Advertisement
ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರರ ಜನ್ಮಶತಾಬ್ದಿ ನೆನಪಿಗಾಗಿ ನಿರ್ಮಿಸಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬೆಳಕು ಮತ್ತು ಧ್ವನಿ ವ್ಯವಸ್ಥೆ ಇಲ್ಲದೆ, ಪ್ರದರ್ಶನಗೊಳ್ಳುವ ನಾಟಕಗಳ ಸಂಖ್ಯೆ ಕಡಿಮೆಯಾಗಿದೆ ಎಂಬ ದೂರು ವ್ಯಾಪಕವಾಗಿತ್ತು. ಕಲಾಕ್ಷೇತ್ರ, ಒಬಿರಾಯನ ಕಾಲದ ವೈರಿಂಗ್, ಬೆಳಕು ಮತ್ತು ಧ್ವನಿ ವ್ಯವಸ್ಥೆಯಲ್ಲೇ ಮುಂದುವರಿಯುತ್ತಿರುವ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿತ್ತು.
Related Articles
Advertisement
8 ಎಲ್‌ಇಡಿ ಸೈಕ್ಲೋರಾಮ ಲೈಟ್ಸ್, 30 ಪಾರ್‌ಲೈಟ್ಸ್, 1 ಕೆ.ವಿಯ 16 ಫ್ರೆನ್ಸೆಲ್ ಲೈಟ್ಸ್, 750 ವ್ಯಾಟ್‌ನ 14 ಎಲ್‌ಇಡಿ ಪ್ರೊಫೈಲ್, 1 ಕೆ.ವಿಯ 30 ಪ್ಲೇನ್ ಮತ್ತು ಕಾನ್ವೆಕ್ಸ್ ಸ್ಪಾಟ್‌ಲೆçಟ್ ಮತ್ತು 2 ಕೆ.ವಿಯ 8 ಸೋಲಾರ್ ಲೈಟ್‌ಗಳನ್ನು ಕಲಾಕ್ಷೇತ್ರದೊಳಗೆ ಅಳವಡಿಸಿದ್ದು, ರಂಗ ತಂಡಗಳು ತಮ್ಮ ಪ್ರದರ್ಶನಕ್ಕೆ ತಕ್ಕಂತೆ ಲೈಟ್‌ಗಳನ್ನು ಬಳಸಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ತಿಳಿಸಿದ್ದಾರೆ.
ಲೈಟಿಂಗ್‌ಗೆಂದೇ 128 ಪಾಯಿಂಟ್‌ಗಳನ್ನು ನೀಡಲಾಗಿದೆ. ಈಗಗಾಲೇ 104 ಲೈಟ್‌ಗಳ ಅಳವಡಿಕೆ ಪೂರ್ಣಗೊಂಡಿದ್ದು, ಎಲ್ಲ 104 ಲೈಟ್‌ಗಳನ್ನು ಪ್ರದರ್ಶನದ ವೇಳೆ ನೀಡಲಾಗುತ್ತಿದೆ. ನಾಡಿನ ರಂಗ ತಂಡಗಳು ಉತ್ತಮ ರಂಗ ಪ್ರಯೋಗ ನೀಡಲು ಈಗ ಕಲಾಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದೆ ಅನ್ನುತ್ತಾರೆ ಹಿರಿಯ ರಂಗ ನಿರ್ದೇಶಕ ಬಿ.ವಿ.ರಾಜಾರಾಂ.
ಈ ಮಧ್ಯೆ, ಕಲಾಕ್ಷೇತ್ರದ ಧ್ವನಿ-ಬೆಳಕಿನ ನವೀಕರಣ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲು ಕರ್ನಾಟಕ ನಾಟಕ ಅಕಾಡೆಮಿ ಮತ್ತು ಕನ್ನಡ ಮತು ಸಂಸ್ಕೃತಿ ಇಲಾಖೆ ಏ.2ರಿಂದ 10ರವರೆಗೆ ನಾಡಿನ ವಿವಿಧ ರಂಗ ತಂಡಗಳಿಂದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ರಂಗೋತ್ಸವವನ್ನು ಹಮ್ಮಿಕೊಂಡಿದೆ. ಕಲಾಸಕ್ತರಿಗೆ ಉಚಿತ ಪ್ರವೇಶವಿದೆ.
