Advertisement

Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!

01:04 PM Nov 27, 2024 | Team Udayavani |

ಮುಂಬೈ: ವಾಣಿಜ್ಯ ಬಳಕೆಯ ನೂತನ ಶ್ರೇಣಿಯ ಎಲೆಕ್ಟ್ರಿಕ್ ದ್ವಿಚಕ್ರ ಸ್ಕೂಟರ್ ಓಲಾ ಗಿಗ್‌(Ola Gig Scooter) ಮಾರುಕಟ್ಟೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ. ಓಲಾ ಗಿಗ್‌ ದೊಡ್ಡದಾದ ಸಿಂಗಲ್‌ ಸೀಟ್‌ ಹಾಗೂ ಹಿಂಬದಿ ದೊಡ್ಡ ಕ್ಯಾರಿಯರ್‌ ಅನ್ನು ಹೊಂದಿದೆ.

Advertisement

ಓಲಾ ಗಿಗ್‌ ಸ್ಕೂಟರ್‌‌ ನಲ್ಲಿ ಎರಡೂ ಕಡೆ ಡ್ರಮ್‌ ಬ್ರೇಕ್ಸ್ ಬಳಸಬಹುದಾಗಿದೆ. ಓಲಾ ಗಿಗ್‌‌ ಎಲೆಕ್ಟ್ರಿಕ್ ಹೊಸ ಶ್ರೇಣಿಯು ಸಣ್ಣದಾದ 250 ವ್ಯಾಟ್‌ ಮೋಟಾರ್‌ ಹೊಂದಿದ್ದು, ಇದು ಗಂಟೆಗೆ ಟಾಪ್‌ ಸ್ಪೀಡ್‌ ಕೇವಲ 25 ಕಿಲೋ ಮೀಟರ್ ನಷ್ಟಿದೆ. ಅಂದರೆ ನೀವು ಓಲಾ ಗಿಗ್‌ ಸ್ಕೂಟರ್‌ ಅನ್ನು ರಿಜಿಸ್ಟರ್ಡ್‌ ಮಾಡದೇ ಬಳಸಬಹುದಾಗಿದೆ. ಓಲಾ ಗಿಗ್‌ ಅನ್ನು ಪ್ರಮುಖ ನಗರಗಳಲ್ಲಿ ಜನಪ್ರಿಯತೆ ಪಡೆದಿರುವ ಯೂಲೂ ಮಾಡೆಲ್ಸ್‌ ಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆ ಮಾಡಲು ಸಜ್ಜಾಗಿರುವುದಾಗಿ ವರದಿ ತಿಳಿಸಿದೆ.

ಇದರೊಂದಿಗೆ ಓಲಾ ಗಿಗ್‌+(Ola Gig+) ಹೆಚ್ಚು ಪವರ್‌ ಫುಲ್‌ ಆಗಿದ್ದು, 1.5 ಕಿಲೋ ವ್ಯಾಟ್‌ ಮೋಟಾರ್‌ ಹೊಂದಿದೆ. ಇದರ ಟಾಪ್‌ ಸ್ಪೀಡ್‌ ಗಂಟೆಗೆ 45 ಕಿಲೋ ಮೀಟರ್.‌ ಅದರೆ ಓಲಾ ಗಿಗ್‌ + ಓಡಿಸಲು ರಿಜಿಸ್ಟರ್ಡ್‌ ಮಾಡಬೇಕಾದ ಅಗತ್ಯವಿದೆ.

ಓಲಾ ಗಿಗ್‌ ಶೀಘ್ರವೇ ಚಾರ್ಜ್‌ ಆಗಲಿದೆ ಎಂದು ಕಂಪನಿ ತಿಳಿಸಿದೆ. ಆದರೆ ಎಷ್ಟು ಅವಧಿಯಲ್ಲಿ ಚಾರ್ಜ್‌ ಆಗಲಿದೆ ಎಂಬುದನ್ನು ನಿಖರವಾಗಿ ತಿಳಿಸಿಲ್ಲ. ನಿಜಕ್ಕೂ ಓಲಾ ಈವರೆಗೂ ಕೇವಲ ಡಿಜಿಟಲ್‌ ಮಾದರಿಯ ಫೋಟೋವನ್ನು ಬಿಡುಗಡೆಗೊಳಿಸಿದೆ ವಿನಃ, ಯಾವುದೇ ವೈಶಿಷ್ಟ್ಯಗಳನ್ನು ಬಹಿರಂಗಪಡಿಸಿಲ್ಲ.

Advertisement

2025ರ ಏಪ್ರಿಲ್‌ ಗೆ ಓಲಾ ಗಿಗ್‌ ಮಾರಾಟ ಪ್ರಾರಂಭ:

ಓಲಾ ಗಿಗ್‌ ಮತ್ತು ಓಲಾ ಗಿಗ್‌+ ಸ್ಕೂಟರ್‌ 2025ರ ಏಪ್ರಿಲ್‌ ನಿಂದ ಮಾರಾಟ ಪ್ರಾರಂಭವಾಗಲಿದೆ. ಓಲಾ ಗಿಗ್‌ ಆರಂಭಿಕ ಬೆಲೆ ಕೇವಲ 39,999 ರೂಪಾಯಿ ಹಾಗೂ ಓಲಾ ಗಿಗ್‌+ ಬೆಲೆ 49,999 ರೂಪಾಯಿ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next