Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಂಕ ಸಾರ್ವಕಾಲಿಕ ದಾಖಲೆ

05:37 PM Aug 30, 2021 | |

ಮುಂಬಯಿ: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಸೋಮವಾರ (ಆಗಸ್ಟ್ 30) 750ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಸೆನ್ಸೆಕ್ಸ್ ಏರಿಕೆಯಿಂದ ಆಟೋ ಮತ್ತು ಮೆಟಲ್ ಷೇರುಗಳು ಲಾಭ ಗಳಿಸಿವೆ.

Advertisement

ಇದನ್ನೂ ಓದಿ:ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ದಾಖಲೆಯ ದೂರ ಜಾವೆಲಿನ್ ಎಸೆದ ಸುಮಿತ್

ಮುಂಬಯಿ ಷೇರುಪೇಟೆಯ ಮಧ್ಯಂತರ ವಹಿವಾಟಿನಲ್ಲಿ ಸೆನ್ಸೆಕ್ಸ್ ಅಂಕ ಸಾರ್ವಕಾಲಿಕ ದಾಖಲೆಯ 56,958ಕ್ಕೆ ತಲುಪಿತ್ತು. ಬಳಿಕ ಬಿಎಸ್ ಇ ಸೆನ್ಸೆಕ್ಸ್ 765 ಅಂಕಗಳ ಏರಿಕೆಯೊಂದಿಗೆ 56,890 ಸಾರ್ವಕಾಲಿಕ ಗರಿಷ್ಠ ದಾಖಲೆಯ ಅಂಕದೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.

ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 226 ಅಂಕ ಏರಿಕೆಯೊಂದಿಗೆ ದಾಖಲೆಯ 16,931 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಳಿಸಿದೆ. ಸೆನ್ಸೆಕ್ಸ್ ಏರಿಕೆಯಿಂದ ಭಾರ್ತಿ ಏರ್ ಟೆಲ್, ಆ್ಯಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಬಜಾಜ್ ಫೈನಾಸ್ ಮತ್ತು ಮಾರುತಿ ಷೇರುಗಳು ಶೇ.4.44ರಷ್ಟು ಲಾಭ ಗಳಿಸಿದೆ. ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ, ಇನ್ಫೋಸಿಸ್ ಮತ್ತು ಟಿಸಿಎಸ್ ಷೇರುಗಳು ಮಾತ್ರ ನಷ್ಟ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next