ಸರ್ಕಾರ ಕೋಟ್ಯಂತರ ರೂ. ವೆಚ್ಚಮಾಡಿ ಆಧುನಿಕರಣ ಮಾಡುತ್ತದೆ. ಆದರೆ, ಅದರ ನಿರ್ವಹಣೆ ಸಮರ್ಪಕವಾಗಿರುತ್ತಿರಲಿಲ್ಲ. ಆಧುನಿಕ ಸಲಕರಣೆ ಅಳವಡಿಸಿದ ಮಾತ್ರಕ್ಕೆ ಆಧುನೀಕರಣವಾಗುವುದಿಲ್ಲ. ಅದರ ನಿರ್ವಹಣೆಯೂ ಸುಧಾರಣೆಯಾಗಬೇಕು. ಅದಕ್ಕಾಗಿ ತರಬೇತಿ ಅಗತ್ಯ.-ಶ್ರೀನಿವಾಸ್ ಜಿ. ಕಪ್ಪಣ್ಣ, ಹಿರಿಯ ರಂಗತಜ್ಞ ತಜ್ಞರ ಶಿಫಾರಸಿನ ಮೇರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬೆಳಕು ಮತ್ತು ಧ್ವನಿ ವ್ಯವಸ್ಥೆಯ ಡಿಜಿಟಲೀಕರಣ ಮಾಡಲಾಗಿದೆ. ಇಲ್ಲಿ ಎಲ್ಲವನ್ನೂ ಕಂಪ್ಯೂಟರ್ ನಿಯಂತ್ರಿಸಲಿದೆ. ನಾವೀಗ ಈ ಆಧುನಿಕ ವ್ಯವಸ್ಥೆಗೆ ಒಗ್ಗಿಕೊಳ್ಳಬೇಕಾಗಿದೆ.
-ಜೆ.ಲೋಕೇಶ್, ನಾಟಕ ಅಕಾಡೆಮಿ ಅಧ್ಯಕ್ಷ ಕಲಾಕ್ಷೇತ್ರದಲ್ಲಿ ಲೈಟಿಂಗ್ ವ್ಯವಸ್ಥೆ ಆಗಾಗ್ಗೆ ಕೈ ಕೊಡುತ್ತಿತ್ತು. ಈಗ ಡಿಜಿಟಲ್ ಟಚ್ ನೀಡಲಾಗಿದೆ. ರಂಗಭೂಮಿ ಬೆಳೆವಣಿಗೆಯ ದೃಷ್ಟಿಯಿಂದ ಇದೊಂದು ಒಳ್ಳೆಯ ಕೆಲಸ. ಲೈಟ್ಸ್, ಸೌಂಡ್ ನಿರ್ವಹಣೆ ಹೊಣೆಯನ್ನು ಅರ್ಹರಿಗೆ ವಹಿಸಬೇಕು. ಕೈಕೊಡುವ ಬಲ್ಬ್ಗಳನ್ನು ತಕ್ಷಣ ಬದಲಿಸಬೇಕು.
-ಮೈಕೋ ಶಿವಶಂಕರ್, ರಂಗಕರ್ಮಿ ಈ ಮೊದಲು ಕಲಾಕ್ಷೇತ್ರದಲ್ಲಿ ಸೌಂಡ್ ಸಿಸ್ಟಂಮ್ ಹದಗೆಟ್ಟು, ಧ್ವನಿ ಸರಿಯಾಗಿ ಕೇಳುತ್ತಿರಲಿಲ್ಲ. ಈಗ ಅಂತಹ ತೊಂದರೆ ಇಲ್ಲ. ನಾಡಿನ ರಂಗಭೂಮಿ ತಂಡಗಳು ಕಲಾಕ್ಷೇತ್ರವನ್ನು ಹೆಚ್ಚು ಬಳಸಿಕೊಳ್ಳಲಿ.
-ಮಹಾಬಲೇಶ್ವರ ಸುಳ್ಳೂರು, ರಂಗ ನಿರ್ದೇಶಕ * ದೇವೇಶ ಸೂರುಗುಪ್ಪ