Advertisement

ಅಹೋ ರಾತ್ರಿ ಸಂಗೀತ ಕಾರ್ಯಕ್ರಮ 

12:30 AM Mar 02, 2019 | |

ಗುರು ರಾವ್‌ ದೇಶಪಾಂಡೆ ಸಂಗೀತ ಸಭೆ ವತಿಯಿಂದ ಅಹೋರಾತ್ರಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ. ಇದು 36ನೇ ವರ್ಷದ ಕಾರ್ಯ ಕ್ರಮವಾಗಿದ್ದು, ರಾತ್ರಿ 9ರಿಂದ ಬೆಳಗ್ಗೆ 7ರವರೆಗೆ ಬಸವನಗುಡಿಯ ಪಥಿ ಸಭಾಂಗಣದಲ್ಲಿ ಶಾಸ್ತ್ರೀಯ ರಾಗಗಳು ಅನುರಣಿಸಲಿವೆ.

Advertisement

ಈ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಾದ ಪಂಡಿತಾ ಶುಭಾ ಮುದ್ಗಲ್‌ ,ಪಂ. ಉದಯ್‌ ಭವಾಲ್ಕರ್‌ (ಧ್ರುಪದ್‌ ಗಾಯನ), ಪಂ.ವಿನಾಯಕ ತೊರವಿ (ಶಾಸ್ತ್ರೀಯ ಗಾಯನ), ವಿದುಷಿ ಜಯಂತಿ ಕುಮರೇಶ್‌ (ಕರ್ನಾಟಕೀ ವೀಣಾ), ಪಂ.ರವೀಂದ್ರ ಯಾವಗಲ್‌ (ತಬಲಾ ಸೋಲೋ), ಪಂ. ರುಚಿರಾ ಪಾಂಡಾ (ಶಾಸ್ತ್ರೀಯ ಗಾಯನ) ಭಾಗವಹಿಸಲಿದ್ದಾರೆ.

ಅಹೋರಾತ್ರಿ ಯಾಕೆ?
ಹಿಂದೂಸ್ಥಾನಿ ಸಂಗೀತದಲ್ಲಿ ಕೆಲವು ರಾಗಗಳನ್ನು ಕೆಲವು ಸಮಯದಲ್ಲಿ ಮಾತ್ರ ಹಾಡಬಹುದಾಗಿದೆ. ದರ್ಬಾರಿ, ಮಿಯಾ ಮಲ್ಹಾರ್‌,ಸೋಹಿನಿ, ಜೈಜೈವಂತಿ ಮುಂತಾದ ರಾಗಗಳು ಮಧ್ಯರಾತ್ರಿಯ ರಾಗಗಳು. ಅವುಗಳನ್ನು ಬೇರೆ ಸಮಯದಲ್ಲಿ ಹಾಡುವುದಿಲ್ಲ.

ಹಾಗೆಯೇ ಲಲತ್‌, ಭಟಿಯಾರ್‌, ಭಂಕಾರ್‌ ರಾಗಗಳು ಬೆಳಗಿನ ಜಾವದ ರಾಗಗಳು. ಸಾಮಾನ್ಯವಾಗಿ ಸಂಗೀತ ಕಛೇರಿಗಳು ರಾತ್ರಿ 10ರ ಒಳಗೆ ಮುಗಿಯುವುದರಿಂದ, ಈ ಅಪರೂಪದ ರಾಗಗಳನ್ನು ಕೇಳುವ ಅವಕಾಶ ಶ್ರೋತೃಗಳಿಗೆ ಸಿಗುವುದಿಲ್ಲ. ದೇಶಪಾಂಡೆ ಸಂಗೀತ ಸಭಾದ ಈ ಕಾರ್ಯಕ್ರಮದಲ್ಲಿ ಅಪರೂಪದ ರಾಗಗಳಿಗೂ ನೀವು ಕಿವಿಯಾಗಬಹುದು.

ಗುರು ಗಂಧರ್ವ ಪುರಸ್ಕಾರ ಖ್ಯಾತ ತಬಲಾ ವಾದಕ ಪಂ. ರವೀಂದ್ರ ಯಾವಗಲ್‌ ಅವರಿಗೆ ಸಭೆಯ ವತಿಯಿಂದ “ಗುರುಗಂಧರ್ವ’- ಗುರುರಾವ್‌ ದೇಶಪಾಂಡೆ ರಾಷ್ಟ್ರೀಯ ಸಂಗೀತ ಪುರಸ್ಕಾರ ನೀಡಿ ಗೌರವಿಸಲಾಗುವುದು.

Advertisement

ಎಲ್ಲಿ?: ಪಥಿ ಸಭಾಂಗಣ,ರಾಮ ಮಂದಿರ, ಎನ್‌.ಆರ್‌.ಕಾಲೊನಿ ಬಸ್‌ ನಿಲ್ದಾಣದ
ಎದುರು, ಬಸವನಗುಡಿ

ಯಾವಾಗ?: ಮಾ.2,ಶನಿವಾರ ರಾತ್ರಿ 9ರಿಂದ
ಪ್ರವೇಶ: ಉಚಿತ

Advertisement

Udayavani is now on Telegram. Click here to join our channel and stay updated with the latest news.

Next