Advertisement

ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ: ರಾಜುಗೌಡ

01:04 PM Jan 05, 2021 | Team Udayavani |

ಸುರಪುರ: ಗ್ರಾಪಂಗಳ ನೂತನ ಸದಸ್ಯರು ತಮ್ಮ ಹಿತಾಸಕ್ತಿ ಬದಿಗಟ್ಟು ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ನರಸಿಂಹ ನಾಯಕ ರಾಜುಗೌಡ ಕರೆ ನೀಡಿದರು.

Advertisement

ತಾಲೂಕಿನ ಬೈರಿಮಡ್ಡಿ ಗ್ರಾಮದಲ್ಲಿ ನೂತನ ಗ್ರಾಪಂ ಸದಸ್ಯರಿಗೆ ಏರ್ಪಡಿಸಿದ್ದ ಸನ್ಮಾನಸಮಾರಂಭದಲ್ಲಿ ಅವರು ಮಾತನಾಡಿ, ಜನಸೇವೆ ಮಾಡಲು ನಿಮಗೆ ಇದೊಂದು ಸುವರ್ಣ ಅವಕಾಶ ದೊರಕಿದೆ. ಈ ಅವಕಾಶವನ್ನು ಬಳಸಿಕೊಂಡುಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಬೇಕು ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯ ಎಚ್‌.ಸಿ. ಪಾಟೀಲಮಾತನಾಡಿ, ಶಾಸಕರು ಸಾಕಷ್ಟು ಕಷ್ಟಪಟ್ಟು ಅನುದಾನ ತರುತ್ತಿದ್ದಾರೆ. ಸದಸ್ಯರು ಅದರ ಸದ್ಬಳಕೆಮಾಡಿಕೊಳ್ಳಬೇಕು. ತಾರತಮ್ಯ, ಪಕ್ಷಪಾತ ಬಿಟ್ಟುಜನರಿಗೆ ಒಳ್ಳೆ ಆಡಳಿತ ಕೊಡಿ. ಮೂಲಭೂತಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿ.ನಿಮ್ಮ-ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಿ. ನಿಮ್ಮ ಪ್ರಾಮಾಣಿಕ ಸೇವೆಯಿಂದ ಗ್ರಾಮಗಳಅಭಿವೃದ್ಧಿ ಸಾಧ್ಯ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಗ್ರಾಪಂ ನೂತನ ಸದಸ್ಯರಿಗೆ ಶಾಸಕರು ಶಾಲು ಹೊದಿಸಿ ಅಭಿನಂದಿಸಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ ತಾತಾ, ಮುಖಂಡರಾದ ಡಾ| ಬಿ.ಎಂ. ಹಳ್ಳಿ ಕೋಟಿ, ಬಲಭೀಮ ನಾಯ ಬೈರಿಮಡ್ಡಿ, ಶಂಕರ ನಾಯಕ,ಶರಣು ನಾಯಕ, ರವಿ ನಾಯಕ ಸೇರಿದಂತೆ ಪಕ್ಷದಇತರೆ ಮುಖಂಡರು ಇದ್ದರು. ವೆಂಕಟೇಶ ನಾಯಕ ಸ್ವಾಗತಿಸಿದರು. ಮಲ್ಲಿಕಾರ್ಜುನ ರೆಡ್ಡಿ ನಿರೂಪಿಸಿ, ವಂದಿಸಿದರು.

ಕನ್ನಡ ನಾಡು-ಭಾಷೆ ಉಳಿವಿಗೆ ಶ್ರಮಿಸಲು ಕರೆ :

Advertisement

ಯಾದಗಿರಿ: ನಾಡು ನುಡಿ, ಜಲ ರಕ್ಷಣೆ ಪ್ರತಿಯೊಬ್ಬ ಪ್ರಜೆಯು ಶ್ರಮಿಸಬೇಕು ಎಂದು ಶಾಂತಗೌಡ ಪಗಲಾಪೂರ ಹೇಳಿದರು.

ನಗರದ ನಗರದ ಮಾತೆ ಮಾಣಿಕೇಶ್ವರಿ ನಗರದಲ್ಲಿ ಆಂಜನೇಯ ದೇವಸ್ಥಾನ ಹತ್ತಿರ ಹಮ್ಮಿಕೊಂಡಿದ್ದ  ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ 11ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು,ರಾಜ್ಯದ ಗಡಿ ಭಾಗದಲ್ಲಿ ಬೇರೆ ರಾಜ್ಯದವರು ನಮ್ಮ ನಾಡಿನಸಂಪತ್ತು ಕುರಿತು ಕ್ಯಾತೆ ತೆಗೆದಾಗ ಕನ್ನಡಪರ ಸಂಘಟನೆಗಳು ಹೋರಾಟಗಳ ಪಾತ್ರ ಮರೆಯಲಾಗದು. ಕನ್ನಡಪರಸಂಘಟನೆಗಳ ನ್ಯಾಯಯುತವಾದ ಹೋರಾಟಕ್ಕೆ ನಾವೆಲ್ಲರೂ ಬೆಂಬಲಿಸಬೇಕೆಂದು ಕರೆ ನೀಡಿದರು.

ಇಂದಿನ ದಿನಗಳಲ್ಲಿ ಗಲ್ಲಿಗಲ್ಲಿಯಲ್ಲಿ ಕೇವಲ ತೋರಿಕೆಗೆ ಸಂಘಟನೆಗಳು ನಾಯಿಕೊಡಗಳಂತೆ ಉಟ್ಟಿಕೊಂಡುಪ್ರಚಾರಕ್ಕೆ ಸೀಮಿತವಾಗಿವೆ. ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಜಿಲ್ಲೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದಹೋರಾಟಗಳನ್ನು ಹಮ್ಮಿಕೊಳ್ಳುವುದರ ಮೂಲಕ ಇತರೆ ಸಂಘಟನೆಗಳಿಗೆ ಮಾದರಿಯಾಗಿದ್ದು, ಶ್ಲಾಘನೀಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿ ಬಸವರಾಜ ಹೆಡಗಿಮದ್ರಾ ಮಾತನಾಡಿದರು. ಜಿಲಾಧ್ಯಕ್ಷ ರಾಜಶೇಖರ ಎದುರುಮನಿ ಅಧ್ಯಕ್ಷತೆ ವಹಿಸಿದ್ದರು. ದೇವಪುತ್ರಪ್ಪಮಾಳಿಕೇರಿ, ರಾಮಣ್ಣ ಗುಂಡಳ್ಳಿಕರ್‌, ಸಂಘಟನೆಯ ಪದಾಧಿಕಾರಿಗಳಾದ ಅರವಿಂದ ಗುಂಡಳ್ಳಿಕರ್‌, ನಿರಂಜನ, ಖುದ್ದುಸ್‌, ಮರೆಪ್ಪ ರಾಮದಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next