ಮುಂಬಯಿ : ಇಂದಿನ ಆರಂಭಿಕ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇದೇ ಮೊದಲ ಬಾರಿಗೆ 9,200 ಅಂಕಗಳ ಗಡಿಯನ್ನು ದಾಟಿದೆ ಮತ್ತು ಮುಂಬಯಿ ಶೇರು ಪೇಟೆ ಸೆನ್ಸೆಕ್ಸ್ ಸೂಚ್ಯಂಕ 239 ಅಂಕಗಳ ಭರ್ಜರಿ ಏರಿಕೆಯನ್ನು ದಾಖಲಿಸಿದೆ.
ವಿದೇಶೀ ಹೂಡಿಕೆದಾರರು ಭಾರತೀಯ ಶೇರು ಮಾರುಕಟ್ಟೆಯಲ್ಲಿ ನಿರಂತರವಾಗಿ ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡುತ್ತಿರುವುದು ಹೂಡಿಕೆದಾರರು ಹಾಗೂ ವಹಿವಾಟುದಾರರಲ್ಲಿ ಹೊಸ ಹುಮ್ಮಸ್ಸನ್ನು ತುಂಬಿದೆ.
ಇಂದು ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 114.07 ಅಂಕಗಳ ಏರಿಕೆಯೊಂದಿಗೆ 29,699.92 ಅಂಕಗಳ ಮಟ್ಟದಲ್ಲೂ, ನಿಫ್ಟಿ 13.05 ಅಂಕಗಳ ಏರಿಕೆಯೊಂದಿಗೆ 9,166.75 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಹೆಚ್ಚು ಕ್ರಿಯಾ ಶೀಲವಾಗಿ ಕಂಡುಬಂದ ಶೇರುಗಳೆಂದರೆ ಐಟಿಸಿ, ರಿಲಯನ್ಸ್, ಟಾಟಾ ಸ್ಟೀಲ್, ಐಡಿಯಾ ಸೆಲ್ಯುಲರ್ ಮತ್ತು ಮಾರುತಿ ಸುಜುಕಿ.
ಟಾಪ್ ಗೇನರ್‌ಗಳು : ಐಟಿಸಿ, ಲೂಪಿನ್, ಎಚ್‌ಸಿಎಲ್ ಟೆಕ್, ಮಾರುತಿ ಸುಜುಕಿ, ಟಾಟಾ ಸ್ಟೀಲ್.
ಟಾಪ್ ಲೂಸರ್‌ಗಳು: ಐಡಿಯಾ ಸೆಲ್ಯುಲರ್, ಭಾರ್ತಿ ಏರ್‌ಟೆಲ್, ಬ್ಯಾಂಕ್ ಆಫ್ ಬರೋಡ, ಟಾಟಾಮೋಟರ್ ಮತ್ತು ಎಸ್‌ಬಿಐ.