Advertisement

ಹೊಸದಾಗಿ ಐದು ಜಿಪಂ ಕ್ಷೇತ್ರ ಸೃಷ್ಟಿ

07:55 PM Apr 03, 2021 | Team Udayavani |

ಗದಗ : ರಾಜ್ಯ ಚುನಾವಣಾ ಆಯೋಗ ಜಿಪಂನ 19 ಅಧಿಕಾರ ವ್ಯಾಪ್ತಿಯ ಪ್ರದೇಶಗಳನ್ನು 24 ಏಕ ಸದಸ್ಯ ಜಿಪಂ ಕ್ಷೇತ್ರಗಳನ್ನಾಗಿ ವಿಂಗಡಿಸಿದ್ದು, ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.

Advertisement

ಜಿಪಂ ಕ್ಷೇತ್ರ ವಿಂಗಡಣೆಯಂತೆ ರೂಪುಗೊಂಡಿರುವ ಜಿಪಂ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿರುವ ಗ್ರಾಪಂಗಳ ವಿವರ ಇಲ್ಲಿದೆ. ಜಿ.ಪಂ. ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಐದು ಕ್ಷೇತ್ರಗಳು ಹೊಸದಾಗಿ ತಲೆ ಎತ್ತಿವೆ. ಜಿ.ಪಂ. ಸದಸ್ಯ ಬಲ 19 ರಿಂದ 24ಕ್ಕೆ ಏರಿಕೆಯಾಗಿದೆ.

ಜತೆಗೆ ತಾಪಂ ಕ್ಷೇತ್ರಗಳ ಸಂಖ್ಯೆ ಈ ಹಿಂದೆ ಇದ್ದ 75 ರಿಂದ 79ಕ್ಕೆ ಹೆಚ್ಚಳವಾಗಿವೆ. ಗದಗ ತಾಲೂಕು: ಹೊಂಬಳ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಹೊಂಬಳ, ಬಳಗಾನೂರ, ಲಿಂಗದಾಳ, ಚಿಕ್ಕಹಂದಿಗೋಳ, ಬೆಳಹೋಡ ಒಳಪಡಲಿವೆ. ನೂತನ ಕೋಟುಮಚಗಿ ಜಿ.ಪಂ. ಕ್ಷೇತ್ರದಲ್ಲಿ ಕೋಟುಮಚಗಿ, ನೀರಲಗಿ, ಹರ್ಲಾಪುರ, ತಿಮ್ಮಾಪುರ, ಕಣಗಿನಹಾಳ, ಹುಯಿಲಗೋಳ, ನೀರಲಗಿ ವ್ಯಾಪ್ತಿಯಲ್ಲಿವೆ. ಹುಲಕೋಟಿ ಜಿ.ಪಂ. ಕ್ಷೇತ್ರ ಹುಲಕೋಟಿ, ಬಿಂಕದಕಟ್ಟಿ, ಅಸುಂಡಿ, ಕಳಸಾಪುರ ಗ್ರಾ.ಪಂ. ಹೊಂದಿವೆ. ಕುರ್ತಕೋಟಿ ಜಿ.ಪಂ. ಕ್ಷೇತ್ರಕ್ಕೆ ಕುರ್ತಕೋಟಿ, ಚಿಂಚಲಿ, ಅಂತೂರ- ಬೆಂತೂರ, ಹರ್ತಿ ಒಳಪಟ್ಟಿವೆ. ಲಕ್ಕುಂಡಿ ಜಿ.ಪಂ. ಕ್ಷೇತ್ರ ಲಕ್ಕುಂಡಿ, ಅಡವಿಸೋಮಾಪುರ, ಹಾತಲಗೇರಿ ಗ್ರಾ.ಪಂ.ಗಳನ್ನು ಹಾಗೂ ಸೊರಟೂರ ಜಿ.ಪಂ. ಕ್ಷೇತ್ರದಲ್ಲಿ ಸೊರಟೂರು, ಯಲಿಶಿರೂರು, ನಾಗಾವಿ ಹಾಗೂ ಬೆಳದಡಿ ಗ್ರಾ.ಪಂ.ಗಳು ಒಳಪಟ್ಟಿವೆ. ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಹಿರೇವಡ್ಡಟ್ಟಿ, ಹಳ್ಳಿಗೇರಿ, ಮೇವುಂಡಿ, ಆಲೂರ ಗ್ರಾ.ಪಂ. ಗಳನ್ನು ಹೊಂದಿದೆ.

