Advertisement
ಎಫ್‌ಐಆರ್‌ನಲ್ಲಿ ಪಪ್ಪು ಯಾದವ್ ಅವರು ಉದ್ಯಮಿಯೊಬ್ಬರಿಂದ 1 ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಸುಲಿಗೆ ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಉದ್ಯಮಿಗೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ದೂರು ನೀಡಿರುವ ಉದ್ಯಮಿ ಪೂರ್ಣಿಯಾದಲ್ಲಿ ಪೀಠೋಪಕರಣ ವ್ಯಾಪಾರ ಮಾಡುತ್ತಾರೆ. ಜೂನ್ 4 ರಂದು ಮತ ಎಣಿಕೆ ವೇಳೆ ಪಪ್ಪು ಯಾದವ್ ತನ್ನ ನಿವಾಸಕ್ಕೆ ಕರೆ ಮಾಡಿ 1 ಕೋಟಿ ನೀಡುವಂತೆ ಕೇಳಿದ್ದರು ಎಂದು ಉದ್ಯಮಿ ಲಿಖಿತ ಅರ್ಜಿಯಲ್ಲಿ ತಿಳಿಸಿದ್ದಾರೆ. 1 ಕೋಟಿ ಕೊಡದಿದ್ದರೆ ಕೊಲೆ ಮಾಡಲಾಗುವುದು. ಮುಂದಿನ 5 ವರ್ಷಗಳ ಕಾಲ ಶಾಂತಿಯುತವಾಗಿ ಬದುಕಬೇಕಾದರೆ ಹಣ ಪಾವತಿಸಬೇಕು ಇಲ್ಲವಾದರೆ ಪೂರ್ಣಿಯವರನ್ನು ಬಿಡಬೇಕು ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಾಗಿದೆ.
ಪೊಲೀಸರಿಗೆ ದೂರು ನೀಡಿದ ಉದ್ಯಮಿ, ಏಪ್ರಿಲ್ 2, 2021 ರಂದು ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರಿಂದ 10 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆಯಿಟ್ಟಿದ್ದರು. ಇದಲ್ಲದೆ, 2023 ರಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ, ವಾಟ್ಸಾಪ್ ಕರೆಯಲ್ಲಿ ಬೆದರಿಕೆ ಮತ್ತು ನಿಂದನೆಯೊಂದಿಗೆ 15 ಲಕ್ಷ ರೂಪಾಯಿ ಮತ್ತು ಎರಡು ಸೋಫಾ ಸೆಟ್‌ಗಳನ್ನು ಕೇಳಿದ್ದರು ಎಂದು ಉದ್ಯಮಿ ಹೇಳಿದ್ದಾರೆ. ದೂರಿನ ಆಧಾರದ ಮೇಲೆ, ಸಂಸದ ಪಪ್ಪು ಯಾದವ್ ಮತ್ತು ಅವರ ಆಪ್ತ ಅಮಿತ್ ಯಾದವ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಲಂ 385/504/506/34 ರ ಅಡಿಯಲ್ಲಿ ಪೂರ್ಣಿಯ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಸಂಸದ ಪಪ್ಪು ಯಾದವ್ ಪ್ರತಿಕ್ರಿಯೆ ನೀಡಿದ್ದು ನನ್ನ ಏಳಿಗೆ ಸಹಿಸಲಾಗದೆ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿ ಕೂಲಂಕುಷವಾಗಿ ತನಿಖೆ ನಡೆಯಬೇಕು ಪೊಲೀಸರ ತನಿಖೆಗೆ ತನ್ನ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿಕೊಂಡಿದ್ದು ತಪ್ಪಿತಸ್ಥರು ಯಾರೆಂದು ಜನತೆಗೆ ಗೊತ್ತಾಗಬೇಕು ಎಂದು ಹೇಳಿದ್ದಾರೆ.
Related Articles
Advertisement
ಇದನ್ನೂ ಓದಿ: Horoscope: ಹೊಟೇಲ್ ಉದ್ಯಮಿಗಳಿಗೆ ಆದಾಯ ವೃದ್ಧಿಯಾಗಲಿದೆ