Advertisement
ದಕ್ಷಿಣ ಕನ್ನಡದಲ್ಲಿ ರಾತ್ರಿ ಕರ್ಫ್ಯೂವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವುದಕ್ಕಾಗಿ ಪೊಲೀಸರು ಮಂಗಳವಾರ ಸಂಜೆಯಿಂದಲೇ ವಿವಿಧೆಡೆ ಬ್ಯಾರಿಕೇಡ್‌ಗಳನ್ನು ಅಳ ವಡಿಸಿ ಸರಕಾರದ ಸೂಚನೆಯಂತೆ ರಾತ್ರಿ 10ರ ಅನಂತರ ತೀರಾ ಅಗತ್ಯದ ಉದ್ದೇಶಗಳಿಗೆ ಮಾತ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಿದ್ದಾರೆ.
ಉಡುಪಿ: ರಾತ್ರಿ ಕರ್ಫ್ಯೂ ಕಟ್ಟುನಿಟ್ಟಿನ ಜಾರಿ ಮತ್ತು ನಿಯಮ ಉಲ್ಲಂ ಸುವವರ ವಿರುದ್ಧ ಕಠಿನ ಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ 800ಕ್ಕೂ ಅಧಿಕ ಸಿಬಂದಿ ನಿಯೋಜನೆ ಮಾಡಿದೆ. ಸಿಬಂದಿ ವರ್ಗ ಮಂಗಳವಾರ ರಾತ್ರಿಯಿಂದಲೇ ಪರಿಶೀಲನೆ ಪ್ರಕ್ರಿಯೆ ಅರಂಭಿಸಿದ್ದಾರೆ.
Related Articles
Advertisement
ಇದನ್ನೂ ಓದಿ:ಚೀನಾ ಗಡಿಭಾಗದಲ್ಲಿ 27 ರಸ್ತೆ ನಿರ್ಮಾಣಕ್ಕೆ ಚಾಲನೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬಿಗಿ ಭದ್ರತೆಈ ವಿಷಯವಾಗಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಜಿಲ್ಲೆಯಲ್ಲಿ 25 ಚೆಕ್‌ಪೋಸ್ಟ್ ತೆರೆಯಲಾಗಿದೆ. ಇಲ್ಲಿ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿರಂತರ ತಪಾಸಣೆ ಇರಲಿದೆ. 46 ಪಿಕೆಟಿಂಗ್ ಪಾಯಿಂಟ್ ಗುರುತಿಸಲಾಗಿದೆ. ಅಲ್ಲಿಯೂ ಬ್ಯಾರಿಕೇಡ್‌ಗಳನ್ನು ಹಾಕಿ, ತಪಾಸಣೆಗೆ ಸಿಬಂದಿ ನಿಯೋಜನೆ ಮಾಡಿದ್ದೇವೆ. ಒಟ್ಟಾರೆಯಾಗಿ 800ಕ್ಕೂ ಅಧಿಕ ಸಿಬಂದಿ, 70ಕ್ಕೂ ಅಧಿಕ ಅಧಿಕಾರಿಗಳು, ಐದು ಡಿಆರ್, ಒಂದು ಕ್ಷಿಪ್ರ ಪಡೆ ಹಾಗೂ ಮೂರು ಇಂಟರ್‌ಸೆಪ್ಟರ್ ವಾಹನಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ ಎಂದರು. ರಾತ್ರಿ ಕರ್ಫ್ಯೂ ವೇಳೆ ಅನಿವಾರ್ಯ ಕಾರಣಗಳಿಗೆ ಸಂಚಾರ ಮಾಡುವವರು ಸೂಕ್ತ ದಾಖಲೆಗಳನ್ನು ಪೊಲೀಸರ ತಪಾಸಣೆ ಸಂದರ್ಭ ನೀಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ರಾತ್ರಿ ಕರ್ಫ್ಯೂ ಸಂದರ್ಭ ಸಾರ್ವಜನಿಕರು ಅನಗತ್ಯ ಓಡಾಟ ಮಾಡಬಾರದು. ಖಾಸಗಿ ಸಂಸ್ಥೆಯ ನೌಕರ ವರ್ಗ ಅಥವಾ ರಾತ್ರಿ ಪಾಳಿಯ ನೌಕರರು ತಮ್ಮ ಸಂಸ್ಥೆಯ ಗುರುತಿನ ಚೀಟಿಯನ್ನು ತೋರಿಸಿ, ಉದ್ಯೋಗಕ್ಕೆ ಹೋಗಿ ಬರಬಹುದು. ರೈಲು ಹಾಗೂ ವಿಮಾನ ನಿಲ್ದಾಣಕ್ಕೆ ಹೋಗುವವರು, ಅಲ್ಲಿಂದ ವಾಪಸ್ ಬರುವವರು ಪ್ರಯಾಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಪರಿಶೀಲನೆ ವೇಳೆ ಪೊಲೀಸರಿಗೆ ತೋರಿಸಬೇಕು ಎಂದು ಹೇಳಿದರು.