ಬಳ್ಳಾರಿ: ಇಲ್ಲಿನ ರಾಘವ ಕಲಾಮಂದಿರದಲ್ಲಿ ಹೊಸ ವರ್ಷ 2022ರ ಅಂಗವಾಗಿ ಜಾನಪದ ಗೀತೆಗಳ ಗಾಯನ ಹಾಗೂ ಹಾಸ್ಯ ನಾಟಕ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಸಂಜೆ ಹಮ್ಮಿಕೊಳ್ಳಲಾಗಿದ್ದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಆಲಾಪ ಸಂಗೀತ ಕಲಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚೆನ್ನಪ್ಪ ಉದ್ಘಾಟಿಸಿದರು. ಕಸಪಾ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಕೋಟೇಶ್ವರ ರಾವ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಪ್ರಭುದೇವ , ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಾ| ಕೆ. ಹನುಮಂತಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ, ಮಹಾದೇವ ತಾತಾ ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳು, ಆಲಾಪ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ಯಮನಪ್ಪ ಭಜಂತ್ರಿ, ಕಾರ್ಯದರ್ಶಿ ಕೆ. ಸುರೇಶ ಇತರರಿದ್ದರು.
ಇದೇವೇಳೆ ರಾಜ್ಯೋತ್ಸವಪ್ರಶಸ್ತಿಪುರಸ್ಕೃತ, ಕಲಾವಿದರಮೇಶಗೌಡಪಾಟೀಲ್,ಜಾನಪದ ಕಲಾವಿದ ಚನ್ನದಾಸರ ಸಣ್ಣ ದುರ್ಗಪ್ಪ ಹಾಗೂ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯಗುರು ಕೆ.ಜಿ.ಆಂಜನೇಯಲು ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಜಡೇಶ್ ಎಮ್ಮಿಗನೂರು ಇವರಿಂದ ಜಾನಪದ ಗೀತೆಗಳ ಗಾಯನ ನಡೆಯಿತು. ನಂತರ ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು ಇವರಿಂದ ದಿ.ಶಿವಶಂಕರನಾಯ್ಡುರಚಿಸಿರುವ ಹಂದ್ಯಾಳ್ ಪುರುಷೋತ್ತಮ ನಿರ್ದೇಶನದ “ದನ ಕಾಯುವವರ ದೊಡ್ಡಾಟ’ ನಾಟಕ ನೆರೆದಿದ್ದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು.
ನಾಟಕದಲ್ಲಿ ಊರಿನ ಗೌಡನ ಪಾತ್ರದಲ್ಲಿ ರಮೇಶ್‌ಗೌಡ ಪಾಟೀಲ್, ಸಾರಥಿ- ಪುರುಷೋತ್ತಮ ಹಂದ್ಯಾಳ್, ಗಣೇಶ- ಚಂದ್ರಶೇಖರಾಚಾರ್, ದುಶ್ಯಾಸನ- ಪಾರ್ವತೀಶ್ ಗೆಣಿಕೆಹಾಳ್, ದುರ್ಯೋಧನ ಅಂಬರೀಶ್, ದ್ರೌಪದಿಯಾಗಿ ಮೌನೇಶ ಕಲ್ಲಳ್ಳಿ, ಕುಡುಕನ ಪಾತ್ರದಲ್ಲಿ- ಅಹಿರಾಜ, ಶಾಲೆಯ ಮಾಸ್ತರ್ ಪಾತ್ರದಲ್ಲಿ – ಜಡೇಶ್ ಎಮ್ಮಿಗನೂರು, ಭೀಮನ ಪಾತ್ರದಲ್ಲಿ-ರಾಮಚಂದ್ರ, ನಕುಲನಾಗಿ -ಹನುಮಂತಪ್ಪ, ಸಹದೇವನಾಗಿ- ಸೂರಜ್, ಕೃಷ್ಣನ ಪಾತ್ರದಲ್ಲಿ ಶಿಕ್ಷಕ ಎರಿಸ್ವಾಮಿ, ಸಂಚಾಲಕನಾಗಿ- ಎಚ್.ಜಿ. ಸುಂಕಪ್ಪ, ಅಗಸನ ಪಾತ್ರದಲ್ಲಿ ಲೇಪಾಕ್ಷಿಗೌಡ ನಟಿಸಿದರು. ಮƒದಂಗ ವೀರೇಶ್ ಶಿಡಿಗಿನಮೊಳ, ರಿದಂ ಪ್ಯಾಡ್ ಪಂಪಾಪತಿ, ಕ್ಯಾಸಿಯೋ ವೆಂಕಟೇಶ ಸಾಥ್ ನೀಡಿದರು.