. ಉಜ್ಬೇಕಿಸ್ಥಾನದ ಟೆಮುರ್‌ ಕುಯೊºಕರೋವ್‌ ವಿರುದ್ಧ ನಡೆದ 8ನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಮೂಲಕ ನಿಹಾಲ್‌ “ಗ್ರ್ಯಾನ್‌ಮಾಸ್ಟರ್‌ ಪದವಿ’ ಪಡೆದರು. ನಿಹಾಲ್‌ ಈ ಹಿರಿಮೆಗೆ ಪಾತ್ರರಾದ ಕೇರಳದ ಕೇವಲ 3ನೇ ಚೆಸ್‌ ಸಾಧಕ. ಉಳಿದಿಬ್ಬರೆಂದರೆ ಜಿ.ಎನ್‌. ಗೋಪಾಲನ್‌ ಮತ್ತು. ಎಸ್‌.ಎಲ್‌. ನಾರಾಯಣನ್‌.

Advertisement

14ರ ಹರೆಯದ ಮೊದಲ ಹಾಗೂ ಎರಡನೇ “ಗ್ರ್ಯಾನ್‌ಮಾಸ್ಟರ್‌ ನಾರ್ಮ್’ಗಳನ್ನು ಟಿವಿ2 ಫ‌ಗೆರ್ನೆಸ್‌ ಮತ್ತು ರಿಕಾjವಿಕ್‌ ಓಪನ್‌ ಕೂಟಗಳಲ್ಲಿ ಪಡೆದುಕೊಂಡಿದ್ದರು. “ಥರ್ಡ್‌ ನಾರ್ಮ್’ಗಾಗಿ ಉಜ್ಬೇಕಿಸ್ಥಾನ್‌ ಚೆಸ್‌ ಕೂಟದ 8ನೇ ಸುತ್ತಿನಲ್ಲಿ ಕನಿಷ್ಠ ಡ್ರಾ ಸಾಧಿಸಿದರೆ ಸಾಕಿತ್ತು. 7ನೇ ಸುತ್ತಿನಲ್ಲಿ ನಿಹಾಲ್‌ ರೊಮೇನಿಯಾದ ಗ್ರ್ಯಾನ್‌ಮಾಸ್ಟರ್‌ ಕಾನ್‌ಸ್ಟಂಟೀನ್‌ ಲುಪುಲೆಸ್ಕಾ ವಿರುದ್ಧ ಡ್ರಾ ಮಾಡಿಕೊಂಡಿದ್ದರು.

ಎಎಲ್‌ಒ ರೇಟಿಂಗ್‌ 2,556
ನಿಹಾಲ್‌ ಸರಿನ್‌ ಈ ಕೂಟದಲ್ಲಿ ಒಟ್ಟು 5.5 ಅಂಕ ಸಂಪಾ ದಿಸಿದ್ದಾರೆ. ಅವರ ಈಗಿನ ಎಎಲ್‌ಒ ರೇಟಿಂಗ್‌ 2,556. 
ಈ ವರ್ಷದ ಆರಂಭದಲ್ಲಿ ಆರ್‌. ಪ್ರಜ್ಞಾನಂದ ಅವರು ದೇಶದ 52ನೇ ಗ್ರ್ಯಾನ್‌ಮಾಸ್ಟರ್‌ ಆಗಿ ಮೂಡಿಬಂದಿದ್ದರು. ಅಷ್ಟೇ ಅಲ್ಲ, ವಿಶ್ವದ 2ನೇ ಕಿರಿಯ ಗ್ರ್ಯಾನ್‌ಮಾಸ್ಟರ್‌ ಎಂಬ ಹಿರಿಮೆಗೂ ಪಾತ್ರರಾಗಿದ್ದರು (12 ವರ್ಷ, 10 ತಿಂಗಳು, 13 ದಿನ). ಲೆಜೆಂಡ್ರಿ ಚೆಸ್‌ ಆಟಗಾರ ವಿಶ್ವನಾಥನ್‌ ಆನಂದ್‌ 1988ರಲ್ಲಿ ಭಾರತ ಪ್ರಪ್ರಥಮ ಗ್ರ್ಯಾನ್‌ಮಾಸ್ಟರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದರು. 2002ರಲ್ಲಿ ಕೊನೆರು ಹಂಪಿ ದೇಶದ ಮೊದಲ ವನಿತಾ ಗ್ರ್ಯಾನ್‌ಮಾಸ್ಟರ್‌ ಎನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next