ಭುವನೇಶ್ವರ: ಬಂಗಾಲಕೊಲ್ಲಿ ಹಾಗೂ ಅಂಡಮಾನ್‌ನಲ್ಲಿ ಸೋಮವಾರ ವಾಯು ಭಾರ ಕುಸಿತ ಉಂಟಾಗಿದೆ.
ಅ.23ರ ಒಳಗಾಗಿ ಅದು ಚಂಡಮಾರುತವಾಗಿ ಮಾರ್ಪಾಡಾಗಲಿದ್ದು, ಒಡಿಶಾದ ಪುರಿ ಹಾಗೂ ಪಶ್ಚಿಮ ಬಂಗಾಲದ ನಡುವೆ ಹಾದು ಹೋಗಲಿದೆ ಐಎಂಡಿ ಹೇಳಿದೆ. ಈ ಹಿನ್ನೆಲೆಯಲ್ಲಿ ಶನಿವಾರದ ವರೆಗೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಒಡಿಶಾದಲ್ಲಿ ಚಂಡಮಾರುತದ ಪ್ರಭಾವ ಹೆಚ್ಚು ಕಾಲ ಇರಲಿದೆ. ರಾಜ್ಯದ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಲಿದ್ದು, ಪ್ರತೀ ಗಂಟೆಗೆ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ.
ತಂಡಗಳ ನಿಯೋಜನೆ: ಚಂಡಮಾರುತ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ನ 25 ತಂಡಗಳನ್ನು ಪಶ್ಚಿಮ ಬಂಗಾಲದಲ್ಲಿ, 11 ತಂಡಗಳನ್ನು ಒಡಿಶಾದಲ್ಲಿ ನಿಯೋಜಿಸ ಲಾಗಿದೆ. ಜತೆಗೆ ಸೇನೆಯ ರಕ್ಷಣ ಹಾಗೂ ಪರಿಹಾರ ತಂಡ, ಕೋಸ್ಟ್ ಗಾರ್ಡ್ ತಂಡಗಳೂ ಸಿದ್ಧತೆ ನಡೆಸಿವೆ.
ಕರ್ನಾಟಕದಲ್ಲಿ ಮಳೆ: ಚಂಡಮಾರುತ ಪ್ರಭಾವದಿಂದಾಗಿ ಕರ್ನಾಟಕದ ಕರಾ ವಳಿ ಹಾಗೂ ಉತ್ತರ ಒಳನಾಡು, ಗುಜ ರಾತ್, ಗೋವಾ, ಮಧ್ಯ ಮಹಾರಾಷ್ಟ್ರ, ಕೇರಳ, ತಮಿಳುನಾಡು, ರಾಯಲ ಸೀಮಾ ಹಾಗೂ ಆಂಧ್ರಪ್ರದೇಶಗಳಲ್ಲಿ ಮಳೆಯಾಗಲಿದೆ.