ಹಮ್ಮಿಗಿ ಜಿ.ಪಂ. ಕ್ಷೇತ್ರಕ್ಕೆ ಹಮ್ಮಿಗಿ, ಕೊರ್ಲಹಳ್ಳಿ, ಶೀಂಗಟಾಲೂರು, ಹೆಸರೂರು, ಬಿದ್ರಳ್ಳಿ ಗ್ರಾ.ಪಂ.ಗಳು ಬರಲಿವೆ. ಕಲಕೇರಿ ಜಿ.ಪಂ. ವ್ಯಾಪ್ತಿಯಡಿ ಕಲಕೇರಿ, ಬಾಗೇವಾಡಿ, ಮುರಡಿ, ಮುರಡಿ ತಾಂಡಾ, ಬೀಡನಾಳ, ಹಾರೋಗೇರಿ ಗ್ರಾ.ಪಂ.ಗಳು ಒಳಪಟ್ಟಿವೆ. ರೋಣ ತಾಲೂಕಿನ ಹೊಳೆಆಲೂರ ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಹೊಳೆಆಲೂರ, ಹುನಗುಂಡಿ, ಅಮರಗೋಳ, ಹುಲ್ಲೂರು, ಅಸೂಟಿ, ಚಿಕ್ಕಮಣ್ಣೂರು ಹೊಂದಿದೆ. ಹಿರೇಹಾಳ ಜಿ.ಪಂ. ಕ್ಷೆತ್ರದಲ್ಲಿ ಹಿರೇಹಾಳ, ಮಾಡಲಗೇರಿ, ಕೊತಬಾಳ, ಕುರಹಟ್ಟಿ, ಇಟಗಿ, ಹೊಸಳ್ಳಿ ಬರಲಿವೆ.

ಬೆಳವಣಿಕಿ ಜಿ.ಪಂ. ಕ್ಷೇತ್ರದಡಿ ಬೆಳವಣಿಕಿ, ಮಲ್ಲಾಪ್ಪುರ, ಯಾವಗಲ್ಲ, ಕೌಜಗೇರಿ, ಮೆಣಸಗಿ, ಹೊಳೆಮಣ್ಣೂರು ಗ್ರಾ.ಪಂಗಳು ಸೇರಿವೆ. ಅಬ್ಬಿಗೇರಿ ಜಿ.ಪಂ. ಕ್ಷೇತ್ರದಲ್ಲಿ ಕುರಡಗಿ, ಸವಡಿ, ಡ.ಸ.ಹಡಗಲಿ, ಜಕ್ಕಲಿ, ಮಾರನಬಸರಿ ಗ್ರಾ.ಪಂ.ಗಳು ಒಳಪಟ್ಟಿವೆ. ಗಜೇಂದ್ರಗಡ ತಾಲೂಕಿನ ಸೂಡಿ ಜಿ.ಪಂ. ಕ್ಷೇತ್ರದಲ್ಲಿ ಸೂಡಿ, ಶಾಂತಗೇರಿ, ಮುಶಿಗೇರಿ, ಲಕ್ಕಲಕಟ್ಟಿ, ಗುಳಗುಳಿ ಗ್ರಾ.ಪಂ.ಗಳು ಬರಲಿವೆ. ನಿಡಗುಂದಿ ಜಿ.ಪಂ. ಕ್ಷೇತ್ರದಡಿ ನಿಡಗುಂದಿ, ಕುಂಟೋಜಿ, ರಾಜೂರ, ಗೋಗೇರಿ, ರಾಂಪೂರ್‌, ಹಾಲಕೇರಿ ಹೊಂದಿದೆ.

