ವೆಲ್ಲಿಂಗ್ಟನ್: ಕೋವಿಡ್ 19 ವೈರಸ್ ಇಡೀ ಜಗತ್ತನ್ನೇ ವ್ಯಾಪಿಸಿರುವ ಹೊತ್ತಿನಲ್ಲಿ ಅತ್ಯಂತ ಹೃದಯಸ್ಪರ್ಷಿ ಘಟನೆಗಳೆಲ್ಲಾ ವರದಿಯಾಗುತ್ತಿದೆ. ಅಂತಹದ್ದೊಂದು ಘಟನೆ ದೂರದ ನ್ಯೂಜಿಲ್ಯಾಂಡ್ ನಿಂದ ವರದಿಯಾಗಿದೆ.
ನ್ಯೂಜಿಲ್ಯಾಂಡ್ ನ ಮಾಜಿ ವೇಗದ ಬೌಲರ್ ಇಯಾನ್ ಒ ಬ್ರಿಯಾನ್ ತಮ್ಮ ಕುಟುಂಬವನ್ನು ಕೂಡಿಕೊಳ್ಳಲು ಇಂಗ್ಲೆಂಡ್ ಗೆ ಹೋಗಬೇಕಿತ್ತು. ಆದರೆ ಅವರಲ್ಲಿ ಟಿಕೆಟ್ ಗೆ ಕೊಡೂ ಹಣವಿಲ್ಲ.
ಅದಕ್ಕಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂಕಷ್ಟವನ್ನು ತೋಡಿಕೊಂಡು, ಸಾಧ್ಯವಾದಷ್ಟು ಹಣಕೊಡಿ ಎಂದು ಬೇಡಿಕೊಂಡರು. ಅವರ ಪರಿಸ್ಥಿತಿಗೆ ಕರಗಿದ ಜನ, ಕೂಡಲೇ ಹಣ ನೀಡಿದರು. ಇದರಿಂದಾಗಿ ಬ್ರಿಯಾನ್ ಇಂಗ್ಲೆಂಡ್ ಗೆ ವಿಮಾನದ ಟಿಕೆಟ್ ಖರೀದಿಸಿದರು.
ನಿಮ್ಮ ಪ್ರೀತಿಗೆ ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.
ಬ್ರಿಯಾನ್ ಕಿವೀಸ್ ಕ್ರಿಕೆಟಿಗರಾದರೂ ಅವರ ಪತ್ನಿ ಮನೆ ಇರುವುದು ಇಂಗ್ಲೆಂಡ್ ನಲ್ಲಿ. ಕೋವಿಡ್ 19 ಸೋಂಕಿನ ಕಾರಣದಿಂದ ಬ್ರಿಯಾನ್ ಪತ್ನಿ ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಿರಿಂದ ಕಂಗಾಲದ ಬ್ರಿಯಾನ್ ಕೂಡಲೇ ಇಂಗ್ಲೆಂಡ್ ಗೆ ಹೊರಟು ನಿಂತರೂ, ಮುರು ಬಾರಿ ವಿಮಾನ ರದ್ದಾಗಿದೆ. ಕಡೆಗೆ ಅವರು ಈ ದಾರಿ ಹಿಡಿಯುವಂತಾಗಿದೆ.