Advertisement

ಮಹಿಳೆಯರಿಗೆ, ಮಕ್ಕಳಿಗೆ ಹೊಸ ಈಜು ಕೊಳ ನಿರ್ಮಾಣಕ್ಕೆ ಚಿಂತನೆ

02:05 AM Jul 14, 2017 | Team Udayavani |

ಮಹಾನಗರ: ನಗರದ ಲೇಡಿಹಿಲ್‌ ಸಮೀಪದ ಹ್ಯಾಟ್‌ಹಿಲ್‌ನ ಮಹಿಳಾ ವನದಲ್ಲಿ ಮಹಿಳೆಯರಿಗೆ ಹಾಗೂ ಕ್ರೀಡಾಪಟುಗಳಿಗೆ ಪೂರಕವಾಗುವ ಸುಸಜ್ಜಿತ ಹೊಸ ಈಜುಕೊಳವನ್ನು ತನ್ನ ಅವಧಿಯಲ್ಲಿ ಪ್ರಾರಂಭಿಸುವ ಚಿಂತನೆ ಇದೆ ಎಂದು ಮೇಯರ್‌ ಕವಿತಾ ಸನಿಲ್‌ ಹೇಳಿದರು. ಪೂನಾದಲ್ಲಿ ನಡೆದ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಷ್ಟ್ರೀಯ ದಾಖಲೆ ಮಾಡಿರುವ ಮಂಗಳಾ ಈಜು ಕ್ಲಬ್‌ನ ಎಸ್‌. ಆರ್‌. ರಚನಾ ರಾವ್‌ ಅವರಿಗೆ ನಗರದ ಕಾರ್ಪೊರೇಷನ್‌ ಈಜುಕೊಳದ ಸಭಾಂಗಣದಲ್ಲಿ  ನಡೆದ ಸಮ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ರಚನಾ ರಾವ್‌ ಅವರು ಒಂದು ಚಿನ್ನ, ಒಂದು ಬೆಳ್ಳಿ ಹಾಗೂ ಎರಡು ಕಂಚಿನ ಪದಕಗಳನ್ನು ಗಳಿಸಿದ್ದು, ಇನ್ನಷ್ಟು ಬಾಲಕಿಯರು ಉತ್ತಮ ಸಾಧನೆ ಮಾಡಿದಾಗ ಮಹಿಳಾ ಕ್ರೀಡಾಪಟುವಾಗಿರುವ ನನಗೆ ತುಂಬಾ ಹೆಮ್ಮೆ ಎನಿಸುತ್ತದೆ ಎಂದರು. ಪಾಲಿಕೆಯ ಮುಖ್ಯ ಸಚೇತಕ ಶಶಿಧರ್‌ ಹೆಗ್ಡೆ ಮಾತನಾಡಿ, ಪ್ರತಿಯೊಂದು ಯಶಸ್ವಿ  ಬಾಲಕಿಯರ ಹಿಂದೆ ಹೆತ್ತವರ ಪ್ರೋತ್ಸಾಹವಿರುತ್ತದೆ. ಹೆತ್ತವರು ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಯ ಸಂಚಾಲಕ ಕೃಷ್ಣಪ್ರಸಾದ್‌ ರೈ ಮಾತನಾಡಿ, ತಮ್ಮ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದ ಈ ಬಾಲಕಿಯರಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದೇವೆ ಹಾಗೂ ನಿರಂತರ ಆರ್ಥಿಕ ಸಹಾಯ ಮಾಡುತ್ತೇವೆ ಎಂದು ಹೇಳಿದರು. ಯುವ ಸಬಲೀಕರಣ ಜಿಲ್ಲಾ ಯುವಜನ ಕ್ರೀಡಾಧಿಕಾರಿ ಪ್ರದೀಪ್‌ ಡಿ’ಸೋಜಾ ಉಪಸ್ಥಿತರಿದ್ದರು.

ಸಾಧಕರಿಗೆ ಸಮ್ಮಾನ
ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಮಂಗಳಾ ಕ್ಲಬ್ಬಿನ ಸಾನ್ಯಾ ಡಿ. ಶೆಟ್ಟಿ, ಆರಾಧನಾ ಬೇಕಲ್‌ ಹಾಗೂ ರಾಜ್ಯ ಮಟ್ಟದಲ್ಲಿ ಪದಕ ವಿಜೇತ ಸ್ಮೃತಿ ಹಾಗೂ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಜೈಹಿಂದ್‌ ಈಜು ಕ್ಲಬ್‌ನ ಆಲಿಸ್ಟರ್‌  ಗೋ ಇವರನ್ನು ಮಂಗಳ ಈಜು ಕ್ಲಬ್‌ನ ವತಿಯಿಂದ ಸಮ್ಮಾನಿಸಲಾಯಿತು. ಕ್ಲಬ್‌ನ ಅಧ್ಯಕ್ಷ  ಪ್ರಮುಖ್‌ ರೈ ಸ್ವಾಗತಿಸಿದರು. ಮುಖ್ಯ ಈಜು ತರಬೇತುದಾರರಾದ ಲೋಕರಾಜ್‌ ವಿಟ್ಲ, ಕ್ಲಬ್‌ನ ಕಾರ್ಯದರ್ಶಿ ಶಿವಾನಂದ ಗಟ್ಟಿ, ಕ್ರೀಡಾಧಿಕಾರಿ ಲಿಲ್ಲಿ ಪಾçಸ್‌, ಈಜುಕೊಳದ ವ್ಯವಸ್ಥಾಪಕ ರಮೇಶ್‌ ಕುಮಾರ್‌ ಉಪಸ್ಥಿತರಿದ್ದರು. ಸಚಿತಾ ನಂದಗೋಪಾಲ ಕಾರ್ಯಕ್ರಮ ನಿರೂಪಿಸಿ, ರಾಧೇಶ್‌ ಶೆಣೈ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next