Advertisement

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

10:03 PM Dec 15, 2024 | Team Udayavani |

ಗದಗ: ಕಳೆದ 16 ವರ್ಷಗಳಿಂದ ಬಿಂಕದಕಟ್ಟಿ ಮೃಗಾಲಯದಲ್ಲಿ ಘರ್ಜಿಸಿದ್ದ ಅನಸೂಯ 16 ವರ್ಷದ ಹೆಣ್ಣು ಹುಲಿ ಶನಿವಾರ (ಡಿ.14) ತಡರಾತ್ರಿ ಮೃತಪಟ್ಟಿದೆ.

Advertisement

ಉಪ ಅರಣ್ಯ ಸಂರಕ್ಷಣಾಧಿಕಾರಿ ಲೇಖರಾಜ್ ಮೀನಾ, ಅಸುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷ ತಾಜುದ್ದೀನ ಓಲೇಕಾರ ಸಮ್ಮುಖದಲ್ಲಿ ರವಿವಾರ ಬೆಳಿಗ್ಗೆ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿ ನಂತರ ಮೃಗಾಲಯದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಅನಸೂಯ ಮೂರುವರೆ ತಿಂಗಳು ಇದ್ದಾಗ ಮೈಸೂರು ಮೃಗಾಯಯದಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ತರಲಾಗಿತ್ತು. ಮೈಸೂರಿನಿಂದ ಬಿಂಕದಕಟ್ಟಿ ಮೃಗಾಲಯಕ್ಕೆ ತರುವ ಸಂದರ್ಭದಲ್ಲಿ ಬೋನಿನ ಕಬ್ಬಿಣದ ಸರಳುಗಳನ್ನು ಕಚ್ಚಿದ್ದರಿಂದ ಹುಲಿಯ ಹಲ್ಲು, ದವಡೆ ಹಾನಿಯುಂಟಾಗಿತ್ತು.

ಚಿಕಿತ್ಸೆ ನೀಡಿದರೂ ಮಾಂಸ ಹಾಗೂ ಗಟ್ಟಿಯಾದ ಪದಾರ್ಥವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಕಳೆದುಕೊಂಡಿತ್ತು. ಇದರಿಂದ ಅಂದಿನಿಂದಲೂ ಆಹಾರ ಜಗಿಯುವ ಸಮಸ್ಯೆ ಎದುರಿಸುತ್ತಿತ್ತು. ಅಲ್ಲದೇ, ವಯಸ್ಸು ಕೂಡ ಆಗಿದ್ದರಿಂದ 16 ವರ್ಷದ ಹೆಣ್ಣು ಹುಲಿ ಅನಸೂಯ ಮೃತಪಟ್ಟಿತು ಎಂದು ಮೃಗಾಲಯದ ಅಧಿಕಾರಿ ಸ್ನೇಹಾ ಪೂಜಾರ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next