Advertisement

ಇಸ್ರೋದ ಸಿಬ್ಬಂದಿ ರಕ್ಷಣಾ ವ್ಯವಸ್ಥೆ ಯಶಸ್ವಿ ಪರೀಕ್ಷೆ

01:12 PM Jul 06, 2018 | |

ಹೊಸದಿಲ್ಲಿ: ತುರ್ತು ಸಂದರ್ಭಗಳಲ್ಲಿ ಗಗನಯಾತ್ರಿಗಳ ಜೀವ ರಕ್ಷಿಸುವಂಥ ಹೊಸದಾಗಿ ಅಭಿವೃದ್ಧಿಪಡಿಸಿರುವ ಕ್ರೂ ಎಸ್ಕೇಪ್‌ ಸಿಸ್ಟಂ (ಸಿಬ್ಬಂದಿ ಪಾರಾಗುವಂಥ ವ್ಯವಸ್ಥೆ)ನ ಪರೀಕ್ಷೆಯನ್ನು ಗುರುವಾರ ಇಸ್ರೋ ಯಶಸ್ವಿಯಾಗಿ ನೆರವೇರಿಸಿದೆ.

Advertisement

 ಹೊಸ ವ್ಯವಸ್ಥೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಇನ್ನೂ ಹಲವು ಪರೀಕ್ಷೆಗಳು ನಡೆಯಲಿದ್ದು, ಈ ಸರಣಿಯಲ್ಲಿ ಇದು ಮೊದಲ ಪರೀಕ್ಷೆ ಎಂದು ಇಸ್ರೋ ಹೇಳಿದೆ. ಉಡಾವಣೆಯಂಥ ಸಂದರ್ಭಗಳಲ್ಲಿ ತುರ್ತು ಪರಿಸ್ಥಿತಿ ಉಂಟಾದರೆ ಅಥವಾ ಉಡಾವಣೆ ವಿಫ‌ಲವಾದರೆ ಕೂಡಲೇ ಉಡಾವಣಾ ವಾಹಕದಿಂದ ಸುರಕ್ಷಿತ ಅಂತರದಲ್ಲಿ ಗಗನಯಾತ್ರಿಗಳು ಹಾಗೂ ಇತರೆ ಸಿಬ್ಬಂದಿಯನ್ನು ರಕ್ಷಿಸುವಂಥ ವ್ಯವಸ್ಥೆ ಇದಾಗಿದೆ. ಶ್ರೀಹರಿಕೋಟಾದಲ್ಲಿ 259 ಸೆಕೆಂಟುಗಳ ಕಾಲ ಇದರ ಪರೀಕ್ಷೆ ನಡೆಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೇ ವೇಳೆ, ಮಾನವಸಹಿತ ಬಾಹ್ಯಾಕಾಶ ಯೋಜನೆ ಕೈಗೊಳ್ಳಲು ಭಾರತಕ್ಕೆ ದೀರ್ಘ‌ ಅವಧಿ ತಗುಲಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ತಿಳಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next