Advertisement
ಮಂಧನಾ ಜೀವನಶ್ರೇಷ್ಠ ಆಟ: ಭಾರತದ ಚೇಸಿಂಗ್ ವೇಳೆ ಎಡಗೈ ಆರಂಭಕಾರ್ತಿ ಸ್ಮತಿ ಮಂಧನಾ ಅಮೋಘ ಆಟವಾಡಿ 62 ಎಸೆತಗಳಿಂದ 86 ರನ್ ಬಾರಿಸಿ ಹೋರಾಟ ಜಾರಿಯಲ್ಲಿರಿಸಿದ್ದರು (12 ಬೌಂಡರಿ, 1 ಸಿಕ್ಸರ್). ಇದು ಅವರ ಜೀವನಶ್ರೇಷ್ಠ ಸಾಧನೆ. ಆದರೆ 16ನೇ ಓವರಿನಲ್ಲಿ 123 ರನ್ ಆದಾಗ ಮಂಧನಾ ಔಟಾಗುವುದರೊಂದಿಗೆ ನ್ಯೂಜಿಲೆಂಡ್ ಬೌಲರ್‌ಗಳು ನಿಯಂತ್ರಣ ಸಾಧಿಸತೊಡಗಿದರು. ಸರಣಿಯಲ್ಲಿ ಮೊದಲ ಸಲ ಆಡಿದ ಮಿಥಾಲಿ ರಾಜ್ (ಔಟಾಗದೆ 24) ಮತ್ತು ದೀಪ್ತಿ ಶರ್ಮ (ಔಟಾಗದೆ 21) ಅವರಿಗೆ ಒತ್ತಡ ನಿಭಾಯಿಸಲು ಸಾಧ್ಯವಾಗಲಿಲ್ಲ.
Related Articles
Advertisement
ರಾಮನ್‌ರನ್ನಾದರೂ ಸರಿಯಾಗಿ ನಡೆಸಿಕೊಳ್ಳಿ!
ನವದೆಹಲಿ: ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲೆರಡು ಟಿ20ಯಿಂದ ಕೈಬಿಡುವ ನಿರ್ಧಾರ ಮಾಡಿದ ಭಾರತ ಮಹಿಳಾ ತಂಡದ ನೂತನ ತರಬೇತುದಾರ ಡಬ್ಲ್ಯೂ.ವಿ.ರಾಮನ್‌ರನ್ನಾದರೂ ಸರಿಯಾಗಿ ನಡೆಸಿಕೊಳ್ಳಿ ಎಂದು ಪದಚ್ಯುತ ತರಬೇತುದಾರ ರಮೇಶ್ ಪೊವಾರ್ ತಿಳಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ)ಗೆ ಟಾಂಗ್ ಕೊಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಿಂದ ಫಾರ್ಮ್ನಲ್ಲಿದ್ದ ಮಿಥಾಲಿ ರಾಜ್‌ರನ್ನು ಹೊರಗಿಡಲಾಗಿತ್ತು. ಅದಾದ ನಂತರ ಭಾರೀ ವಿವಾದವೆದ್ದು ಪೊವಾರ್‌ರನ್ನು ಪದಚ್ಯುತಿ ಮಾಡಲಾಗಿತ್ತು.
‘ನ್ಯೂಜಿಲೆಂಡ್ ಸರಣಿಯ ಟಿ20 ಪಂದ್ಯದಲ್ಲಿ ಎರಡು ಪಂದ್ಯಗಳಿಂದ ಮಿಥಾಲಿಯನ್ನು ಹೊರಗಿಡಲಾಗಿತ್ತು. ಈ ಕಾರಣಕ್ಕಾಗಿ ರಾಮನ್ ತಲೆದಂಡ ಆಗಲ್ಲ ಎಂದು ನಂಬಿದ್ದೇನೆ. ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ವೇಳೆ ಎಲ್ಲವೂ ಸರಿ ಇತ್ತು. ಭಾರತಕ್ಕೆ ಬಂದ ಮೇಲೆಯೇ ನನಗೆ ಅದರ ಬಿಸಿ ತಟ್ಟಿದ್ದು. ಅಲ್ಲಿಂದ ಹೊರಡುವ ಮೊದಲು ಇಂತಹದೊಂದು ಹೈಡ್ರಾಮಾ ನಡೆಯಬಹುದು ಎಂದು ಊಹಿಸಿಯೇ ಇರಲಿಲ್ಲ. ನನ್ನ ಪರಿಸ್ಥಿತಿ ರಾಮನ್‌ರಿಗೆ ಬರಬಾರದು. ಇಂತಹ ಟೀಕೆಗಳು ಮತ್ತೆ ಮುಂದುವರಿದ್ದೇ ಆದರೆ ಅದನ್ನು ನಿಯಂತ್ರಣಕ್ಕೆ ತರುವುದು ತುಂಬಾ ಕಷ್ಟವಾಗಲಿದೆ. ಮಾತ್ರವಲ್ಲ ಪ್ರತಿ ಕೋಚ್‌ಗಳು ಬಂದಾಗಲೂ ಇಂತಹ ಸಮಸ್ಯೆ ಉದ್ಭವವಾಗುತ್ತಲೇ ಇರುತ್ತದೆ ಎಂದು ಪೊವಾರ್ ತಿಳಿಸಿದರು.
ಹಿನ್ನೆಲೆಯೇನು?: ಕಳೆದ ನವೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಮಿಥಾಲಿ ರಾಜ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಈ ನಿರ್ಧಾರವನ್ನು ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಸಮರ್ಥಿಸಿಕೊಂಡಿದ್ದರು. ಈ ಕೋಚ್ ಆಗಿದ್ದ ಪೊವಾರ್ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಸ್ವತಃ ಮಿಥಾಲಿ ತನ್ನನ್ನು ಕಾರಣವಿಲ್ಲದೆ ತಂಡದಿಂದ ಕೈಬಿಟ್ಟಿದ್ದಾರೆ ಎಂದು ಮಾಧ್ಯಮಗಳ ಎದುರು ಬೇಸರ ವ್ಯಕ್ತಪಡಿಸಿದ್ದರು. ಕೋಚ್ ವಿರುದ್ಧ ಹರಿಹಾಯ್ದಿದ್ದರು. ಇದರ ಬೆನ್ನಲ್ಲೇ ಪೊವಾರ್ ತರಬೇತುದಾರ ಸ್ಥಾನ ಕಳೆದುಕೊಂಡಿದ್ದರು.