ಅರ್ಧಕ್ಕೆ ನಿಂತ ಸಿನಿಮಾಗಳ ಚಿತ್ರೀಕರಣ ಮಾಡುವಂತೆ ಸರ್ಕಾರ ಅನುಮತಿ ಕೊಟ್ಟಿದೆ. ಸ್ಟಾರ್‌ಗಳ ಸಿನಿಮಾಗಳು ಚಿತ್ರೀಕರಣಕ್ಕೆ ಅಣಿ ಯಾಗಿವೆ. ಆದರೆ, ಅರ್ಧಕ್ಕೆ ನಿಂತ ಹೊಸಬರ ಸಿನಿಮಾಗಳು ತಕ್ಷಣಕ್ಕೆ ಆರಂಭವಾಗೋದು ಕಷ್ಟ ಎನ್ನುತ್ತಿದೆ ಗಾಂಧಿನಗರ. ಅದಕ್ಕೆ ಕಾರಣ, ಸಂಕಷ್ಟದಲ್ಲಿರುವ ಹೊಸ ನಿರ್ಮಾಪಕರು. ಹೌದು, ಕನ್ನಡ ಚಿತ್ರರಂಗ ವರ್ಷಪೂರ್ತಿ ಚಟುವಟಿಕೆಯಲ್ಲಿರಲು ಮುಖ್ಯ ಕಾರಣ ಹೊಸಬರು.
ವರ್ಷಕ್ಕೆ ಸ್ಟಾರ್‌ಗಳ ಐದಾರು ಸಿನಿಮಾಗಳು ಬಿಡುಗಡೆಯಾದರೆ ಮಿಕ್ಕಂತೆ ಇಡೀ ವರ್ಷ ಸುದ್ದಿಯಲ್ಲಿರೋರು, ಚಿತ್ರರಂಗ ವನ್ನು ಸದಾ ಚಟುವಟಿಕೆ ಯಲ್ಲಿ ಇಡೋರು ಹೊಸಬರು. ಈ ಹೊಸಬರ ಸಿನಿಮಾಗಳನ್ನು ನಿರ್ಮಿಸುವವರು ಕೂಡಾ ಹೊಸಬರೇ. ಇವರೆಲ್ಲಾ ಗಾಂಧಿನಗರದ ರೆಗ್ಯು ಲರ್ ನಿರ್ಮಾಪಕರಲ್ಲ. ಸಿನಿಮಾ ಪ್ಯಾಶನ್‌ನಿಂದಾಗಿ, ಒಳ್ಳೆಯ ಕಥೆಗೆ ಸಾಥ್ ನೀಡುವ ಉದ್ದೇಶದಿಂದ ಸಿನಿಮಾ ನಿರ್ಮಾಣಕ್ಕೆ ಬರುತ್ತಾರೆ.
ಮೊದಲೇ ಹೇಳಿ ದಂತೆ ಇವರಿಗೆ ಸಿನಿಮಾ ಒಂದು ಪ್ಯಾಶನ್. ದುಡಿಮೆಗಾಗಿ ತಮ್ಮದೇ ಆದ ಒಂದು ಬಿಝಿನೆಸ್ ಇಟ್ಟುಕೊಂಡಿರುತ್ತಾರೆ. ಆದರೆ, ಈ ಕೋವಿಡ್ 19 ಎಫೆಕ್ಟ್ ಬಹುತೇಕ ಬಿಝಿ ನೆಸ್‌ಗಳನ್ನು ನುಂಗಿ ನೀರು ಕುಡಿದಿದೆ. ಬಿಝಿ ನೆಸ್ ನಂಬಿಕೊಂಡಿರುವವರು ತಲೆ ಮೇಲೆ ಕೈ ಹೊತ್ತು ಕೊಂಡು ಕೂರುವ ಪರಿಸ್ಥಿತಿ ಬಂದಿದೆ. ಕೈಯಲ್ಲಿ ಕಾಸು ಚಲಾವಣೆಯದರೆ ತಾನೇ ಪ್ಯಾಶನ್ ಪೂರೈ ಸೋದು. ಈ ಕಾರಣದಿಂದಾಗಿ ಸಿನಿಮಾ ನಿರ್ಮಾಣಕ್ಕೆ ಮುಂದಾದ ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ.
ಅದರಲ್ಲೂ ಹೊಸಬರ ಕಥೆ ಇಷ್ಟಪಟ್ಟು ಒಂದೆ ರಡು ತಿಂಗಳು ಬಿಟ್ಟು ಸಿನಿಮಾ ಶುರು ಮಾಡೋಣ ಎಂದು ಹೇಳಿದ್ದ ಹೊಸ ನಿರ್ಮಾಪಕರು, ಈಗ ಮುಂದೆ ನೋಡೋಣ, ಬಿಝಿನೆಸ್ ಸುಧಾರಿಸಲಿ ಎನ್ನುವಂತಾ ಗಿದೆ. ಹೀಗಾಗಿ ಕನಸು ಕಂಗಳೊಂದಿಗೆ ತಮ್ಮ ಸಿನಿಮಾ ಇನ್ನೇನು ಶುರುವಾಗಿಯೇ ಬಿಡ್ತು ಎಂದಿದ್ದ ಹುಮ್ಮಸ್ಸಿನ ಯುವಕರು ಕೂಡಾ ಕೋವಿಡ್ 19 ಎದುರು ಮಂಕಾಗಿದ್ದಾರೆ.
ಈ ಮೂಲಕ ಈ ವರ್ಷ ನಿರ್ಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ಕಾಣಲಿದೆ. ಈ ಮೂಲಕ ಚಿತ್ರರಂಗ ದಲ್ಲಿ ಚಟುವಟಿಕೆಗಳು ಕಡಿಮೆಯಾಗಲಿವೆ. ಹಾಗಂತ ಹೊಸಬರು ಆಶಾಭಾವ ಕಳೆದುಕೊಳ್ಳುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಿ ಮತ್ತೆ ಕನಸು ನನಸಾಗ ಬಹುದು, ತೆರೆಮೇಲೆ ದೃಶ್ಯ ರೂಪ ಪಡೆದುಕೊಳ್ಳಬಹುದು.