ಕುದೂರು: ಮುಂದಿನ ದಿನಗಳಲ್ಲಿ ಕುದೂರು ಗ್ರಾಪಂ ಅನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಎಂದು ಮಾಗಡಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಜಿ.ರಂಗಧಾಮಯ್ಯ ಹೇಳಿದರು.
ಗ್ರಾಮದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಗಡಿತಾಲೂಕನ್ನು ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಕೆಲಸ ಮಾಡಲಾಗಿದೆ. ಗ್ರಾಮದ ಶ್ರೀರಾಮಲೀಲಾ ಮೈದಾನದ ಅಭಿವೃದ್ಧಿಗೆ 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು.
ಕೆರೆಗಳ ಅಭಿವೃದ್ಧಿಗೆ ಆದ್ಯತೆ:ತಾಲೂಕಿನ ಎಲ್ಲಾ ಕೆರೆಗಳ ಅಭಿವೃದ್ಧಿಗೆಆದ್ಯತೆ ನೀಡಲಾಗಿದೆ. ಪ್ರಾಧಿಕಾರದಿಂದಲಕ್ಷಾಂತರ ಹಣವನ್ನು ತಾಲೂಕಿನ ವಿವಿಧಕಾಮಗಾರಿಗಳಿಗೆ ಅನುದಾನಬಿಡುಗಡೆಯಾಗಿದ್ದರೂ, ಕಾಮಗಾರಿ ಸ್ಥಳದಲ್ಲಿ ಪ್ರಾಧಿಕಾರದ ನಾಮಫಲಕ ಹಾಕಿಲ್ಲ. ಇದರಿಂದಪ್ರಾಧಿಕಾರದ ಅಭಿವೃದ್ಧಿ ಕಾರ್ಯಗಳು ಜನರಿಗೆಗೊತ್ತಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯ ಗಿರೀಶ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಗ್ರಾಪಂನಲ್ಲಿ ಭ್ರಷ್ಟಾಚಾರದಿಂದ ಕೂಡಿದ್ದು, ಅಭಿವೃದ್ಧಿ ಮರಿಚಿಕೆಯಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಿ,ಗ್ರಾಮದ ಪ್ರಗತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾಪಂ ಸದಸ್ಯ ಕೆ.ಟಿ.ವೆಂಕಟೇಶ್‌ಮಾತನಾಡಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿಸದಸ್ಯರಾದ ಅನಂತನಾರಾಯಣ,ಕೆ.ಟಿ.ವೆಂಕಟೇಶ್, ಗಿರೀಶ್, ಭಾಗ್ಯಮ್ಮಚಿಕ್ಕರಾಜು, ನಿರ್ಮಲ ಹಾಗೂ ಚೌಡಿಬೇಗೂರುಭಾಗ್ಯ ಅವರನ್ನು ಅಭಿನಂದಿಸಲಾಯಿತು.ಕುದೂರು ಹೋಬಳಿ ಬಿಜೆಪಿ ಅಧ್ಯಕನಾಗರಾಜು. ಯುವ ಘಟಕದ ಅಧ್ಯಕ್ಷ ಹೇಮಂತ್ ಕುಮಾರ್ ಹಾಜರಿದ್ದರು.