Advertisement

ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಜಾರಿ: ಸಂತೆ ಮಾರುಕಟ್ಟೆ ಸಂಪೂರ್ಣ ಬಂದ್

11:01 PM May 01, 2021 | Team Udayavani |

ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ  ಮಾರುಕಟ್ಟೆಗಳಲ್ಲಿ ನೂಕು ನುಗ್ಗಲನ್ನು ತಪ್ಪಿಸುವ ಸಲುವಾಗಿ ರಾಜ್ಯಸರ್ಕಾರ ಹೊಸ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ.

Advertisement

ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳಿಗ್ಗೆ 6 ರಿಂದ 10 ರ ವರೆಗೆ ಮಾತ್ರ ರೈತರು ತಾವು ಬೆಳೆದ ಹಣ್ಣು ತರಕಾರಿಗಳನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರಿಂದ ಎಲ್ಲ ಉತ್ಪನ್ನ ಮಾರಾಟ ಮಾಡಲಾಗದೆ ರೈತರು ಸಮಸ್ಯೆಗೆ ಸಿಲುಕಿದ್ದು, ಈ ಕುರಿತಾಗಿ ಸರ್ಕಾರದ ನಿಯಮದಿಂದ ರೈತರಿಗೆ ಸಮಸ್ಯೆ ಆಗುತ್ತಿರುವ ಬಗ್ಗೆ  ಉದಯವಾಣಿ ಶನಿವಾರ ವರದಿ ಪ್ರಕಟಿಸಿತ್ತು.  ಇದೀಗ ಬೆಳಿಗ್ಗೆ 6 ರಿಂದ ಸಂಜೆ 6 ರ ವರೆಗೆ ಹಣ್ಣು ತರಕಾರಿಗಳನ್ನು ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಹೊಸ ಮಾರ್ಗಸೂಚಿ ಅನ್ವಯ  ಸಂತೆ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿದ್ದು, ಈ ಮಾರ್ಗಸೂಚಿ ರಾಜ್ಯಾದ್ಯಂತ ನಾಳೆಯಿಂದಲೇ ಜಾರಿಗೆ ಬರಲಿದೆ.

ಹೊಸ ಮಾರ್ಗಸೂಚಿಯಲ್ಲಿ ಹಾಪ್ ಕಾಮ್ಸ್, ಎಲ್ಲಾ ಹಾಲಿನ ಬೂತುಗಳು ತಳ್ಳುಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಬೆಳಿಗ್ಗೆ ಆರು ಗಂಟೆ ಯಿಂದ ಸಂಜೆ ಆರು ಗಂಟೆಯ ವರೆಗೆ ಮಾರಾಟ ಮಾಡಬಹುದಾಗಿದೆ.

ಇದನ್ನೂ ಓದಿ:ಕಾಲೇಜುಗಳಲ್ಲೇ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಹೆಚ್ಚಿದ ಬೇಡಿಕೆ

Advertisement

ಎಪಿಎಮ್ ಸಿ ಹಾಗೂ ದಿನಸಿ ಅಂಗಡಿಗಳ ವ್ಯಾಪಾರದ ಸಮಯದಲ್ಲೂ ಬದಲಾವಣೆ ಮಾಡಿದ್ದು,  ಹೊಸ ಮಾರ್ಗಸೂಚಿಯಲ್ಲಿ ಬೆಳ್ಳಿಗ್ಗೆ 6 ರಿಂದ  ಮಧ್ಯಾಹ್ನ 12 ಗಂಟೆಯ ವರೆಗೆ ವ್ಯಾಪಾರ ಮಾಡಲು  ಅವಕಾಶ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next