Advertisement

ಭಾರತೀಯ ನಿಕ್ಕಿ ಹ್ಯಾಲೆ ವಿಶ್ವಬ್ಯಾಂಕ್‌ ಅಧ್ಯಕ್ಷೆ?

12:30 AM Jan 13, 2019 | Team Udayavani |

ವಾಷಿಂಗ್ಟನ್‌: ಭಾರತೀಯ ಮೂಲದ ಹಾಗೂ ವಿಶ್ವಸಂಸ್ಥೆಗೆ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ವಿಶ್ವ ಬ್ಯಾಂಕ್‌ನ ಅಧ್ಯಕ್ಷ ಹುದ್ದೆಯ ಸ್ಪರ್ಧೆಯಲ್ಲಿದ್ದಾರೆ. ಹಾಲಿ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ರಾಜೀನಾಮೆ ನೀಡಿದ್ದು, ಇವರ ಸ್ಥಾನಕ್ಕೆ ನಿಕ್ಕಿ ಹ್ಯಾಲೆ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಹೆಸರು ಕೂಡ ಚಾಲ್ತಿಯಲ್ಲಿದೆ. ಇವರಲ್ಲದೆ ಖಜಾಂಚಿ ಅಧೀನ ಕಾರ್ಯದರ್ಶಿ ಡೇವಿಡ್‌ ಮಲ್ಪಾಸ್‌ ಮತ್ತು ಮಾಕ್‌ ಗ್ರೀನ್‌ ಹೆಸರು ಕೂಡ ಕೇಳಿಬಂದಿದೆ. ಕಳೆದ ತಿಂಗಳಷ್ಟೇ ನಿಕ್ಕಿ, ವಿಶ್ವಸಂಸ್ಥೆಗೆ ರಾಯಭಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಯಾರ ಹೆಸರನ್ನು ಅಮೆರಿಕ ಶಿಫಾರಸು ಮಾಡುತ್ತದೆ ಎಂಬುದು ಇನ್ನೂ ಖಚಿತವಾಗಿಲ್ಲ. ಮುಂದಿನ ತಿಂಗಳಿನಿಂದ ನಾಮನಿರ್ದೇಶನಗಳನ್ನು ವಿಶ್ವಬ್ಯಾಂಕ್‌ ಸ್ವೀಕರಿಸಲಿದ್ದು, ಎಪ್ರಿಲ್‌ನಲ್ಲಿ ಅಂತಿಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next