ಮುಂಬಯಿ: ಅಂತರಾಷ್ಟ್ರೀಯ ಷೇರುಮಾರುಕಟ್ಟೆಯಲ್ಲಿನ ನೀರಸ ವಹಿವಾಟಿನಿಂದಾಗಿ ಶುಕ್ರವಾರ (ಜೂನ್ 17)ವೂ ಕೂಡಾ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 130ಕ್ಕೂ ಅಧಿಕ ಅಂಕಗಳಷ್ಟು ಕುಸಿತದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಅಗ್ನಿಪಥ ವಯೋಮಿತಿ 23 ಕ್ಕೆ ಏರಿಸಿದ್ದು ಅಗತ್ಯ ಸ್ಪಂದನೆ : ಸಿಎಂ ಬೊಮ್ಮಾಯಿ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 135.37 ಅಂಕಗಳಷ್ಟು ಇಳಿಕೆಯೊಂದಿಗೆ 52,360 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 67.10 ಅಂಕಗಳಷ್ಟು ಕುಸಿತದೊಂದಿಗೆ 15,293.50 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಟೈಟಾನ್ ಕಂಪನಿ, ವಿಪ್ರೋ, ಎಚ್ ಡಿಎಫ್ ಸಿ ಲೈಫ್, ಶ್ರೀ ಸಿಮೆಂಟ್ಸ್, ಬಿಪಿಸಿಎಲ್ ಷೇರುಗಳು ನಷ್ಟ ಕಂಡಿದೆ. ಮತ್ತೊಂದೆಡೆ ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಕೋಲ್ ಇಂಡಿಯಾ, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭ ಗಳಿಸಿದೆ.
ಗುರುವಾರ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 1,045.60 ಅಂಕಗಳಷ್ಟು ಭಾರೀ ಇಳಿಕೆಯೊಂದಿಗೆ 51,495.79 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು. ಎನ್ ಎಸ್ ಇ ನಿಫ್ಟಿ 331.55 ಅಂಕ ಇಳಿಕೆಯೊಂದಿಗೆ 15,360.60 ಅಂಕಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು.