ಮುಂಬೈ: ಹಿಂಡೆನ್ ಬರ್ಗ್ ವಂಚನೆ ಆರೋಪದ ವರದಿ ಬಹಿರಂಗದ ಬೆನ್ನಲ್ಲೇ ಅದಾನಿ ಗ್ರೂಪ್ ಷೇರುಗಳು ಬರೋಬ್ಬರಿ 46 ಸಾವಿರ ಕೋಟಿ ರೂ. ಕಳೆದುಕೊಂಡಿತ್ತು. ಇದರ ಪರಿಣಾಮ ಬುಧವಾರ (ಜನವರಿ 25) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 773.69 ಅಂಕಗಳ ನಷ್ಟದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿತ್ತು.
ಇದನ್ನೂ ಓದಿ:ಅಭಿಮಾನಿಯ ಔದಾರ್ಯ! ಸಂಜಯ್ ದತ್ ಹೆಸರಿಗೆ ಕೋಟ್ಯಂತರ ರೂ.ಆಸ್ತಿ ಬರೆದಿಟ್ಟು ಮೃತಪಟ್ಟಿದ್ದ ವೃದ್ಧೆ
ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 773.69 ಅಂಕ ಕುಸಿತ ಕಂಡಿದ್ದು 60,205.06 ಅಂಕಗಳೊಂದಿಗೆ ವಹಿವಾಟು ಕೊನೆಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 226.30 ಅಂಕ ಇಳಿಕೆಯೊಂದಿಗೆ 17,892ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ.
ಸೆನ್ಸೆಕ್ಸ್, ನಿಫ್ಟಿ ನಷ್ಟದಿಂದಾಗಿ ಅದಾನಿ ಪೋರ್ಟ್ಸ್, ಎಸ್ ಬಿಐ, ಇಂಡಸ್ ಇಂಡ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಸಿಪ್ಲಾ ಸೇರಿದಂತೆ ಹಲವು ಪ್ರಮುಖ ಷೇರುಗಳು ಭಾರೀ ನಷ್ಟ ಕಂಡಿದೆ. ಇದರ ಹೊರತಾಗಿಯೂ ಹಿಂಡಲ್ಕೋ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಬಜಾಜ್ ಆಟೋ, ಎಚ್ ಯುಎಲ್ ಮತ್ತು ಟಾಟಾ ಸ್ಟೀಲ್ ಷೇರುಗಳು ಲಾಭಗಳಿಸಿವೆ.
ಬ್ಯಾಂಕ್, ಇಂಧನ, ಪಿಎಸ್ ಯು ಬ್ಯಾಂಕ್ ಷೇರುಗಳು ಶೇ.3ರಷ್ಟು ಇಳಿಕೆ ಕಂಡಿದೆ. ಇಂದು ಬೆಳಗ್ಗೆ ಬಾಂಬೆ ಷೇರುಪೇಟೆ ವಹಿವಾಟು ಆರಂಭಗೊಂಡ ವೇಳೆಯಲ್ಲೇ ಷೇರು ಅಂಕ ಕುಸಿತ ಕಂಡಿತ್ತು.