Advertisement

ನರಗುಂದ ತಾಲೂಕಿನ ಕೊಣ್ಣೂರು ಜಿ.ಪಂ. ಕ್ಷೇತ್ರದಲ್ಲಿ ಕೊಣ್ಣೂರು, ವಾಸನ, ಶಿರೋಳ, ರಡ್ಡೇರನಾಗನೂರ, ಹದಲಿ ಗ್ರಾ.ಪಂ.ಗಳು ಒಳಪಟ್ಟಿವೆ. ಚಿಕ್ಕನರಗುಂದ ಜಿ.ಪಂ. ಕ್ಷೇತ್ರದಲ್ಲಿ ಚಿಕ್ಕನರಗುಂದ, ಹಿರೇಕೊಪ್ಪ, ಬೆನಕೊಪ್ಪ, ಕಣಕೀಕೊಪ್ಪ, »çೆರನಹಟ್ಟಿ, ಸುರಕೋಡ, ಹುಣಶೀಕಟ್ಟಿ, ಬನಹಟ್ಟಿ ಗ್ರಾಪಂಗಳು ಬರಲಿವೆ. ಶಿರಹಟ್ಟಿ ತಾಲೂಕಿನ ಮಾಗಡಿ ಜಿ.ಪಂ. ಕ್ಷೆತ್ರದಲ್ಲಿ ಮಾಗಡಿ, ಛಬ್ಬಿ, ಮಜೂjರ, ಕಡಕೋಳ, ಮಾಚೇನಹಳ್ಳಿ ಗ್ರಾ.ಪಂ.ಗಳು ಒಳಗೊಂಡಿವೆ. ಬೆಳ್ಳಟ್ಟಿ ಜಿ.ಪಂ. ಕ್ಷೇತ್ರದಡಿ ಬೆಳ್ಳಟ್ಟಿ, ಕೊಂಚಿಗೇರಿ, ರಣತೂರ, ಬನ್ನಿಕೊಪ್ಪ ಒಳಗೊಂಡಿದೆ. ಇಟಗಿ(ಹೆಬ್ಟಾಳ) ಜಿ.ಪಂ. ಕ್ಷೇತ್ರದಲ್ಲಿ ಇಟಗಿ, ಹೆಬ್ಟಾಳ, ತಾರೀಕೊಪ್ಪ, ವಡವಿ, ಕೊಗನೂರ ಗ್ರಾ.ಪಂ. ಗಳನ್ನು ಒಳಪಟ್ಟಿವೆ. ಲಕ್ಷ್ಮೇಶ್ವರ ತಾಲೂಕಿನ ಯಳವತ್ತಿ ಜಿ.ಪಂ. ಕ್ಷೇತ್ರ ಯಳವತ್ತಿ, ಮಾಡಳ್ಳಿ, ಗೊಜನೂರ, ಅಡ್ರಕಟ್ಟಿ, ಪು. ಬಡ್ನಿ ಹಾಗೂ ಬಟ್ಟೂರು ಗ್ರಾ.ಪಂ.ಗಳನ್ನು ಹೊಂದಿದೆ. ಶಿಗ್ಲಿ ಜಿ.ಪಂ. ವ್ಯಾಪಿಗೆ ಶಿಗ್ಲಿ, ದೊಡೂxರು, ರಾಮಗೇರಿ, ಗೋವನಾಳ ಗ್ರಾ.ಪಂಗಳು ಹಾಗೂ ಸೂರಣಗಿ ಜಿ.ಪಂ. ವ್ಯಾಪ್ತಿಯಲ್ಲಿ ಸೂರಣಗಿ, ಬಾಲೇಹೂಸೂರು, ಹುಲ್ಲೂರು, ಆದರಹಳ್ಳಿ ಗ್ರಾ.ಪಂ. ಗಳನ್ನು ಹೊಂದಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next