Advertisement

ಹಾನಿಯಾದರೆ ಪರಿಹಾರ

10:53 AM Sep 24, 2018 | Karthik A |

ಹೊಸದಿಲ್ಲಿ: ವೈದ್ಯಕೀಯ ಉಪಕರಣದಿಂದ ರೋಗಿಗೆ ಹಾನಿಯಾದರೆ ಪರಿಹಾರವನ್ನು ವೈದ್ಯಕೀಯ ಸಾಧನ ತಯಾರಿಕೆ ಕಂಪೆನಿಯೇ ನೀಡಬೇಕು ಎಂಬ ನಿಯಮವನ್ನು ಕೇಂದ್ರ ಸರಕಾರ ಯೋಜಿಸುತ್ತಿದೆ. ಇತ್ತೀಚೆಗೆ ಜಾನ್ಸನ್‌ ಆ್ಯಂಡ್‌ ಜಾನ್ಸನ್‌ ಕಂಪೆನಿ ತಯಾರಿಸಿದ ಉಪಕರಣ ದೋಷಯುಕ್ತವಾದ್ದರಿಂದ ಈ ಸಾಧನ ಬಳಸಿದ ರೋಗಿಗಳಿಗೆ ಸಮಸ್ಯೆ ಉಂಟಾಗಿತ್ತು. ಈ ಬಗ್ಗೆ ಹಲವು ರೋಗಿಗಳು ದೂರಿದ್ದರು. ಈ ಹಿನ್ನೆಲೆಯಲ್ಲಿ ಸರಕಾರವು ಉನ್ನತ ಮಟ್ಟದ ಸಮಿತಿ ರಚಿಸಿದ್ದು, ಪರಿಹಾರದ ಪ್ರಮಾಣ ಗುರುತಿಸುವಂತೆ ಸೂಚಿಸಿದೆ. ವೈದ್ಯಕೀಯ ಸಾಧನಗಳ ನಿಯಮ 2017ರ ಪ್ರಕಾರ ವೈದ್ಯಕೀಯ ಸಾಧನದಿಂದಾಗಿ ಗಾಯ ಉಂಟಾದರೆ, ಅಸುರಕ್ಷಿತವಾಗಿದ್ದರೆ, ದೋಷಯುಕ್ತವಾಗಿದ್ದರೆ ಅಥವಾ ಲೈಸೆನ್ಸ್‌ ನಿಯಮಗಳಿಗೆ ಸಲಕರಣೆ ಬದ್ಧವಾಗಿಲ್ಲದಿದ್ದರೆ ಪರಿಹಾರ ನೀಡಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next