ಮುಂಬಯಿ: ರಷ್ಯಾ, ಉಕ್ರೇನ್ ಯುದ್ಧ ಮುಂದುವರಿದಿರುವ ನಡುವೆಯೇ ಮುಂಬಯಿ ಷೇರುಪೇಟೆ ವಹಿವಾಟು ಏರುಗತಿಯತ್ತ ಸಾಗಿದ್ದು, ಬುಧವಾರ (ಮಾರ್ಚ್ 09) ಸಂವೇದಿ ಸೂಚ್ಯಂಕ ಭಾರೀ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಗೋವಾ: ಅತಂತ್ರ ಫಲಿತಾಂಶದ ಸಮೀಕ್ಷೆ ಹಿನ್ನೆಲೆ; ಜೋರಾಯಿತು ರಾಜಕೀಯ ಪಕ್ಷಗಳ ರೆಸಾರ್ಟ್ ರಾಜಕಾರಣ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,223.24 ಅಂಕಗಳಷ್ಟು ಏರಿಕೆಯಾಗಿದ್ದು, 54,647.24 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 331.90 ಅಂಕ ಏರಿಕೆಯೊಂದಿಗೆ 16,345.40 ಅಂಕಗಳ ಮಟ್ಟ ತಲುಪಿದೆ.
ಏಷಿಯನ್ ಪೇಂಟ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಶ್ರೀ ಸಿಮೆಂಟ್ಸ್, ಪವರ್ ಗ್ರಿಡ್ ಕಾರ್ಪೋರೇಶನ್, ಒಎನ್ ಜಿಸಿ, ಎನ್ ಟಿಪಿಸಿ ಮತ್ತು ಕೋಲ್ ಇಂಡಿಯಾ ಷೇರುಗಳು ನಷ್ಟ ಕಂಡಿದೆ.
ರಷ್ಯಾ, ಉಕ್ರೇನ್ ಯುದ್ಧದ ಪರಿಣಾಮ ಕಳೆದ ವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಪ್ರಮಾಣದಲ್ಲಿ ನಷ್ಟ ಕಂಡಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿತ್ತು. ಅಲ್ಲದೇ ಕಚ್ಛಾ ತೈಲ ಬೆಲೆ ಏರಿಕೆಯೂ ಕೂಡಾ ಹೂಡಿಕೆದಾರರ ಮೇಲೆ ಪರಿಣಾಮ ಬೀರಿತ್ತು.