Advertisement

ಕಿಚ್ಚನ ಜೊತೆ ಕಿರಗಂದೂರು ಸಿನಿಮಾ ? ನಾಳೆ ರಿವೀಲ್ ಆಗಲಿದೆ ಫಸ್ಟ್ ಲುಕ್

02:11 PM Aug 05, 2021 | Team Udayavani |

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳ ನಿರ್ಮಾಪಕ ಎನ್ನುವ ಹೆಗ್ಗಳಿಕೆಗೆ ಪಡೆದುಕೊಂಡಿರುವ ವಿಜಯ್ ಕಿರಂಗದೂರು ಅವರು ಇದೀಗ ಮತ್ತೊಂದು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

Advertisement

ವಿಜಯ್ ಕಿರಂಗದೂರ ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಡಿ ಇದೀಗ 11 ನೇ ಸಿನಿಮಾ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆದಿದ್ದು, ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ನಾಳೆ ( ಆ.6.) ಮುಂಜಾನೆ 11.46 ಕ್ಕೆ ಘೋಷಣೆಯಾಗಲಿದೆ.

ಈ ಬಗ್ಗೆ ಸೋಶಿಯಲ್​ ಮೀಡಿಯಾ ಮೂಲಕ ಸಡನ್​ ಆಗಿ ಸುದ್ದಿ ನೀಡಿರುವ ಹೊಂಬಾಳೆ, ಅದರಲ್ಲಿ ಬರೆದಿರುವ ‘ನಿನ್ನೊಳಗಿನ ಕಿಚ್ಚು ನಿಮ್ಮನ್ನು ಸುಡದಿರಲಿ’ ಎಂಬ ಒಂದು ಸಾಲು ಇದೀಗ ಕನ್ನಡ ಸಿನಿ ರಸಿಕರ ಕುತೂಹಲ ಹೆಚ್ಚಿಸಿದೆ.

ಕಿಚ್ಚನ ಜೊತೆ ಕಿರಂಗದೂರು ಸಿನಿಮಾ  ?

Advertisement

ಹೊಂಬಾಳೆ ಫಿಲ್ಮ್ಸ್ ಟ್ವಿಟ್ ಮಾಡಿರುವ ‘ನಿನ್ನೊಳಗಿನ ಕಿಚ್ಚು ನಿಮ್ಮನ್ನು ಸುಡದಿರಲಿ’ ಎನ್ನುವ ಸಾಲು ಕುತೂಹಲಕ್ಕೆ ಕಾರಣವಾಗಿದ್ದು, ‘ಕಿಚ್ಚು’ ಎಂಬ ಪದ ಈ ಪೋಸ್ಟರ್​ನಲ್ಲಿ ಹೈಲೈಟ್​ ಆಗಿರುವುದರಿಂದ ಕಿಚ್ಚ ಸುದೀಪ್​ ಜೊತೆ ‘ಹೊಂಬಾಳೆ ಫಿಲ್ಮ್ಸ್’ ಕೈ ಜೋಡಿಸಲಿದೆಯಾ ಎಂಬ ಅನುಮಾನ ಬಲವಾಗಿದೆ. ಈ ಬಗ್ಗೆ ಶುಕ್ರವಾರ ಬೆಳಗ್ಗೆ 11.43ಕ್ಕೆ ಉತ್ತರ ಸಿಗಲಿದೆ.

ಇನ್ನು ಸದ್ಯಕ್ಕೆ ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 2’, ಪ್ರಭಾಸ್​ ನಟನೆಯ ‘ಸಲಾರ್​’ , ಪುನೀತ್ ರಾಜಕುಮಾರ್ ಅವರ ದ್ವಿತ್ವ ಹಾಗೂ ರಕ್ಷಿತ್ ಶೆಟ್ಟಿ ಅವರ ರಿಚರ್ಡ್ ಆಂಟಿನಿ ಸಿನಿಮಾಗಳು ಹೊಂಬಾಳೆ ಬ್ಯಾನರ್ ನಲ್ಲಿ ಸಿದ್ದವಾಗುತ್ತಿವೆ. ಇದೀಗ 11 ನೇ ಸಿನಿಮಾ ಕುರಿತು ಮಾಹಿತಿ ನಾಳೆ ರಿವೀಲ್ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next