ಸಂಜೆ 7 ಗಂಟೆಯಿಂದ ಪರಮ ಪ್ರಸಾದದ ಆರಾಧನೆ ನಡೆಯಲಿದೆ. ಹಳೆ ವರ್ಷದಲ್ಲಿ ದೇವರು ನೀಡಿದ ಆಶೀರ್ವಾದಗಳಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ವಿವಿಧ ಅವಘಡಗಳಿಂದ ರಕ್ಷಿಸಿದ ಕರ್ತರಿಗೆ ಸ್ತುತಿಸ್ತೋತ್ರಗಳನ್ನು ಸಮರ್ಪಿಸುತ್ತಾರೆ. ಬಳಿಕ ಬಲಿಪೂಜೆ ನಡೆಯಲಿದ್ದು, ಈ ವೇಳೆ ವಿಶ್ವ ಶಾಂತಿಗಾಗಿ ವಿಶೇಷ ಪ್ರಾರ್ಥನೆ ನಡೆಯುತ್ತದೆ.
ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ| ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಬಿಷಪ್ಸ್ ಹೌಸ್ನಲ್ಲಿರುವ ಪ್ರಾರ್ಥನಾ ಕೇಂದ್ರದಲ್ಲಿ ಸಂಜೆ 6.30ರಿಂದ ಪರಮಪ್ರಸಾದದ ಆರಾಧನೆ ನೆರವೇರಿಸುವರು. 7.30ಕ್ಕೆ ಬಲಿಪೂಜೆ ನಡೆಸಲಿದ್ದಾರೆ.
Advertisement
ಧರ್ಮಪ್ರಾಂತತದ ಎಲ್ಲ ಇಗರ್ಜಿಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಹಾಗೂ ಹಳೆಯ ವರ್ಷಕ್ಕೆ ಕೃತಜ್ಞತಾ ಆರಾಧನೆ ಹಾಗೂ ಬಲಿಪೂಜೆಗಳು ನೆರವೇರಲಿವೆ. ಬಲಿಪೂಜೆಯ ಬಳಿಕ ಕ್ರೈಸ್ತರು ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.