Advertisement

West Bengal: ರಾತ್ರಿ ಪಾಳಿ ವೈದ್ಯರಿಗೆ ಭದ್ರತೆ; ದೀದಿ ಸರಕಾರದಿಂದ ಹೊಸ ಕ್ರಮ

08:00 AM Aug 19, 2024 | Team Udayavani |

ಕೋಲ್ಕತಾ: ದೇಶಾದ್ಯಂತ ಕೋಲ್ಕತದ ಆರ್‌.ಜಿ. ಕಾರ್‌ ಆಸ್ಪತ್ರೆಯಲ್ಲಿ ನಡೆದ ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವಂತೆಯೇ ಎಚ್ಚೆತ್ತು ಕೊಂಡಿ ರುವ ಪಶ್ಚಿಮ ಬಂಗಾಲ ಸರಕಾರವು ಮಹಿಳಾ ವೈದ್ಯರ ಸುರಕ್ಷೆಯ ನಿಟ್ಟಿನಲ್ಲಿ ಹೊಸ ಯೋಜನೆ ಘೋಷಿಸಿದೆ. ಅದಕ್ಕೆ “ರಟೈರರ್‌ ಸಾಥಿ-ಹೆಲ್ಪರ್ಸ್‌ ಆಫ್ ನೈಟ್‌’ ಎಂದು ಹೆಸರಿಸಲಾಗಿದೆ.

Advertisement

ಅದರ ಅನ್ವಯ ರಾತ್ರಿ ವೇಳೆ ಕಾರ್ಯನಿರ್ವಹಿಸುವ ಮಹಿಳಾ ವೈದ್ಯರಿಗೆ ಭದ್ರತಾ ಸಿಬಂದಿಯನ್ನು ನಿಯೋಜಿಸಲಾಗುವುದು. ಪೊಲೀಸ್‌ ಠಾಣೆ ಗಳೊಂದಿಗೆ ಸಂಪರ್ಕ ಹೊಂದಿರುವ ಮೊಬೈಲ್‌ ಆ್ಯಪ್‌ ಅಭಿವೃದ್ಧಿ ಪಡಿಸಲಾಗುವುದು. ಅವುಗಳ ಡೌನ್‌ ಲೋಡ್‌ ಕಡ್ಡಾಯಗೊಳಿಸುವ ಮೂಲಕ ವಿಪತ್ತಿನ ಸಂದರ್ಭದಲ್ಲಿ ನೇರವಾಗಿ ಠಾಣೆಗೆ ಮಾಹಿತಿ ಸಿಗುವಂತೆ ಮಾಡಲಾಗುವುದು ಎಂದು ಸರಕಾರ ಹೇಳಿದೆ. ಆಸ್ಪತ್ರೆಗಳಲ್ಲಿ ವಿಶೇಷ ವಿಶ್ರಾಂತಿ ಕೊಠಡಿಗಳ ನಿರ್ಮಾಣ, ಸಿಸಿಟಿವಿ ಕಣ್ಗಾವಲು ಸಹಿತ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಸರಕಾರ ತಿಳಿಸಿದೆ. ಖಾಸಗಿ ಆಸ್ಪತ್ರೆಗಳಿಗೂ ಈ ನಿಯಮ ಅನುಸರಿಸಲು ಸೂಚಿಸಲಾಗಿದೆ ಎಂದು ಸರಕಾರ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next